»   » ಅನುಷ್ಕಾ ಶೆಟ್ಟಿ ಮೈಮೇಲೆ ರು.5 ಕೋಟಿ ಚಿನ್ನಾಭರಣ

ಅನುಷ್ಕಾ ಶೆಟ್ಟಿ ಮೈಮೇಲೆ ರು.5 ಕೋಟಿ ಚಿನ್ನಾಭರಣ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಈಗ ತೆಲುಗು, ತಮಿಳಿನಲ್ಲಿ ಸಖತ್ ಬಿಜಿ ತಾರೆ. ತಮಿಳು ನಟ ಸೂರ್ಯ ಜೊತೆಗಿನ 'ಸಿಂಗಂ 2' ಚಿತ್ರ ಬಿಡುಗಡೆಯಾಗುತ್ತಿದ್ದು ಈಗ ತೆಲುಗಿನ ಭಾರಿನ ಬಜೆಟ್ ನ 'ರುದ್ರಮದೇವಿ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕಾಗಿ ರು.5 ಕೋಟಿ ಬೆಲೆಬಾಳುವ ಚಿನ್ನಾಭರಣಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿನ ಸನ್ನಿವೇಶಗಳು ನೈಜವಾಗಿ ಮೂಡಿಬರಲಿ ಎಂಬ ಕಾರಣಕ್ಕೆ ಅಸಲಿ ಚಿನ್ನಾಭರಣಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಇವೂ ಪ್ರಮುಖ ಆಕರ್ಷಣೆಯಾಗಲಿವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗುಣಶೇಖರ್.


ಐಶ್ವರ್ಯಾ ರೈ ಅಭಿನಯದ ಹಿಂದಿಯ 'ಜೋಧಾ ಅಕ್ಬರ್' ಚಿತ್ರದಲ್ಲೂ ಇದೇ ರೀತಿಯಾಗಿ ಅಸಲಿ ಚಿನ್ನಾಭರಣಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ರುದ್ರಮದೇವಿ ಚಿತ್ರದಲ್ಲೂ ಅಸಲಿ ಚಿನ್ನಾಭರಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಜೋಧಾ ಅಕ್ಬರ್ ಚಿತ್ರಕ್ಕೆ ನೀತಾ ಲುಲ್ಲಾ ಅವರು ಐಶ್ವರ್ಯಾ ರೈ ಅವರಿಗೆ ವಸ್ತ್ರ ಹಾಗೂ ಆಭರಣಗಳ ವಿನ್ಯಾಸ ಮಾಡಿದ್ದರು. ಈಗ ಅವರೇ ಅನುಷ್ಕಾ ಶೆಟ್ಟಿ ಅವರಿಗೂ ಡಿಸೈನ್ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕ ನಟ ರಾಣಾ ದಗ್ಗುಬಾಟಿ. ಪಾತ್ರವರ್ಗದಲ್ಲಿ ಸುಮನ್, ಪ್ರಕಾಶ್ ರೈ, ಕೃಷ್ಣಂರಾಜು ಮುಂತಾದವರಿದ್ದಾರೆ.

ಕಾಕತೀಯ ರಾಜಮನೆತನದ ರಾಣಿ ರುದ್ರಮದೇವಿ ಅವರ ಸಾಹಸಗಾಥೆಯೇ ಈ ಚಿತ್ರದ ಕಥಾವಸ್ತು. ಈ ಐತಿಹಾಸಿಕ ಚಿತ್ರವನ್ನು 3dಯಲ್ಲಿ ತೆರೆಗೆ ತರಲಾಗುತ್ತಿದೆ. ತೆಲುಗು ಹಾಗೂ ತಮಿಳು ದ್ವಿಭಾಷಾ ಚಿತ್ರ ಇದಾಗಿದೆ. ಈ ಚಿತ್ರದ ಬಜೆಟ್ ಸರಿಸುಮಾರು ರು.120 ಕೋಟಿ. ಇಳಯರಾಜ ಅವರ ಸಂಗೀತ, ಅಜಯ್ ವಿನ್ಸೆಂಟ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

English summary
Bangalore beauty Anushka Shetty to sport jewellery worth 5 cr in Telugu and Tamil flick Rudramadevi. The director Gunashekar spending 5 cr only on Anushka Shetty’s jewellery in the period drama.
Please Wait while comments are loading...