Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪ್ಪ- ಮಗಂದ್ ಕಥೆ ನೋಡಿ ಆನಂದಿಸಿ!
ಅಪ್ಪ ಹಾಗೂ ಮಗನ ಸಂಬಂಧದ ಬಗ್ಗೆ ಅನೇಕ ಕನ್ನಡ ಚಿತ್ರಗಳಲ್ಲಿ ಅನೇಕ ತುಣುಕುಗಳನ್ನು ಕಂಡಿರಬಹುದು. ಆದರೆ, ಹಾಸ್ಯ ಪ್ರಧಾನವಾಗಿ ಎಲ್ಲರ ಮನೆಯಲ್ಲೂ ಇರಬಹುದಾದ ಪರಿಸ್ಥಿತಿಯನ್ನು 5 ನಿಮಿಷಗೊಳಗಿನ ಕಿರುಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಈಗಾಗಲೇ ಹಾಸ್ಯ ಪ್ರಧಾನ ಕಿರುಚಿತ್ರಗಳ ಮೂಲಕ ಕನ್ನಡ ರಸಿಕರನ್ನು ರಂಜಿಸುತ್ತಾ ಬಂದಿರುವ ನಮ್ದುಕೆ ತಂಡ ಈಗ ಕನ್ನಡ ಚಲನಚಿತ್ರರಂಗಕ್ಕೆ ಪ್ರಚಾರ ನೀಡುವ ನಿಟ್ಟಿನಲ್ಲಿ ಹಾಸ್ಯ ಸನ್ನಿವೇಶ ಆಧಾರಿಸಿದ ಕಿರುಚಿತ್ರ, ಉತ್ತಮ ಪಾತ್ರಗಳ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಗಳನ್ನು ಸಿದ್ಧಪಡಿಸಿಕೊಂಡಿದೆ.
ಅಪ್ಪ ಮಗಂದ್ ಸ್ಟೋರಿ: ಅಪ್ಪ-ಮಕ್ಕಳ ನಡುವೆ ನಡೆಯುವ ಸತ್ಯ ಘಟನೆಗಳ ಆಧಾರ ಮೇಲೆ ಈ ಕಿರುಚಿತ್ರ ರೂಪಿಸಲಾಗಿದೆ. ಇಲ್ಲಿ ಅಪ್ಪ ಅಂದರೆ ಭಯ ಹಾಗೂ ಅಭಯ ಎರಡು ರೀತಿಯಲ್ಲಿ ಕಾಣಬಹುದು. ಹಾಸ್ಯಲೇಪನದ ಜೊತೆಗೆ ಗ್ರಾಫಿಕ್ಸ್ ಬಳಸಿ ಎಲ್ಲರಿಗೂ ಸುಲಭಕ್ಕೆ ಅರ್ಥವಾಗುವಂತೆ ಮಾಡಲಾಗಿದೆ ಎಂದು ನಿರ್ದೇಶಕ ಶ್ರವಣ್ ನಾರಾಯಣ್ ಹೇಳಿದ್ದಾರೆ.
ನಿಮ್ಮ ಹಣೆಬರಹಕ್ಕೆ ನಾವು ಹೊಣೆಗಾರರಲ್ಲ ಎಂಬ ಒಕ್ಕಣೆಯೊಂದಿಗೆ ಶುರುವಾಗುವ ಈ ಕಿರುಚಿತ್ರದಲ್ಲಿ ಮುಖ್ಯವಾಗಿ ಮೂರು ಪಾತ್ರಗಳಿವೆ. ಮೂರು ಸನ್ನಿವೇಶಗಳಿವೆ. ಈ ಸನ್ನಿವೇಶಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ದಿನ ನಡೆದಿರಬಹುದು. ಮನೆಯಲ್ಲಿ ಉಗ್ರಪ್ರತಾಪಿ ಅಪ್ಪ, ಗೆಳೆಯರ ಮಾತು ನಂಬುವ ಮಗ. ಇವರಿಬ್ಬರ ನಡುವಿನ ದೃಶ್ಯಗಳು ಎಲ್ಲರನ್ನು ಒಮ್ಮೆ ಕಾಡುವಂತಿದೆ.

ಮೊದಲ ಸನ್ನಿವೇಶದಲ್ಲಿ ಪಾಕೆಟ್ ಮನಿ
ಮೊದಲ ಸನ್ನಿವೇಶದಲ್ಲಿ ಪಾಕೆಟ್ ಮನಿ ಪಡೆಯುವ ಗೆಳೆಯನನ್ನು ಕಂಡು ತನಗೂ ಪಾಕೆಟ್ ಮನಿ ಬೇಕು ಎಂದು ಹಠ ಹಿಡಿಯುವ ಮಗನಿಗೆ ಅಪ್ಪನಿಂದ ಸರಿಯಾಗಿ ಗೂಸಾ ಸಿಗುತ್ತದೆ. ಮಿಕ್ಕ ಸನ್ನಿವೇಶ ನೀವೇ ನೋಡ್ಕೊಳಿ

ಮೊದಲ ಪಾತ್ರ ನತದೃಷ್ಟ ಮಗ
ಮೊದಲ ಪಾತ್ರ ನತದೃಷ್ಟ ಮಗನಾಗಿ ನಿರ್ದೇಶಕ ಶ್ರವಣ್ ಅವರೇ ನಟಿಸಿದ್ದಾರೆ. ಪೋಷಕರ ಬಗ್ಗೆ ತಿಳಿದುಕೊಳ್ಳದೆ, ಗೆಳೆಯರ ಮಾತು ಕೇಳಿ ಬೆಳೆಯುವ ಎಲ್ಲರಂತೆ ಇರುವ ಸಾಮಾನ್ಯ ಯುವಕ.

ಖಡಕ್ ಅಪ್ಪನ ಪಾತ್ರ
ಖಡಕ್ ಅಪ್ಪನ ಪಾತ್ರದಲ್ಲಿ ಭಾರದ್ವಾಜ್ ನಟಿಸಿದ್ದು, ಮಗ ನಡವಳಿಕೆಯಿಂದ ಬೇಸತ್ತು ಸಮಯ ಸಿಕ್ಕಾಗಲೆಲ್ಲ ಸರಿಯಾಗಿ ಬಾರಿಸುವ ಪಾತ್ರ.

ಬಿಟ್ಟಿ ಸಲಹೆ ನೀಡುವೆ ಗೆಳೆಯ
ಬಿಟ್ಟಿ ಸಲಹೆ ನೀಡುವೆ ಗೆಳೆಯನ ಪಾತ್ರದಲ್ಲಿ ಸಂದೀಪ್ ನಟಿಸಿದ್ದಾರೆ. ಫ್ರೆಂಡ್ಸ್ ಗ್ರೂಪ್ ನಲ್ಲಿ ಇಂಥ ಗೆಳೆಯರು ಬೇಜಾನ್ ಜನ ಇರ್ತಾರೆ ಬಿಡಿ.
ಇನ್ನೇಕೆ ತಡ ನೋಡಿ ನಕ್ಕು ನಲಿಯಿರಿ
ಇನ್ನೇಕೆ ತಡ! ಅಪ್ಪ-ಮಗಂದ್ ಸ್ಟೋರಿ ನೋಡಿ ನಕ್ಕು ನಲಿಯಿರಿ.