For Quick Alerts
  ALLOW NOTIFICATIONS  
  For Daily Alerts

  'ಅದ್ಧೂರಿ ಲವರ್' ಮುಹೂರ್ತ: ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್

  |

  'ಕಿಸ್' ಚಿತ್ರದ ಬಳಿಕ ಎಪಿ ಅರ್ಜುನ್ ಮತ್ತೊಂದು ಲವ್ ಸ್ಟೋರಿಗೆ ಕೈಹಾಕಿದ್ದು, ಆ ಸಿನಿಮಾಗೆ 'ಅದ್ಧೂರಿ ಲವರ್' ಎಂದು ಹೆಸರಿಟ್ಟಿದ್ದಾರೆ. ಇತ್ತೀಚಿಗಷ್ಟೆ ಪೋಸ್ಟರ್ ವೊಂದು ಹಾಕಿದ್ದ ಅರ್ಜುನ್ ಈ ಚಿತ್ರಕ್ಕೆ ನಾಯಕ ಯಾರಿರಬಹುದು ಊಹಿಸಿ ಎಂದಿದ್ದರು.

  ಇದೀಗ, ಈ ಚಿತ್ರಕ್ಕೆ ನಾಯಕ ಯಾರು ಎಂದು ಅಧಿಕೃತವಾಗಿ ಘೋಷಣೆಯಾಗಿದೆ. 'ಅದ್ಧೂರಿ ಲವರ್' ಚಿತ್ರಕ್ಕೆ 'ಕಿಸ್' ಖ್ಯಾತಿಯ ವಿರಾಟ್ ನಾಯಕನಾಗಿದ್ದಾರೆ. ಅದ್ಧೂರಿ ಲವರ್ ಚಿತ್ರದ ಮುಹೂರ್ತ ಇಂದು ನೆರವೇರಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿ ಶುಭಕೋರಿದ್ದಾರೆ.

  ನೆನಪಿರಲಿ ಪ್ರೇಮ್ ಕೂಡ ಅತಿಥಿಯಾಗಿ ಭಾಗವಹಿಸಿ ಹೊಸ ಸಿನಿಮಾಗೆ ವಿಶ್ ಮಾಡಿದರು. ವಿರಾಟ್ ಗೆ ಜೋಡಿಯಾಗಿ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಖ್ಯಾತಿಯ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ.

  ಎರಡನೇ ಚುಂಬನಕ್ಕೆ ಸಜ್ಜಾಗುತ್ತಿದ್ದಾರೆ ಶ್ರೀಲೀಲಾ ಮತ್ತು ವಿರಾಟ್ಎರಡನೇ ಚುಂಬನಕ್ಕೆ ಸಜ್ಜಾಗುತ್ತಿದ್ದಾರೆ ಶ್ರೀಲೀಲಾ ಮತ್ತು ವಿರಾಟ್

  ಅಂದ್ಹಾಗೆ, ಅದ್ಧೂರಿ ಲವರ್ ಚಿತ್ರವನ್ನು ಖುದ್ದು ಎಪಿ ಅರ್ಜುನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ನಿರ್ದೇಶನ ಅವರದ್ದಲ್ಲ. ಕಿಸ್ ಚಿತ್ರದಂತೆ ಇದು ಲವ್ ಸ್ಟೋರಿ ಕಥೆ ಹೊಂದಿದ್ದು, ಆ ಚಿತ್ರಕ್ಕಿಂತ ವಿಭಿನ್ನವಾಗಿ ಮೂಡಿಬರಲಿದೆಯಂತೆ.

  ಸಿನಿಮಾ ಆರಂಭಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿದೆಯಂತೆ. ಬೆಂಗಳೂರು, ಮೈಸೂರು, ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಲಾಗಿದೆಯಂತೆ.

  English summary
  Kiss fame Virat starrer new movie Addhuri Lover starts from today (february 29). the movie produced by ap arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X