ದಸರಾ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ
ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡಿರುವ ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ಅನುಷ್ಕಾ ಪಕ್ಕದ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಮೆರೆಯುತ್ತಿದ್ದರೂ ದಸರಾ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಕೋರಿ ಕನ್ನಡತನ ಮೆರೆದಿದ್ದಾರೆ. ತೆಲುಗಿನಲ್ಲಿ ನಂ.1 ನಟಿಯಾಗಿದ್ದರೂ ಕನ್ನಡ ಮರೆತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಅನುಷ್ಕಾ ಶೆಟ್ಟಿ ಆಗಾಗ ಕನ್ನಡದಲ್ಲಿ ಸಂದೇಶಗಳನ್ನು ರವಾನಿಸುತ್ತಿರುತ್ತಾರೆ. ಹಬ್ಬದ ಸಮಯದಲ್ಲಿ ಅಥವಾ ಅವರ ಅಪ್ಪ-ಅಮ್ಮನ ಹುಟ್ಟುಹಬ್ಬದ ಸಮಯದಲ್ಲಿ ಕನ್ನಡದಲ್ಲೇ ಶುಭಾಶಯ ತಿಳಿಸುತ್ತಾರೆ. ದೊಡ್ಡ ನಟಿಯಾಗಿ ಗುರುತಿಸಿಕೊಂಡರೂ ತಾಯಿ, ತಾಯ್ನಾಡನ್ನು ಮರೆತಿಲ್ಲ ಎಂದು ಕನ್ನಡ ಅಭಿಮಾನಿಗಳು ಹೆಮ್ಮೆಪಡುತ್ತಿದ್ದಾರೆ.
ಅಂದ್ಹಾಗೆ ಅನುಷ್ಕಾ ಈ ಬಾರಿ ದಸರಾ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇಂಗ್ಲಿಷ್ ನಲ್ಲಿ ವಿಶ್ ಮಾಡುವ ಜೊತೆಗೆ ಕನ್ನಡದಲ್ಲೂ ಶುಭಕೋರಿ ಕನ್ನಡ ಅಭಿಮಾನಿಗಳ ಹೃದಯಗೆದ್ದಿದ್ದಾರೆ. "ದಸರಾ ಹಬ್ಬದ ಶುಭಾಶಯಗಳು" ಎಂದು ಅನುಷ್ಕಾ ಕನ್ನಡಿಗರಿಗೆ ಪ್ರೀತಿಯ ಶುಭಾಶಯ ತಿಳಿಸಿ ಸುರಕ್ಷಿತರಾಗಿರಿ ಎಂದು ಹೇಳಿದ್ದಾರೆ.

ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡದ ಕೆಲವರು ಕನ್ನಡದಲ್ಲಿ ಮಾತನಾಡುವುದಿರಲಿ, ಕನ್ನಡಿಗರು ಎಂದು ಹೇಳಿಕೊಳ್ಳುವುದೇ ಅವಮಾನ ಎಂದು ಭಾವಿಸಿದ್ದಾರೆ. ಬೇರೆಭಾಷೆಯನ್ನು ಚೆನ್ನಾಗಿ ಕಲಿತು ಅದೇ ಭಾಷೆಯಲ್ಲಿ ಭಾಷಣ ಬಿಗಿದು ಅಲ್ಲಿಯ ಅಭಿಮಾನಿಗಳನ್ನು ಮರಳು ಮಾಡುತ್ತಿದ್ದಾರೆ.
Recommended Video
ಅನುಷ್ಕಾ ಇತ್ತೀಚಿಗೆ ನಿಶಬ್ದಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಬಳಿಕ ಅನುಷ್ಕಾ ಯಾವುದೇ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಆದರೆ ಸಾಕಷ್ಟು ಸಿನಿಮಾಗಳು ಹರಿದಾಡುತ್ತಿವೆ. ವಿಜಯ್ ಸೇತುಪತಿ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಬಲವಾಗಿ ಕೇಳಿರುತ್ತಿದೆ. ಜೊತೆಗೆ ವೆಬ್ ಸೀರಿಸ್ ನಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











