TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅರೇ..29 ವರ್ಷದ ನಂತರ ಮತ್ತೆ ಸಿನಿಮಾ ಮಾಡ್ತಿದ್ದಾರೆ ಅಪರ್ಣಾ!

ನಿರೂಪಕಿ, ನಟಿ ಅಪರ್ಣಾ ಅವರ ಬಾಯಲ್ಲಿ ಕನ್ನಡ ಕೇಳುವುದೇ ಸೊಗಸು. ಹೆಚ್ಚು ನಿರೂಪಕಿಯಾಗಿಯೇ ಗುರುತಿಸಿಕೊಂಡಿರುವ ಅರ್ಪರ್ಣಾ ಆಗಾಗ ಸಿನಿಮಾ, ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ 'ಮಜಾ ಟಾಕೀಸ್'ನಲ್ಲಿ ಮೂಲಕ ಎಲ್ಲರನ್ನು ನಗಿಸುತ್ತಿರುವ ಇವರು ಇದೀಗ 29 ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.
ಅರ್ಪಣಾ ಮೊದಲು ಸಿನಿಮಾ ಮಾಡಿದ್ದು, 1984ರಲ್ಲಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಸಿನಿಮಾದಲ್ಲಿ ಒಂದು ಪಾತ್ರ ಮಾಡುವ ಮೂಲಕ ಅವರು ತಮ್ಮ ಸಿನಿಮಾ ಬದುಕು ಶುರು ಮಾಡಿದ್ದರು. ಆದರ ಬಳಿಕ ಶಿವರಾಜ್ ಕುಮಾರ್ ಅವರ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಕಾಣಿಸಿಕೊಂಡರು. ಅದೇ ವರ್ಷ ಇನ್ನೆರಡು ಸಿನಿಮಾ ಮಾಡಿದರು.
ವಿನಯ್ ರಾಜ್ ಕುಮಾರ್ ಗಾಗಿ ಗಾಜನೂರಿಗೆ ಬಂದ ಐಯ್ಯರ್ ಬೆಡಗಿ !
ಈ ಸಿನಿಮಾಗಳ ನಂತರ ಚಿತ್ರರಂಗದಿಂದ ಮರೆಯಾಗಿದ್ದ ಅರ್ಪಣಾ ಮತ್ತೆ ಈಗ ಬಣ್ಣ ಹಚ್ಚಿದ್ದಾರೆ. ಮುಂದೆ ಓದಿ...
ವಿನಯ್ ರಾಜ್ ಕುಮಾರ್ ಸಿನಿಮಾ
ನಟಿ ಅಪರ್ಣಾ 29 ವರ್ಷದ ನಂತರ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1989ರಲ್ಲಿ ಬಂದ ನಟ ವಿಷ್ಣುವರ್ಧನ್ ಅವರ 'ಒಂದಾಗಿ ಬಾಳು' ಅರ್ಪಣಾ ಅವರ ಕೊನೆಯ ಚಿತ್ರವಾಗಿತ್ತು. ಅವರ ಬಳಿಕ ಈಗ ವಿನಯ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಅರ್ಪಣಾ ಅಭಿನಯಿಸುತ್ತಿದ್ದಾರೆ.
'ಗ್ರಾಮಾಯಣ' ಚಿತ್ರ
ಅಪರ್ಣಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂದ ತಕ್ಷಣ ಅದು ಯಾವ ಸಿನಿಮಾ ಮೂಲಕ ಎಂಬ ಕುತೂಹಲ ಹುಟ್ಟುತ್ತದೆ. ಅಂದಹಾಗೆ, ಈಗ 'ಗ್ರಾಮಾಯಣ' ಚಿತ್ರದ ಮೂಲಕ ಅಪರ್ಣಾ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಪ್ಟೆಂಬರ್ 18 ರಂದು ಈ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ.
'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್, ಅಪರ್ಣ
ವಿನಯ್ ತಾಯಿ ಪಾತ್ರ
'ಗ್ರಾಮಾಯಣ' ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿದ್ದಾರೆ. ಅವರ ತಾಯಿಯ ಪಾತ್ರದಲ್ಲಿ ಅಪರ್ಣಾ ನಟಿಸುತ್ತಿದ್ದಾರೆ. ಒಬ್ಬ ಒರಟು ತಾಯಿಯ ಪಾತ್ರವನ್ನು ಅಪರ್ಣಾ ನಿರ್ವಹಿಸುತ್ತಿದ್ದು, ಕಡೂರು ಸುತ್ತಮುತ್ತಲ ಕನ್ನಡವನ್ನು ಅವರು ಮಾತನಾಡಲಿದ್ದಾರೆ.
ದ್ಯಾವನೂರು ಚಂದ್ರು ನಿರ್ದೇಶನ
ಈ ಚಿತ್ರವನ್ನು ದ್ಯಾವನೂರು ಚಂದ್ರು ಅವರು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ರಾಜ್ ಕುಮಾರ್ ಜೊತೆಗೆ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಎನ್ ಎಲ್ ಎನ್ ಮೂರ್ತಿ ಸಿನಿಮಾಗೆ ಬಂಡವಾಳ ಹಾಕಿದ್ದು, ಸಪ್ಟೆಂಬರ್ 6 ರಂದು ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಸಂತಸದಲ್ಲಿ ಅಪರ್ಣಾ
ಒಂದು ಒಳ್ಳೆಯ ಪಾತ್ರದ ಮೂಲಕ ಅಪರ್ಣಾ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಇದು ಅವರಿಗೂ ಖುಷಿ ನೀಡಿದೆಯಂತೆ. ಕಥೆ ಕೇಳಿ ಇಷ್ಟ ಪಟ್ಟು ಈ ಸಿನಿಮಾ ಮಾಡಲು ಖುಷಿಯಿಂದ ಅವರು ಒಪ್ಪಿಕೊಂಡರಂತೆ. ಒಂದು ಕ್ಷಣ ಆ ಪಾತ್ರ ಕೇಳಿ ರೋಮಾಂಚನಗೊಂಡರಂತೆ ಅಪರ್ಣಾ.