'ಕಿಸ್' ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡ '1st Rank ರಾಜು' ನಟಿ
ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಬರುತ್ತಿರುವ 'ಕಿಸ್' ಸಿನಿಮಾದ ಹಾಡಿನ ಚಿತ್ರೀಕರಣ ಈಗ ನಡೆಯುತ್ತಿದೆ. ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಿದ್ದು, ಅದರ ಜೊತೆಗೆ ಸ್ಯಾಂಡಲ್ ವುಡ್ ನ ಇನ್ನೊಬ್ಬ ಯುವ ನಾಯಕಿ ಕೂಡ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಅಪೂರ್ವ ಗೌಡ ಈಗ 'ಕಿಸ್' ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ '1st Rank ರಾಜು' ಸಿನಿಮಾದಲ್ಲಿ ನಟಿಸಿದ್ದ ಅಪೂರ್ವಗೆ ಚಿತ್ರದ ಹಾಡಿನಲ್ಲಿ ಕುಣಿಯುವ ಅವಕಾಶ ಸಿಕ್ಕಿದೆ. ನಟ ವಿರಾಟ್ ಜೊತೆಗೆ ಹೆಜ್ಜೆ ಹಾಕುತ್ತಿರುವ ಅಪೂರ್ವ ಅವರ ಪೋಟೋಗಳು 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿವೆ. ಚಿತ್ರದ ಈ ಹಾಡಿನಲ್ಲಿ ಬ್ಲಾಕ್ ಅಂಡ್ ರೆಡ್ ಡ್ರೆಸ್ ನಲ್ಲಿ ಅಪೂರ್ವ ಮಿಂಚಿದ್ದಾರೆ.

'ಕಿಸ್' ಸಿನಿಮಾದ ಶೂಟಿಂಗ್ ಸೆಟ್ ಗೆ ಶಿವರಾಜ್ ಕುಮಾರ್ ಸಹ ಭೇಟಿ ನೀಡಿದ್ದಾರೆ. ಶಿವಣ್ಣ, ಅಪೂರ್ವ ಗೌಡ, ವಿರಾಟ್ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್ ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ.
ಅಂದಹಾಗೆ, 'ಕಿಸ್' ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ ಅಡಿಯಲ್ಲಿ ವಿ.ರವಿಕುಮಾರ್ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.


Click it and Unblock the Notifications











