For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್: ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತೀ ವರ್ಷ ಅದ್ದೂರಿಯಾಗಿ, ಅಭಿಮಾನಿಗಳ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಜನ್ಮದಿನ ಆಚರಣೆ ಮಾಡಿಕೊಳ್ಳಲ್ಲ, ಮನೆಯ ಬಳಿ ಬರಬೇಡಿ, ಇದ್ದಲ್ಲೇ ಶುಭಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada

  ಅಣ್ಣನನ್ನು ಕಳೆದುಕೊಂಡಿರುವ ದುಃಖ ಇನ್ನು ಮಾಸಿಲ್ಲ. ಅಣ್ಣನ ನೆನಪಿನಲ್ಲೇ ಕಾಲಕಳೆಯುತ್ತಿರುವ ಧ್ರುವ ಸಂಭ್ರಮ, ಅದ್ದೂರಿತನದ ಹುಟ್ಟುಹಬ್ಬ ಬೇಡ ಎಂದಿದ್ದಾರೆ. ಅಲ್ಲದೆ ಕೊರೊನಾ ವೈರಲ್ ಹಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಹಾಗಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಮನೆಯ ಬಳಿ ಬರಬೇಡಿ ಎಂದು ಕೇಳಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮವಿಲ್ಲದಿದ್ದರೂ ಅಭಿಮಾನಿಗಳಿಗೆ ಧ್ರುವ ಕಡೆಯಿಂದ ಭರ್ಜರಿ ಗಿಷ್ಟ್ ಸಿಕ್ಕಿದೆ. ಮುಂದೆ ಓದಿ...

  'ಅದ್ದೂರಿ' ನಿರ್ದಶಕರ ಜೊತೆ ಧ್ರುವ ಸಿನಿಮಾ

  'ಅದ್ದೂರಿ' ನಿರ್ದಶಕರ ಜೊತೆ ಧ್ರುವ ಸಿನಿಮಾ

  ಹುಟ್ಟುಹಬ್ಬದ ದಿನ ಧ್ರುವ ಸರ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಧ್ರುವ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವಿಶೇಷ ಅಂದರೆ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಮತ್ತೆ ಸಿನಿಮಾ ಮಾಡಲು ಧ್ರುವ ಮುಂದಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದೆ.

  8 ವರ್ಷದ ಬಳಿಕ ಒಂದಾದ 'ಅದ್ದೂರಿ' ಜೋಡಿ

  8 ವರ್ಷದ ಬಳಿಕ ಒಂದಾದ 'ಅದ್ದೂರಿ' ಜೋಡಿ

  ಸೂಪರ್ ಹಿಟ್ 'ಅದ್ದೂರಿ' ಸಿನಿಮಾ ಬಳಿಕ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. 2012ರಲ್ಲಿ ಅದ್ದೂರಿ ಸಿನಿಮಾ ರಿಲೀಸ್ ಆಗಿತ್ತು. ಧ್ರುವ ಸರ್ಜಾ ಅಭಿನಯದ ಮೊದಲ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಮತ್ತದೆ ಕಾಂಬಿನೇಷನ್ ಮತ್ತೊಂದು ಸಿನಿಮಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇಂದು ಹುಟ್ಟುಹಬ್ಬದ ದಿನ ಪ್ರೊಡಕ್ಷನ್ ನಂ.3 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. 8 ವರ್ಷದ ಬಳಿಕ ಅರ್ಜುನ್-ಧ್ರುವ ಒಂದಾಗಿದ್ದು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

  'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿ

  'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿ

  ಧ್ರುವ ಸರ್ಜಾ ಸದ್ಯ 'ಪೊಗರು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇತ್ತೀಚಿಗಷ್ಟೆ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅದ್ದೂರಿ ಸೆಟ್ ನಲ್ಲಿ ಪೊಗರು ಟೈಟಲ್ ಸಾಂಗ್ ಅನ್ನು ಸೆರೆಹಿಡಿಯಲಾಗಿದೆ. 'ಪೊಗರು ಅಣ್ಣನಿಗೆ ಪೊಗರು...' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಅಭಿಮಾನಿಗಳಲ್ಲಿ ಮನವಿ ಮಾಡಿದ ಧ್ರುವ

  ಅಭಿಮಾನಿಗಳಲ್ಲಿ ಮನವಿ ಮಾಡಿದ ಧ್ರುವ

  ಇತ್ತೀಚಿಗಷ್ಟೆ ಅತ್ತಿಗೆ, ಮೇಘನಾ ರಾಜ್ ಸೀಮಂತ ಸಂಭ್ರಮ ಮಾಡಿ ಮುಗಿಸಿದ್ದಾರೆ. ಬಳಿಕ ಧ್ರುವ ಸಾಮಾಜಿಕ ಜಾಲತಾಣದಲ್ಲಿ ''ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ'' ಎಂದು ಧ್ರುವ ಸರ್ಜಾ ವಿನಂತಿಸಿಕೊಂಡಿದ್ದಾರೆ. ಧ್ರುವ ಅವರ ವಿನಂತಿಯನ್ನು ಅಭಿಮಾನಿಗಳು ಸಹ ಸ್ವಾಗತಿಸಿದ್ದಾರೆ.

  English summary
  Actor Dhruva Sarja And A.P Arjun reunite after a Super hit Adduri movie. New movie announced for his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X