ಕೊನೆಗೂ 'ಮದುವೆ ಆಗ್ತೀನಿ' ಎಂದ ನಟಿ ಅನುಷ್ಕಾ ಶೆಟ್ಟಿ: ಯಾರನ್ನ ಗೊತ್ತಾ?

By Bharath Kumar

Recommended Video

ಕೊನೆಗೂ 'ಮದುವೆ ಆಗ್ತೀನಿ' ಎಂದ ನಟಿ ಅನುಷ್ಕಾ ಶೆಟ್ಟಿ: ಯಾರನ್ನ ಗೊತ್ತಾ? | FIlmibeat Kannada

ದಕ್ಷಿಣ ಭಾರತದ ಚೆಲುವೆ, ಕರ್ನಾಟಕದ ಕುವರಿ ಅನುಷ್ಕಾ ಶೆಟ್ಟಿ ಸಿನಿಮಾ ವಿಚಾರಕ್ಕಿಂತ ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯ, ಅನುಷ್ಕಾ ಶೆಟ್ಟಿ ಅಭಿನಯದ 'ಭಾಗಮತಿ' ಸಿನಿಮಾ ತೆರೆಕಂಡಿದ್ದು ಯಶಸ್ವಿ ಪ್ರದರ್ಶನವಾಗುತ್ತಿದೆ. ಇಂತಹ ಸಂತೋಷದ ಸಂಭ್ರಮದಲ್ಲಿ ಮತ್ತೊಂದು ಖುಷಿ ಪಡುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ ಬಾಹುಬಲಿ ಸುಂದರಿ.

'ಬಾಹುಬಲಿ' ನಟ ಪ್ರಭಾಸ್ ಅವರ ಜೊತೆ ಲವ್ವು-ಮದುವೆ ಎಂಬ ವದಂತಿಗಳಿಂದ ಬೇಸತ್ತಿದ್ದ ಅನುಷ್ಕಾ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೋದಲ್ಲಿ, ಬಂದಲ್ಲಲ್ಲೇ ಮದುವೆ ಯಾವಾಗ,,,,,ಮದುವೆ ಯಾವಾಗ.....ಎಂದು ಕೇಳುತ್ತಿದ್ದವರಿಗೆ ಅನುಷ್ಕಾ ನೇರವಾಗಿ ಉತ್ತರಿಸಿದ್ದಾರೆ. ಸದಾ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ರೆ, ಉತ್ತರ ನೀಡದೇ ಹೋಗುತ್ತಿದ್ದ ಅನುಷ್ಕಾ ಈಗ ಖುದ್ದು ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಅಷ್ಟಕ್ಕೂ, ಅನುಷ್ಕಾ ಶೆಟ್ಟಿ ಮದುವೆ ಯಾವಾಗ? ಮದುವೆ ಬಗ್ಗೆ ಸೌತ್ ಸುಂದರಿ ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಮದುವೆ ಆಗ್ತೀನಿ

ಮದುವೆ ಆಗ್ತೀನಿ

''ನನಗೆ ಮದುವೆ ಮೇಲೆ ನಂಬಿಕೆ ಇದೆ. ಆದ್ರೆ, ಸದ್ಯಕ್ಕೆ ಮದುವೆ ಆಗುವ ಯೋಚನೆ ಇಲ್ಲ. ನನ್ನ ಜತೆ ಯಾರೂ ಕನೆಕ್ಟ್ ಆಗ್ತಾರೋ ಅವರನ್ನ ಮದುವೆ ಆಗ್ತೀನಿ. ನಮ್ಮ ತಂದೆ-ತಾಯಿ ಕೂಡ ಮದುವೆ ಆಗು ಎಂದು ಒತ್ತಾಯಿಸುತ್ತಿದ್ದಾರೆ. ಒಳ್ಳೆ ಸಮಯಕ್ಕಾಗಿ ಕಾಯುತ್ತಿದ್ದೇನೆ'' ಎಂದು ಅನುಷ್ಕಾ ತಿಳಿಸಿದ್ದಾರೆ.

ನಾನು ಬಿಸಿನೆಸ್ ಮಾಡಲ್ಲ

ನಾನು ಬಿಸಿನೆಸ್ ಮಾಡಲ್ಲ

ಅನುಷ್ಕಾ ಶೆಟ್ಟಿ ಸದ್ಯದಲ್ಲೇ ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಕುರಿತು ಮಾತನಾಡಿದ ಅನುಷ್ಕಾ ''ಅದು ಸುಳ್ಳು. ನನಗೆ ಬಿಸಿನೆಸ್ ಬಗ್ಗೆ ಗೊತ್ತಿಲ್ಲ. ನಾನು ಉದ್ಯಮಿ ಅಲ್ಲ. ನನಗೆ ಸರಿಯಾಗಿ ನಿರ್ವಹಣೆ ಮಾಡಲು ಬರಲ್ಲ. ಹೀಗಾಗಿ, ನಾನು ಸಿನಿಮಾ ನಿರ್ಮಾಣ ಮಾಡಲ್ಲ'' ಎಂದಿದ್ದಾರೆ.

ಯಾವ ಸಿನಿಮಾನೂ ಒಪ್ಪಿಲ್ಲ

ಯಾವ ಸಿನಿಮಾನೂ ಒಪ್ಪಿಲ್ಲ

ಸದ್ಯ, ಭಾಗಮತಿ ಚಿತ್ರ ಯಶಸ್ವಿ ಪ್ರದರ್ಶನವಾಗ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಬೇರೆ ಯಾವ ಚಿತ್ರವನ್ನ ಒಪ್ಪಿಕೊಂಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ನನ್ನ ಕುಟುಂಬಸ್ಥರ ಮುಂದೆ ಅಭಿನಯಿಸಿಲ್ಲ

ನನ್ನ ಕುಟುಂಬಸ್ಥರ ಮುಂದೆ ಅಭಿನಯಿಸಿಲ್ಲ

ನನ್ನ ಕುಟುಂಬಸ್ಥರ ಮುಂದೆ ನಾನು ಅಭಿನಯಿಸಿಲ್ಲ. ಅದು ನನ್ನಿಂದ ಸಾಧ್ಯವಿಲ್ಲ. ಅದಕ್ಕೆ ಅವರನ್ನ ಚಿತ್ರೀಕರಣದ ಜಾಗಕ್ಕೆ ಆಹ್ವಾನಿಸಲ್ಲ. ಏನಾದರೂ ಸಹಾಯ ಬೇಕು ಅಂದ್ರೆ ಫೋನ್ ಮಾಡ್ತಿನಿ. ಸಪೋರ್ಟ್ ಮಾಡ್ತಾರೆ.

ಆಭರಣಗಳಂದ್ರೆ ನನಗೆ ಇಷ್ಟವಿಲ್ಲ

ಆಭರಣಗಳಂದ್ರೆ ನನಗೆ ಇಷ್ಟವಿಲ್ಲ

ಮೊದಲಿನಿಂದಲೂ ನನಗೆ ಆಭರಣಗಳು ಅಂದ್ರೆ ಇಷ್ಟ ಇಲ್ಲ. ಆದ್ರೆ, ಹಬ್ಬದ ಸಮಯದಲ್ಲಿ ನಮ್ಮ ಅಮ್ಮ ನನಗೆ ಬಳೆ, ನೆಕ್ಲೇಸ್ ಎಲ್ಲವನ್ನ ಹಾಕುತ್ತಿದ್ದರು. ಅರುಂಧತಿ ಸಿನಿಮಾ ನೋಡಿದ ಮೇಲೆ ಅಮ್ಮನಿಗೆ ತುಂಬ ಖುಷಿ ಆಯ್ತು. ಅಷ್ಟೊಂದು ಆಭರಣ ತೊಟ್ಟಿದ್ದು ನೋಡಿ'' ಎಂದು ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನ ಕೂಡ ಹಂಚಿಕೊಂಡಿದ್ದಾರೆ.

More from Filmibeat

English summary
High on the success of Bhaagamathie, Anushka Shetty talks about films, family and her marriage. ''I totally believe in marriage, but I want to get married at the right time'' said anushka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X