»   » ತನ್ನ ಬಳಿ ಕೆಲಸ ಮಾಡುವವರಿಗೆ ಅನುಷ್ಕಾ ಭರ್ಜರಿ ಗಿಫ್ಟ್

ತನ್ನ ಬಳಿ ಕೆಲಸ ಮಾಡುವವರಿಗೆ ಅನುಷ್ಕಾ ಭರ್ಜರಿ ಗಿಫ್ಟ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ತೆಲುಗು, ತಮಿಳಿನಲ್ಲಿ ಮಿಂಚುತ್ತಿರುವ ಬೆಂಗಳೂರು ಮೂಲದ ತಾರೆ ಅನುಷ್ಕಾ ಶೆಟ್ಟಿ ಅವರು ಇತ್ತೀಚೆಗೆ ಹೈದರಾಬಾದಿನಲ್ಲಿ ಭೂ ಖರೀದಿ ಮಾಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಅಸಲಿ ವಿಷಯ ಬೇರೆಯೇ ಇದೆ ಗೊತ್ತಾ.

  ಅನುಷ್ಕಾ ಶೆಟ್ಟಿ ಭೂ ಖರೀದಿಸಿರುವುದು ವಾಸ್ತವವಾದರೂ ಅದು ತನಗಾಗಿ ಅಲ್ಲವೇ ಅಲ್ಲ. ತನ್ನ ಬಳಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗಾಗಿ. ಅವರಿಗೆ ಸೂರು ಕಲ್ಪಿಸಿಕೊಡಲು ಅನುಷ್ಕಾ ಶೆಟ್ಟಿ ಮುಂದಾಗಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?]

  ಈ ಮೂಲಕ ಅನುಷ್ಕಾ ಶೆಟ್ಟಿ ಕೇವಲ ಅಂದಗಾತಿ ಅಷ್ಟೇ ಅಲ್ಲ, ಅಷ್ಟೇ ಅಂದವಾದ ಮನಸ್ಸುಳ್ಳವರೂ ಎಂಬುದು ಸ್ಪಷ್ಟವಾಗುತ್ತದೆ. ತೀರಾ ಇತ್ತೀಚೆಗೆ ತಮಿಳು ನಟ ಅಜಿತ್ ಸಹ ತನ್ನ ಬಳಿ ಕೆಲಸ ಮಾಡುವ ಡ್ರೈವರ್ ನಿಂದ ಹಿಡಿದು ವನಮಾಲಿವರೆಗೂ ಎಲ್ಲರಿಗೂ ಚೆನ್ನೈನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಅದೇ ಹಾದಿಯಲಿ ಅನುಷ್ಕಾ ಹೆಜ್ಜೆ ಹಾಕಿರುವುದು ಸ್ಪೆಷಲ್.

  Anushka Shetty

  ಸದ್ಯಕ್ಕೆ ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಬಲು ಬೇಡಿಕೆಯುಳ್ಳ ತಾರೆ. ರಾಜಮೌಳಿ ಅವರ 'ಬಾಹುಬಲಿ' ಚಿತ್ರ ಹಾಗೂ 'ರುದ್ರಮ ದೇವಿ' ಎಂಬ ಐತಿಹಾಸಿಕ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಅನುಷ್ಕಾ. ಈ ಎರಡೂ ಭಾರಿ ಬಜೆಟ್ ಚಿತ್ರಗಳಾಗಿದ್ದು ದಕ್ಷಿಣ ಚಿತ್ರರಂಗ ನಿರೀಕ್ಷಿಸುವಂತೆ ಮಾಡಿವೆ.

  ಅನುಷ್ಕಾ ಶೆಟ್ಟಿ ಕನ್ನಡ ಕುವರನ ಕೈಹಿಡಿಯುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಮದುವೆ ತಯಾರಿಯಲ್ಲಿರುವ ಅನುಷ್ಕಾ ಶೆಟ್ಟಿಯನ್ನ ಕೈಹಿಡಿಯುತ್ತಿರುವ ಗಂಡು 'ಕನ್ನಡಿಗ'. ಅದ್ರರಲ್ಲೂ ಬೆಂಗಳೂರಲ್ಲೇ ನೆಲೆಸಿರುವ ಪ್ರಖ್ಯಾತ ಉದ್ಯಮಿ. ಇಷ್ಟನ್ನ ಬಿಟ್ರೆ, ಆ ಉದ್ಯಮಿಯ ಪೂರ್ವಾಪರ ಇನ್ನೂ ಗುಟ್ಟಾಗಿದೆ.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ 'ಜಗ್ಗು ದಾದಾ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿಯನ್ನು ಕನ್ನಡಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ. ನವ ಪ್ರತಿಭೆ ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. (ಏಜೆನ್ಸೀಸ್)

  English summary
  Popular Telugu heroine Anushka Shetty is now following the footsteps of her latest co-start, the white haired superstar 'thala' Ajith. Both these lead actors are going to entertain audiences very soon with their "Yennai Arindhaal" that is going to hit screens in February. As the get ready to rock, here comes how our heroine took a clue from her onscreen hero.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more