ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಅನುಷ್ಕಾ ಶೆಟ್ಟಿ?

ಬಿಗ್ ಬಾಸ್ ಕಿರುತೆರೆ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಅಂತಾನೆ ಖ್ಯಾತಿ ಗಳಿಸಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಯಲ್ಲಿ ಬಿಗ್ ಬಾಸ್ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಹಿಂದಿಯಲ್ಲಿ ಅನೇಕ ವರ್ಷಗಳಿಂದ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ.

ಕನ್ನಡದಲ್ಲಿ ಕಳೆದ 6 ಸೀಸನ್ ಅನ್ನು ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ ನಿಭಾಸಿಕೊಂಡು ಬರುತ್ತಿದ್ದಾರೆ. ಪ್ರತೀ ವರ್ಷವು ರೋಚಕತೆ ಇಂದ ಕೂಡಿರುವ ಬಿಗ್ ಬಾಸ್ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು. ಆದ್ರೆ ತೆಲುಗು ಬಿಗ್ ಬಾಸ್ ಶೋ ಮಾತ್ರ ಗೊಂದಲ್ಲಿದೆ.

ತೆಲುಗು ಬಿಗ್ ಬಾಸ್ ಮೊದಲ ಸೀಸನ್ ಅನ್ನು ಜ್ಯು.ಎನ್ ಟಿ ಆರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಆದ್ರೆ ಎರಡನೆ ಸೀಸನ್ ನಟ ನಾನಿ ಹೆಗಲಿಗೆ ಬಿತ್ತು. ಈಗ ಮೂರನೆ ಶೋ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಗೊಂದಲ ಶುರುವಾಗಿದೆ. ಮೂಲಗಳ ಪ್ರಕಾರ ನಟಿ ಬಿಗ್ ಬಾಸ್ ಸೀಸನ್-3 ಅನುಷ್ಕಾ ಶೆಟ್ಟಿ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

Anushka Shetty will host for a most popular show Bigg Boss

ಒಂದು ವೇಳೆ ತೆಲುಗು ಬಿಗ್ ಬಾಸ್ ಅನುಷ್ಕಾ ಹೆಗಲಿಗೆ ಬಿದ್ದರೆ, ಭಾರತದಲ್ಲಿ ಮೊದಲ ಬಾರಿಗೆ ನಟಿಯೊಬ್ಬಳು ಬಿಗ್ ಬಾಸ್ ಶೋ ನಡೆಸಿ ಕೊಟ್ಟ ಖ್ಯಾತಿ ಅನುಷ್ಕಾ ಅವರಿಗೆ ಸಿಗುತ್ತೆ. ಆದ್ರೆ ಈ ಬಾರಿ ರೇಸ್ ನಲ್ಲಿ ಅನೇಕರ ಸ್ಟಾರ್ ನಟರ ಹೆಸರುಗಳು ಕೂಡ ಕೇಳಿ ಬರುತ್ತಿದೆ. ಆದ್ರೆ ಅನುಷ್ಕಾ ನಡೆಸಿಕೊಡುವುದು ಬಹುತೇಕ ಖಚಿತ ಅಂತ ಹೇಳಲಾಗುತ್ತಿದೆ. 'ಬಾಹುಬಲಿ' ಚಿತ್ರದ ಮೂಲಕ ದೇಶದಾದ್ಯಂತ ಖ್ಯಾತಿ ಗಳಿಸಿರುವ ಅನುಷ್ಕಾ ಬಿಗ್ ಬಾಸ್ ಶೋ ಹೇಗೆ ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

More from Filmibeat

English summary
Telugu actress Anushka Shetty will host for a most popular show Bigg Boss season-3. If this is true, Anushka will be the first female superstar to have hosted Bigg Boss on Indian television.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X