»   » ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಿಯತಮೆ 'ಅಪೂರ್ವ' ಯಾರೀಕೆ?

ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಿಯತಮೆ 'ಅಪೂರ್ವ' ಯಾರೀಕೆ?

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಚಿತ್ರದಲ್ಲಿ ಯಾವುದಾದರೊಂದು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಚಿತ್ರದ ಮೂಲಕ ಹೊಸ-ಹೊಸ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸುತ್ತಿರುತ್ತಾರೆ.

ಇದೀಗ ಅವರ ಹೊಸ ವಿಭಿನ್ನ ಸಿನಿಮಾ 'ಅಪೂರ್ವ' ಈ ಶುಕ್ರವಾರ (ಮೇ 27) ತೆರೆಗೆ ಬರಲು ಸಜ್ಜಾಗಿ ನಿಂತಿದ್ದು, ಈ ಸಿನಿಮಾದಲ್ಲೂ ಹೊಸ ಪ್ರತಿಭೆ ನಟಿ ಅಪೂರ್ವ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.['ಅಪೂರ್ವ' ಚಿತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್.!]


ಈಗಾಗಲೇ ಹಲವಾರು ಡಿಫರೆಂಟ್ ಪೋಸ್ಟರ್ ಗಳ ಮೂಲಕ ಭಾರಿ ಕುತೂಹಲ ಹುಟ್ಟಿಸಿರುವ 'ಅಪೂರ್ವ' ಚಿತ್ರದ ನಾಯಕಿ ಅಪೂರ್ವ ಅವರ ಬಗ್ಗೆ ರವಿಚಂದ್ರನ್ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಇದೀಗ ನಟಿ ಅಪೂರ್ವ ಅವರ ಬಗ್ಗೆ ಒಂದೊಂದೇ ವಿಚಾರಗಳು ಹೊರ ಬರುತ್ತಿವೆ.['ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್]


ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚೊಚ್ಚಲ ಬಾರಿಗೆ ತಮ್ಮ 'ಅಪೂರ್ವ' ಚಿತ್ರದ ಮೂಲಕ ಅಪೂರ್ವ ಎಂಬ ಹುಡುಗಿಯನ್ನು ಪರಿಚಯ ಮಾಡಿಸುತ್ತಿದ್ದಾರೆ. ನಟಿ ಅಪೂರ್ವ ಅವರ ಸಂಪೂರ್ಣ ಚಿತ್ರಣವನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಮೂಲತಃ ಎಲ್ಲಿಯವರು?

ನಟಿ ಅಪೂರ್ವ ಅವರು ಮೂಲತಃ ಚಿಕ್ಕಮಗಳೂರಿನವರಾದರು ಸದ್ಯಕ್ಕೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಇವರು ನಿಜ ನಾಮಧೇಯ ಬೇರೆ ಇದೆ, ನಟ ರವಿಚಂದ್ರನ್ ಅವರು ಇಟ್ಟ ಹೆಸರು 'ಅಪೂರ್ವ'. ಇನ್ನು ಮುಂದಕ್ಕೆ ಇದೇ ಹೆಸರಿನಿಂದ ಸಿನಿಮಾ ಜರ್ನಿ ಶುರು ಮಾಡಬೇಕೆಂಬ ಸಲಹೆಯನ್ನು ಕೂಡ ರವಿಮಾಮ ನೀಡಿದ್ದಾರಂತೆ.[ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ]


ರವಿಮಾಮನಿಗೆ 'ಅಪೂರ್ವ' ಸಿಕ್ಕಿದ್ದು ಹೇಗೆ?

ಕಾಲೇಜು ದಿನಗಳಲ್ಲಿ ರ್ಯಾಂಪ್ ವಾಕ್, ಡ್ಯಾನ್ಸ್ ಅಂತ ಸ್ಟೇಜ್ ಮೇಲೆ ಕಾಣಿಸಿಕೊಳ್ಳುತ್ತಿದ್ದ ನಟಿ ಅಪೂರ್ವ ಅವರು ತಮ್ಮದೇ ಕಾಲೇಜಿನ ಸಮಾರಂಭವೊಂದರಲ್ಲಿ ರವಿಚಂದ್ರನ್ ಅವರನ್ನು ಕಂಡಿದ್ದರು. ತದನಂತರ ರವಿಚಂದ್ರನ್ ಅವರು ಅವರ ಚಿತ್ರಕ್ಕೆ ಆಡಿಷನ್ ಗೆ ಕರೆದಿದ್ದಾರೆ ಎಂದು ತಿಳಿದಾಗ, ಹೇಗೋ ರವಿ ಅವರ ಇ-ಮೇಲ್ ಐಡಿ ಪಡೆದುಕೊಂಡು ಸುಮ್ಮನೆ ನಾಲ್ಕೈದು ಫೋಟೋ ಕಳುಹಿಸಿದ್ದರು.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ]


ಅಪೂರ್ವ ಮನದಾಳದ ಮಾತು

'ನಾನು ಬಿಕಾಂ ಓದುತ್ತಿದ್ದ ಸಂದರ್ಭದಲ್ಲಿ ರವಿ ಸಾರ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಿಂದ ಅವರಿಗೆ ಫೋಟೋ ಕಳುಹಿಸಿದೆ. ಅವರು 3-4 ತಿಂಗಳೊಳಗೆ ಆಡಿಷನ್ ಗೆ ಕರೆದರು. ನನಗೆ ತುಂಬಾನೇ ಖುಷಿ ಆಯಿತು. ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ ರವಿಚಂದ್ರನ್ ಸಾರ್ ಜೊತೆ ನಟಿಸುತ್ತೇನೆ ಅಂತ'.-ನಟಿ ಅಪೂರ್ವ.


ರಿಜೆಕ್ಟ್ ಕೂಡ ಆಗಿದ್ದರು

ಅಪೂರ್ವ ಅವರು ಮೊದಲು ಕಳುಹಿಸಿದ್ದ ಫೋಟೋ ನೋಡಿ ಇಷ್ಟಪಟ್ಟಿದ್ದ ರವಿಚಂದ್ರನ್ ಅವರು ಅವರನ್ನು ಕರೆಸಿ ಮತ್ತೊಂದು ಫೋಟೋ ಶೂಟ್ ಮಾಡುತ್ತಾರೆ. ಆದರೆ ಅ ಫೋಟೋದಲ್ಲಿ ಅಪೂರ್ವ ಅವರು ಅಷ್ಟಾಗಿ ಚೆನ್ನಾಗಿ ಕಾಣದ ಕಾರಣ ರಿಜೆಕ್ಟ್ ಮಾಡಿದ್ದರು.


ರವಿಮಾಮನ ಮನದ ಮಾತು

'ಅವಳು ಕಳುಹಿಸಿದ ಫೋಟೋ ಚೆನ್ನಾಗಿತ್ತು ಆದರೆ ನಾವು ಮಾಡಿದ ಫೋಟೋ ಶೂಟ್ ನಲ್ಲಿ ಯಾಕೋ ಅವಳು ಚೆನ್ನಾಗಿ ಕಾಣಿಸಲಿಲ್ಲ. ಅದಕ್ಕೆ ಅವಳನ್ನು ಕೈ ಬಿಟ್ಟು ಬೇರೆ ಹುಡುಗಿಯನ್ನು ನೋಡೋಣ ಅಂತ ನಿರ್ಧಾರ ಮಾಡಿದ್ವಿ. ಆದರೂ ಅವಳು ಕಳುಹಿಸಿದ್ದ ಫೋಟೋ ಚೆನ್ನಾಗಿತ್ತಲ್ವ, ಮತ್ತೆ ನಮ್ಮಲ್ಲಿ ಯಾಕೆ ಹೀಗಾಯ್ತು ಅಂತ ಯೋಚನೆ ಮಾಡಿ ಮತ್ತೆ ನಾವು ಮತ್ತೊಂದು ಫೋಟೋ ಶೂಟ್ ಆರೇಂಜ್ ಮಾಡಿದ್ವಿ'-ರವಿಚಂದ್ರನ್.


ಸೆಕೆಂಡ್ ಫೋಟೋ ಶೂಟ್

'ಎರಡನೇ ಬಾರಿಗೆ ಫೋಟೋ ಶೂಟ್ ಗೆ ಆರೇಂಜ್ ಮಾಡಿ ಅವಳನ್ನು ಕರೆಸಿದ್ವಿ. ಆವಾಗ ಅವಳ ಹೇರ್ ಸ್ಟೈಲ್ ಚೇಂಜ್ ಮಾಡಿ, ಕಾಸ್ಟ್ಯೂಮ್, ಮೇಕಪ್ಪು ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಹಾಕಿಸಿ ಫೋಟೋ ಶೂಟ್ ಮಾಡಿದಾಗ ನನ್ನ ಸಿನಿಮಾಕ್ಕೆ ಬೇಕಾದ ಪರ್ಫೆಕ್ಟ್ ಹುಡುಗಿ ಸಿಕ್ಕಳು' ಎನ್ನುತ್ತಾರೆ 'ಕನಸುಗಾರ' ರವಿಚಂದ್ರನ್.


ಪಾತ್ರಕ್ಕೆ ಮುಗ್ದ ಹುಡುಗಿ ಬೇಕಿತ್ತು

'ನನ್ನ ಸಿನಿಮಾದ ಪಾತ್ರಕ್ಕೆ ತುಂಬಾ ಮುಗ್ದವಾದ ಮತ್ತು ಏನೂ ಗೊತ್ತಿರದ ಹುಡುಗಿ ಬೇಕಿತ್ತು, ಅದಕ್ಕೆ ನಾನು ಅವಳಿಗೆ ಆಡಿಷನ್ ಅಂತ ಹೇಳದೇ, ಒಂದಿನಾ ಸುಮ್ಮನೆ ಸಿನಿಮಾ ಶೂಟಿಂಗ್ ಮಾಡೋಣ ಅಂತ ಅವಳಿಗೆ ಹೇಳಿ ಹಾಡು ಶೂಟ್ ಮಾಡಿಸಿದೆ. ಅವಾಗ ಅವಳ ಬಗ್ಗೆ ಎಲ್ಲಾ ಗೊತ್ತಾಯ್ತು, ಅವಳನ್ನು ಎಲ್ಲಿ ತಿದ್ದಬಹುದು, ಅವಳಿಂದ ಹೇಗೆ ನಟನೆ ಮಾಡಿಸಬಹುದು ಅಂತ ಗೊತ್ತಾಗಿ ಎಲ್ಲವನ್ನೂ ಒಂದೊಂದಾಗಿ ಕರೆಕ್ಷನ್ ಮಾಡುತ್ತಾ ಶೂಟಿಂಗ್ ಶುರು ಮಾಡಿದೆ'.-ಕ್ರೇಜಿಸ್ಟಾರ್ ರವಿಚಂದ್ರನ್.


ಆಡಂಬರ ಬೇಕಿರಲಿಲ್ಲ

'ನನ್ನ ಸಿನಿಮಾದ ಹುಡುಗಿಯಲ್ಲಿ ನನಗೆ ಆಡಂಬರ ಬೇಕಿರಲಿಲ್ಲ, ಪೂರ್ತಿ ಹೊಸ ಹುಡುಗಿಯೇ ಬೇಕಿತ್ತು, ಏನೂ ಗೊತ್ತಿರದ ಚಿಕ್ಕ ಹುಡುಗಿ ಬೇಕಾಗಿತ್ತು, ಅದಕ್ಕೆ ಸರಿಯಾಗಿ ಅವಳು ಫೋಟೋ ಕಳುಹಿಸಿದಾಗ ಅವಳಿಗೆ 19 ವರ್ಷ ಆಗಿತ್ತಷ್ಟೇ. ಜೊತೆಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ'.-ರವಿಚಂದ್ರನ್.


ಅಪೂರ್ವ ಮಾತು

'ನನಗೆ ಮೊದ ಮೊದಲು ರವಿಚಂದ್ರನ್ ಸರ್ ಜೊತೆ ನಟನೆ ಅಂದಾಗ ತುಂಬಾ ಭಯ ಆಗುತ್ತಿತ್ತು. ಆದರೆ ಅವರು ನನ್ನ ಭಯವನ್ನು ಹೋಗಲಾಡಿಸಿ ನನ್ನಿಂದ ನಟನೆ ಮಾಡಿಸಿದ್ದಾರೆ. ರವಿಚಂದ್ರನ್ ಸರ್ ರಂತಹ ಲೆಜೆಂಡರಿ ನಟರ ಜೊತೆ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ನನ್ನ ಫ್ರೆಂಡ್ಸ್ ಕೂಡ ತುಂಬಾ ಖುಷಿ ಪಟ್ಟಿದ್ದಾರೆ. ನನ್ನ ಅಮ್ಮನಿಗೆ ರವಿ ಸರ್ ಅಂದ್ರೆ ತುಂಬಾ ಇಷ್ಟ. ಈ ವಾರ ಸಿನಿಮಾ ರಿಲೀಸ್ ಆಗುತ್ತಿದೆ ನಾನಂತೂ ತುಂಬಾ ಎಕ್ಸೈಟ್ ಆಗಿದ್ದೀನಿ'. ನಟಿ ಅಪೂರ್ವ.


English summary
Actor Ravichandran given a new beginning to youngsters dreaming about an entry into film industry. With his latest film, Apoorva, he has again proved that as an old-timer, creatively going into maturity, there is a will to give a chance to budding talents. And he did so with the Actress Apoorva.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada