»   » ಮಹಿಳೆಯರ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಅರ್ಜಿ ಆಹ್ವಾನ

ಮಹಿಳೆಯರ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಅರ್ಜಿ ಆಹ್ವಾನ

Posted By:
Subscribe to Filmibeat Kannada

ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಅಭಿವೃದ್ದಿ, ವಿಜ್ಞಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹಾಗೂ ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮಹಿಳಾ ಸಾಧಕಿಯರ ಜೀವನ-ಸಾಧನೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉದ್ದೇಶಿಸಿದೆ.

ಆದ್ದರಿಂದ ವಿಶೇಷ ಸಾಧನೆಗೈದ ನಾಡಿನ ಮಹಿಳೆಯರು, ಸ್ವವಿವರವುಳ್ಳ ಪರಿಚಯ ಪತ್ರ, ತಮ್ಮ ಸಾಧನೆಯ ವಿವರ ಹಾಗೂ ಇನ್ನಿತರೆ ಮಾಹಿತಿಗಳೊಂದಿಗೆ ಅರ್ಜಿಗಳನ್ನು ವಾರ್ತಾ ಇಲಾಖೆ ಆಹ್ವಾನಿಸಿದೆ.

Applications invited for Documentary on Woman Achievers

ಅರ್ಜಿ ಸಲ್ಲಿಸುವ ಸ್ಥಳ: ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ) ಬೆಂಗಳೂರು - 560 001.


ಇಲ್ಲಿಗೆ ದಿನಾಂಕ: 10-07-2015 ರ ಒಳಗೆ ಅರ್ಜಿ ಸಲ್ಲಿಸಬಹುದು.

English summary
Karnataka Information and Broadcasting Department has invited applications for Documentary on Woman Achievers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada