75 ವರ್ಷಗಳ ವೃದ್ಧನಾಗಲಿದ್ದಾರೆ ಶಿವರಾಜ್ ಕುಮಾರ್!

By ಶಶಿಕರ್ ಪಾತೂರ್

Recommended Video

75 ವರ್ಷಗಳ ವೃದ್ಧನಾಗಲಿದ್ದಾರೆ ಶಿವರಾಜ್ ಕುಮಾರ್! | FILMIBEAT KANNADA

ಸದಾ ಒಂದಲ್ಲ ಒಂದು ವಿಭಿನ್ನ ಪಾತ್ರಗಳ ‌ಮೂಲಕ ಗುರುತಿಸಿಕೊಂಡು ಅಚ್ಚರಿ ಮೂಡಿಸುತ್ತ ಬಂದವರು ಶಿವರಾಜ್ ಕುಮಾರ್. ವೃತ್ತಿ‌ ಬದುಕಿನ ಮೂವತ್ತೈದು ವರ್ಷಗಳನ್ನು ದಾಟಿದರು ಕೂಡ ಇಂದಿಗೂ ಮೂವತ್ತೈದರ ಯುವಕನಂತೆ ಕಾಣುವ ವಿಸ್ಮಯ ಅವರು.

ಇದೀಗ ಅವರು ನಟಿಸಲಿರುವ ಚಿತ್ರದಲ್ಲಿ ಮೂರು ಕಾಲ ಘಟ್ಟದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 35 ರಿಂದ 50 ಮತ್ತು 75ರ ಲುಕ್ ನಲ್ಲಿ ಶಿವರಾಜ್ ಕುಮಾರ್ ಇರುತ್ತಾರೆ. ನಿರ್ದೇಶಕ ಎಪಿ ಅರ್ಜುನ್ ಕಥೆ ಶಿವಣ್ಣನಿಗೆ ಕೂಡ ಹಿಡಿಸಿದ್ದು, ಈ ವರ್ಷವೇ ಸಿನಿಮಾ ಶುರು ಆಗಲಿದೆ.

ಅಂದಹಾಗೆ, ಚಿತ್ರೀಕರಣ ಆರಂಭಗೊಂಡ ಬಳಿಕ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಎಲ್ಲರಿಗೂ ಅನಿವಾರ್ಯ ಆಗಿರುತ್ತದೆ. ಆದರೆ, ಕತೆ ಕೇಳಿದಾಗಲೇ ಇಂಪ್ರೆಸ್ ಆಗಿರುವ ಶಿವಣ್ಣ ಇತ್ತೀಚೆಗಷ್ಟೇ ಫಿಲ್ಮ್ ಬೀಟ್ ಜೊತೆಗೆ ಮಾತನಾಡುತ್ತಾ ಎ.ಪಿ ಅರ್ಜುನ್ ಪ್ರಾಜೆಕ್ಟ್ ತಮಗೆ ತುಂಬ ಇಷ್ಟವಾಗಿದ್ದಾಗಿ ಹೇಳಿದ್ದರು. ಮುಂದೆ ಓದಿ...

ತಾತನ ಗೆಟಪ್ ನಲ್ಲಿ ಶಿವರಾಜ್ ಕುಮಾರ್

ತಾತನ ಗೆಟಪ್ ನಲ್ಲಿ ಶಿವರಾಜ್ ಕುಮಾರ್

ಅಭಿಮಾನಿಗೆ ಪಾಲಿಗೆ ಸದಾ ಶಿವಣ್ಣನಾಗಿರುವ ಶಿವರಾಜ್ ಕುಮಾರ್ ಹೀಗೆ ತಾತನ ಗೆಟಪ್ ಹಾಕಲು ಒಪ್ಪಿಕೊಂಡಿರುವಂಥ ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶಕರು. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಏಪ್ರಿಲ್ ನಲ್ಲಿ‌ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಶಿವಣ್ಣ ಅರ್ಜುನ್ ಗೆ ಈ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿ ವರ್ಷಗಳೇ ಕಳೆದಿವೆ.

ಶಿವಣ್ಣ ಅಂದರೆ ಮೊದಲಿಂದಲೂ ಇಷ್ಟ

ಶಿವಣ್ಣ ಅಂದರೆ ಮೊದಲಿಂದಲೂ ಇಷ್ಟ

"ನನಗೆ ಚಿತ್ರರಂಗಕ್ಕೆ ಬರುವ ಮೊದಲೇ ಶಿವಣ್ಣ ಅಂದರೆ ಇಷ್ಟ. ನಿಜ ಹೇಳಬೇಕೆಂದರೆ ಇದು ವರ್ಷಗಳ‌ ಹಿಂದೆಯೇ ಶಿವಣ್ಣನಿಗೆ ಕತೆ ಹೇಳಿ ಅವರಿಂದ ಮೆಚ್ಚುಗೆ ಪಡೆದಂಥ ಪ್ರಾಜೆಕ್ಟ್ ಆಗಿತ್ತು. ಆದರೆ ಡಿಮನಿಟೈಸೇಶನ್ ಕಾರಣದಿಂದ ನಿರ್ಮಾಪಕರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದರು. ಇಲ್ಲವಾಗಿದ್ದರೆ ಏಳು ತಿಂಗಳ ಹಿಂದೆ ಈ ಚಿತ್ರ ತಯಾರಾಗಿರುತ್ತಿತ್ತು. ಪರವಾಗಿಲ್ಲ, ಲೇಟ್ ಆದರೂ ಲೇಟೆಸ್ಟ್ ಆಗಿ ಬರಬಲ್ಲ ತಾಕತ್ತು ಶಿವಣ್ಣನಲ್ಲಿದೆ. ಈ ವರ್ಷ ಎಲ್ಲವೂ ಕೂಡಿ ಬಂದಿದೆ. ಹೊಸ ಚಿತ್ರಕ್ಕಾಗಿ ತೊಂಬತ್ತೊಂಬತ್ತು ಭಾಗದ ತಯಾರಿ ನಡೆಸಲಾಗಿದ್ದು, ಚಿತ್ರೀಕರಣ ಮಾತ್ರ ಉಳಿದಿರುವ ಸಂಗತಿ ಎಂದರು ಅರ್ಜುನ್.

ಸೆಂಚುರಿ ಸ್ಟಾರ್ ಗೆ ಮೆಚ್ಚುಗೆಯಾದಂಥ ಕತೆ

ಸೆಂಚುರಿ ಸ್ಟಾರ್ ಗೆ ಮೆಚ್ಚುಗೆಯಾದಂಥ ಕತೆ

ಚಿತ್ರದಲ್ಲಿ ಶಿವರಾಜ್ ಕುಮಾರ್ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂವತ್ತೈದು, ಐವತ್ತು ಮತ್ತು ಎಪ್ಪತ್ತೈದು ವರ್ಷಗಳ ಪಾತ್ರ ನಿರ್ವಹಿಸಲಿದ್ದಾರೆ! ಚಿತ್ರ 95ರ ಕಾಲಘಟ್ಟದಲ್ಲಿ ಶುರುವಾಗಲಿದ್ದು ಎಮೋಷನ್ಸ್ ತುಂಬಿಕೊಂಡಿದೆ ಎಂದಿದ್ದಾರೆ ಎ.ಪಿ ಅರ್ಜುನ್. ಸಹಜವಾಗಿಯೇ ಇದು ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

ಅಂಡರವಲ್ಡ್ ಜೊತೆ ಫ್ಯಾಮಿಲಿ ಎಮೋಶನ್ಸ್

ಅಂಡರವಲ್ಡ್ ಜೊತೆ ಫ್ಯಾಮಿಲಿ ಎಮೋಶನ್ಸ್

ಹಾಗಾದರೆ ಇದು ತಮಿಳಿನ 'ವಾರಣಂ ಆಯಿರಂ' ಚಿತ್ರವನ್ನು ನೆನಪಿಸಲಿದೆಯಾ ಎಂದು ಕೇಳಿದರೆ ಖಂಡಿತವಾಗಿ ಇಲ್ಲ, ಈ ಚಿತ್ರದಲ್ಲಿ ಮುಖ್ಯವಾಗಿ ಅಂಡರವಲ್ಡ್ ಇದೆ. ಅಂಡರ್ ವಲ್ಡ್ ಬೇಸ್ಡ್ ಚಿತ್ರದಲ್ಲಿ ಫ್ಯಾಮಿಲಿ ಎಮೋಶನ್ಸ್ ತರುವ ಪ್ರಯತ್ನ ನಡೆಸಲಿದ್ದೇನೆ ಎಂದಿದ್ದಾರೆ ಅರ್ಜುನ್. ಅಲ್ಲಿಗೆ ಶಿವಣ್ಣನ ಮುಂದಿನ ಚಿತ್ರ ಕ್ಲಾಸ್ ಮಾಸ್ ಪ್ರೇಕ್ಷಕರಿಗೆ ಹಬ್ಬವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ

ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ

ಪ್ರಸ್ತುತ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಕಿಸ್ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.‌ ಹೊಸಬರ ತಾರಾಗಣದಲ್ಲಿರುವ ಹೊಸತನದ 'ಕಿಸ್' ಚಿತ್ರ ಬಿಡುಗಡೆಯಾದ ಬಳಿಕ ಕೈಗೆತ್ತಿಕೊಳ್ಳಲಿರುವ ಮುಂದಿನ ಚಿತ್ರವೇ ಶಿವಣ್ಣನ ಸಿನಿಮಾ ಆಗಿರುತ್ತದೆ ಎಂದಿದ್ದಾರೆ ಅರ್ಜುನ್. ಇತ್ತ ಪಿ ವಾಸು ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ನಿರತರಾಗಿದ್ದಾರೆ.

More from Filmibeat

English summary
A P Arjun will be directing a movie to kananda actor Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X