'ಬಾಹುಬಲಿ' ಚಿತ್ರದ ರಾಜ-ರಾಣಿಯ ಮನಮೋಹಕ ದೃಶ್ಯ ಬಿಡುಗಡೆ!
ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. 'ಬಾಹುಬಲಿ ದಿ ಕನ್ ಕ್ಲೂಷನ್' ಚಿತ್ರದಲ್ಲಿ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ಅನುಷ್ಕಾ ಶೆಟ್ಟಿಯ ಮೊದಲ ನೋಟ ರಿಲೀಸ್ ಮಾಡಿದೆ.[ಬಾಹುಬಲಿ-2: ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!]
ಎಲ್ಲರಿಗೂ ಗೊತ್ತಿರುವ ಹಾಗೆ, 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರದ್ದು ಡಿ-ಗ್ಲಾಮರ್ ಪಾತ್ರವಾಗಿತ್ತು. ಆದ್ರೆ, ಮುಂದುವರೆದ ಭಾಗದಲ್ಲಿ ಅನುಷ್ಕಾ ಶೆಟ್ಟಿ ಫುಲ್ ಮಾಸ್ ಆಗಿದ್ದು, ಕೈಯಲ್ಲಿ ಬಿಲ್ಲು ಹಿಡಿದು ಮಿಂಚಲಿದ್ದಾರೆ.

ಸದ್ಯ, ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕೇವಲ ದೇವಸೇನಾ ಮಾತ್ರವಲ್ಲದೆ, ಪ್ರಭಾಸ್ ಕೂಡ ಕಾಣಿಸಿಕೊಂಡಿದ್ದಾರೆ. 'ಬಾಹುಬಲಿ-2' ಚಿತ್ರದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಹೊಸ ಪೋಸ್ಟರ್ ನಲ್ಲಿ ಇಬ್ಬರು ರಾಜರಾಣಿಯಂತೆ ಕಂಗೊಳಿಸಿದ್ದಾರೆ.['ಬಾಹುಬಲಿ 2' ಬಿಡುಗಡೆ ದಿನಾಂಕ ಯಾವಾಗ ಗೊತ್ತಾಯ್ತ]

ಉಳಿದಂತೆ ಚಿತ್ರದಲ್ಲಿ ರಾಣಾದಗ್ಗುಬಾಟಿ, ರಮ್ಯಾಕೃಷ್ಣ, ತಮನ್ನ, ಸತ್ಯರಾಜ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಬಾಹುಬಲಿ ದಿ ಕನ್ ಕ್ಲೂಷನ್' ಏಪ್ರಿಲ್ 28 ರಂದು ಬಿಡುಗಡೆಯಾಗುವ ತಯಾರಿಯಲ್ಲಿದೆ.


Click it and Unblock the Notifications











