»   » 'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್

'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್

Posted By:
Subscribe to Filmibeat Kannada

'ಕನಸುಗಾರ' ರವಿಚಂದ್ರನ್ ಅವರ ಕನಸಿನ ಕೂಸು 'ಅಪೂರ್ವ' ಸಿನಿಮಾ ಸೆನ್ಸಾರ್ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿದ್ದು, ಈ ವಾರ (ಶುಕ್ರವಾರ, ಮೇ 27) ಬೆಂಗಳೂರಿನ 'ಕಪಾಲಿ' ಚಿತ್ರಮಂದಿರ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆಯ ವಿಷಯಕ್ಕೆ ಬಂದರೆ ಇನ್ನೂ ಚಿರಯುವಕನಂತೆ ಕಾಣುತ್ತಾರೆ. 61 ವರ್ಷದ ಮುದುಕ ಮತ್ತು 19 ವರ್ಷದ ಯುವತಿಯ ಕಥೆಯಾಧರಿತ 'ಅಪೂರ್ವ' ಚಿತ್ರವನ್ನು ಪೂರ್ತಿಗೊಳಿಸಲು ರವಿಚಂದ್ರನ್ ಅವರಿಗೆ ಬರೋಬ್ಬರಿ 30 ತಿಂಗಳು ಹಿಡಿಯಿತಂತೆ.[ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ]


'Apoorva' character is 61, but i look younger says Actor Ravichandran

ಅಂದಹಾಗೆ ತುಂಬಾ ದಿನಗಳ ನಂತರ 'ಅಪೂರ್ವ' ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬಹಳ ಸಂತಸ ನೀಡಿದ ಸಿನಿಮಾ ಆಗಿದೆ. ಹಾಗೂ ಈ ಚಿತ್ರದಲ್ಲಿ ನಾನು 61 ವರ್ಷದವನಾದರೂ ಇನ್ನೂ ಸಣ್ಣ ಯುವಕನಂತೆ ಕಾಣಿಸುತ್ತೇನೆ ಎನ್ನುತ್ತಾರೆ ರವಿಮಾಮ.


ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ

'ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ'.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ]


ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ

'ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]


ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ

'ಇದು ಹೊಸ ಪ್ರಕಾರದ ಸಿನಿಮಾ ಎಂದಿರುವ ರವಿಚಂದ್ರನ್ ಅವರು, ಈ ಚಿತ್ರದಲ್ಲಿ ಡ್ಯುಯೆಟ್ ಹಾಡು ಮತ್ತು ಹಾಸ್ಯ ದೃಶ್ಯಗಳನ್ನು ನಿರೀಕ್ಷಿಸಬೇಡಿ' ಎಂಬ ಎಚ್ಚರಿಕೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.


ನಟ ಕಮ್ ನಿರ್ದೇಶಕ ರವಿಚಂದ್ರನ್ ಅವರೇ ನಟಿಸಿ-ನಿರ್ದೇಶಿಸಿ-ಬಂಡವಾಳ ಹೂಡುತ್ತಿರುವ 'ಅಪೂರ್ವ' ಚಿತ್ರದಲ್ಲಿ ನವ ಪ್ರತಿಭೆ ಅಪೂರ್ವ ಅವರು ನಾಯಕಿಯಾಗಿ ಮಿಂಚಿದ್ದಾರೆ.

English summary
Kannada Actor Ravichandran's Kannada Movie 'Apoorva' which will release this week (May 27th, Friday). Actress Apoorva' in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada