For Quick Alerts
  ALLOW NOTIFICATIONS  
  For Daily Alerts

  'ನಿಶ್ಯಬ್ದಂ ಇಷ್ಟ ಆಗಿಲ್ಲ' ಎಂದ ಅಭಿಮಾನಿಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?

  |

  ಪ್ರೇಕ್ಷಕರ ಅಭಿಪ್ರಾಯವನ್ನು ಸಮಾನವಾಗಿ ಸ್ವೀಕರಿಸುವ ಕಲಾವಿದರು ಬಹಳ ಕಡಿಮೆ. ಪಾಟಿಸಿವ್ ವಿಮರ್ಶೆ ಬಂದಾಗ ಖುಷಿ ಪಡುವ ಸ್ಟಾರ್‌ಗಳು ಸಿನಿಮಾ ಚೆನ್ನಾಗಿಲ್ಲ ಎಂಬ ವಿಮರ್ಶೆ ಬಂದಾಗ ಅದನ್ನು ಸ್ವೀಕರಿಸುವ ರೀತಿನೇ ಬೇರೆ.

  ಈ ವಿಚಾರದಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ಮೆಚ್ಚಲೇಬೇಕು. ಕಳೆದ ವಾರವಷ್ಟೇ ಅನುಷ್ಕಾ ಶೆಟ್ಟಿ ಮತ್ತು ಮಾಧವನ್ ನಟನೆಯ ನಿಶ್ಯಬ್ದಂ ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಎದುರಾಗಿದೆ.

  ಅನುಷ್ಕಾ ಶೆಟ್ಟಿ ಜೊತೆ ನಟ ನಾಗಾರ್ಜುನ್ ಡೇಟಿಂಗ್ ವದಂತಿ: ಸ್ಟಾರ್ ನಟ ಹೇಳಿದ್ದೇನು?

  ಈ ನಡುವೆ #AskAnushka ಎಂಬ ಹ್ಯಾಷ್‌ಟ್ಯಾಗ್ ಆರಂಭಿಸಿದ್ದ ಅನುಷ್ಕಾ ಜನರ ಜೊತೆ ಸಂವಹನ ಆರಂಭಿಸಿದ್ದರು. ಈ ಅಭಿಯಾನದಲ್ಲಿ ನಿಶ್ಯಬ್ದಂ ಸಿನಿಮಾ ನೋಡಿದ ಒಬ್ಬರು, ''ನನಗೆ ಕಥೆ ಇಷ್ಟ ಆಗಿಲ್ಲ, ಲಾಜಿಕ್ ಇಲ್ಲ'' ಎಂದು ಅನುಷ್ಕಾಗೆ ಹೇಳಿದ್ದಾರೆ.

  ಅದನ್ನು ವಿನಯದಿಂದ ಸ್ವೀಕರಿಸಿರುವ ಅನುಷ್ಕಾ ಶೆಟ್ಟಿ ''ಧನ್ಯವಾದಗಳು, ನಿಮ್ಮ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ'' ಎಂದಿದ್ದಾರೆ. ಅನುಷ್ಕಾ ನೀಡಿದ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಗಿಟಿವ್ ಕಾಮೆಂಟ್ ಬಂದರೂ ಅದನ್ನು ಸಮನಾಗಿ ಸ್ವೀಕರಿಸುವ ತಾಳ್ಮೆ ಸ್ಟಾರ್‌ಗೆ ಇರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಿನಿಮಾ ವಿಚಾರಕ್ಕಿಂತ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾಗುವ ನಟಿ ಅನುಷ್ಕಾ ಶೆಟ್ಟಿ ಗಾಸಿಪ್‌ವೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಹಿರಿಯ ನಟ ನಾಗಾರ್ಜುನ ಜೊತೆ ಅನುಷ್ಕಾ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದೆಲ್ಲವೂ ಸುಳ್ಳು ಮತ್ತು ನೋವಿನ ಸಂಗತಿ ಎಂದು ನಾಗಾರ್ಜುನ ಸ್ಪಷ್ಟನೆ ನೀಡಿದ್ದಾರೆ.

  English summary
  Anushka Shetty has give cool response after received negative comments to her new movie Nishabdham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X