ಪ್ರಭಾಸ್ ಜೊತೆ ಮದುವೆ ಬಗ್ಗೆ ಅನುಷ್ಕಾ ತಾಯಿ ಹೇಳಿದ ಮಾತಿನ ಅರ್ಥವೇನು.?

By Bharath Kumar

Recommended Video

ಅನುಷ್ಕಾ-ಪ್ರಭಾಸ್ ಬಗ್ಗೆ ಅನುಷ್ಕಾ ತಾಯಿ ಹೇಳಿದ್ದೇನು..?| Oneindia Kannada

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆ ಆಗ್ತಿದ್ದಾರೆ, ಪ್ರೀತಿ ಮಾಡ್ತಿದ್ದಾರೆ, ಮನೆಯವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗುತ್ತಲೇ ಇವೆ. ಆದ್ರೆ, ಈ ಬಗ್ಗೆ ಯಾರಿಂದಲೂ ಸ್ಪಷ್ಟವಾದ ಮಾಹಿತಿ ಸಿಕ್ಕಿರಲಿಲ್ಲ.

ಇದೀಗ, ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅವರ ತಾಯಿ ತಮ್ಮ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಅನುಷ್ಕಾ ಅವರ ಅಮ್ಮ ಹೇಳಿರುವ ಮಾತಿನಲ್ಲಿ ಸ್ಪಷ್ಟತೆ ಇದ್ದರೂ, ಒಳ ಅರ್ಥ ಬೇರೇಯೇ ಇದೆ ಎಂದು ಎನಿಸಿದೇ ಇರಲ್ಲ.

ಅರದಲ್ಲೂ, ಪ್ರಭಾಸ್ ಬಗ್ಗೆ ವಿಶೇಷ ಕಾಳಜಿ ತೋರಿಸಿರುವ ಅನುಷ್ಕಾ ತಾಯಿ 'ಡಾರ್ಲಿಂಗ್' ಬಗ್ಗೆ ಕೂಡ ಮಾತನಾಡಿದ್ದಾರೆ. ಈಗಾಗಲೇ ಪ್ರಭಾಸ್, ಅನುಷ್ಕಾ, ಪ್ರಭಾಸ್ ಅಂಕಲ್ ಕೃಷ್ಣಂ ರಾಜು ಮದುವೆ ಬಗ್ಗೆ ಸುದ್ದಿ ಸುಳ್ಳು ಎಂದಿದ್ದಾರೆ. ಈಗ ಅನುಷ್ಕಾ ತಾಯಿ ಈ ಬಗ್ಗೆ ಮೌನಮುರಿದಿದ್ದು ಈ ಜೋಡಿಯ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದಾರೆ. ಹಾಗಿದ್ರೆ, ಅನುಷ್ಕಾ ತಾಯಿ ಹೇಳಿದ್ದೇನು.? ಮುಂದೆ ಓದಿ.....

ಅನುಷ್ಕಾ ತಾಯಿ ಹೇಳಿದ್ದೇನು ಗಮನಿಸಿ

ಅನುಷ್ಕಾ ತಾಯಿ ಹೇಳಿದ್ದೇನು ಗಮನಿಸಿ

ಅನುಷ್ಕಾ ಮತ್ತು ಪ್ರಭಾಸ್ ಮದುವೆ ಮಾತನಾಡಿದ ಅನುಷ್ಕಾ ತಾಯಿ ''ಇಬ್ಬರು ಸೇರಿ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ನನಗೂ ಕೂಡ ಪ್ರಭಾಸ್ ಅವರಂತೆ ಮಿಸ್ಟರ್ ಫರ್ಫೆಕ್ಟ್ ಅನುಷ್ಕಾಳ ಗಂಡನಾಗಿ ಬರಬೇಕು ಎಂಬ ಆಸೆ ಇದೆ. ಆದ್ರೆ, ಅವರಿಬ್ಬರೂ ಸ್ನೇಹಿತರು ಮಾತ್ರವೇ. ಮದುವೆ ಆಗಬೇಕು ಎಂಬ ಆಲೋಚನೆ ಅವರಲ್ಲಿ ಇಲ್ಲ. ಈಗಲಾದರೂ ಈ ವದಂತಿಗಳಿಂದ ದೂರುವಿರಿ'' ಎಂದಿದ್ದಾರೆ.

ಪ್ರಭಾಸ್ ಅವರಂತೆ ಅಳಿಯ ಬೇಕು

ಪ್ರಭಾಸ್ ಅವರಂತೆ ಅಳಿಯ ಬೇಕು

ಅನುಷ್ಕಾ ತಾಯಿ ಹೇಳಿದ ಎಲ್ಲ ಮಾತುಗಳು ಓಕೆ. ಆದ್ರೆ, ಅದರಲ್ಲಿ ಒಂದು ವಾಕ್ಯವನ್ನ ಗಮನಿಸಬೇಕಾಗಿದೆ. ''ಪ್ರಭಾಸ್ ಅವರಂತೆ ಮಿಸ್ಟರ್ ಫರ್ಫೆಕ್ಟ್ ಅನುಷ್ಕಾಳ ಗಂಡನಾಗಿ ಬರಬೇಕು'' ಎಂಬುದು. ಬಹುಶಃ ಅನುಷ್ಕಾ ಅವರ ತಾಯಿಗೂ ಪ್ರಭಾಸ್ ಇಷ್ಟವಾಗಿದ್ದಾರೆ. ಮಗಳನ್ನ ಮದುವೆ ಆಗಲಿ ಎಂಬ ಆಸೆ ಹೊಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತೆ.

ಆದ್ರೆ, ಏನಾಗುತ್ತಿದೆ.?

ಆದ್ರೆ, ಏನಾಗುತ್ತಿದೆ.?

ಆದ್ರೆ, ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಬಗೆಗಿನ ವದಂತಿಗೆ ಅನುಷ್ಕಾ ಈ ಹಿಂದೆ ಸ್ಪಷ್ಟನೆ ನೀಡಿದ್ದರು. ''ಬಾಹುಬಲಿ ಮತ್ತು ದೇವಸೇನಾ ಕೆಮಿಸ್ಟ್ರಿ ಕೇವಲ ಸಿನಿಮಾ ಮಾತ್ರ, ಅದು ನಿಜಜೀವನದಲ್ಲಿ ಸಾಧ್ಯವಿಲ್ಲ. ನಾವು ಮದುವೆ ಮಾಡಿಕೊಳ್ಳುವ ಯೋಚನೆಯೇ ಇಲ್ಲ'' ಎಂದಿದ್ದರು. ಆದ್ರೆ, ಒಬ್ಬರ ಮೇಲೆ ಇನ್ನೊಬ್ಬರು ತೋರಿಸುವ ಕಾಳಜಿ ನೋಡಿದ ಸಿನಿಮಂದಿ ಇದು ಪ್ರೀತಿ, ಮದುವೆ ಆಗೋದು ಖಚಿತ. ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಯಾರು ಮದುವೆ ಆಗಲಿದ್ದಾರೆ.?

ಯಾರು ಮದುವೆ ಆಗಲಿದ್ದಾರೆ.?

ಇಷ್ಟೆಲ್ಲಾ ಸಂಗತಿಗಳು ನಡೆಯುತ್ತಿದ್ದರೂ, ಪ್ರಭಾಸ್ ಅವರ ಅಂಕಲ್ ಕೃಷ್ಣ ರಾಜು, ಪ್ರಭಾಸ್ ಗೆ ಸಂಬಂಧ ನೋಡಿದ್ದೇವೆ, ಆದಷ್ಟೂ ಬೇಗ ಮದುವೆ ಆಗ್ತಾನೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಪ್ರಭಾಸ್ ಹೊಸ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಕಡೆ ಅನುಷ್ಕಾ ಶೆಟ್ಟಿ ಕೂಡ ಮದುವೆ ಬಗ್ಗೆ ಯೋಚಿಸಿದೇ ಹೊಸ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.

ದೇವಸ್ಥಾನಗಳಲ್ಲಿ ಪೂಜೆ

ದೇವಸ್ಥಾನಗಳಲ್ಲಿ ಪೂಜೆ

ಒಬ್ಬ ತಾಯಿಯಾಗಿ ಮಗಳ ಮದುವೆ ಬಗ್ಗೆ ಯೋಚಿಸುವ ಅನುಷ್ಕಾ ಅವರ ಅಮ್ಮ, ತಮ್ಮ ಮಗಳ ಮದುವೆ ಬೇಗ ಆಗಲಿ ಎಂದು ದೇವಸ್ಥಾನಗಳನ್ನ ಸುತ್ತಿ, ಪೂಜೆ ಸಲ್ಲಿಸುತ್ತಿರುವುದು ಗೊತ್ತಿರುವ ವಿಚಾರ. ಇದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

More from Filmibeat

English summary
For the first time ever, Anushka's mother has opened up about th e rumour, Anushka Shetty’s mother would ‘love to get Prabhas like Mr Perfect’ for her daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X