»   » ಇವರಿಗೆಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ರೋಣಾಚಾರ್ಯ ಅಂತೆ.!

ಇವರಿಗೆಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ರೋಣಾಚಾರ್ಯ ಅಂತೆ.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಹಿರಿಯರಿಂದ ಕಿರಿಯರವರೆಗೂ ಅಭಿಮಾನಿಗಳಿರುವ ನಟ. ಆನ್ ಸ್ಕ್ರೀನ್ ಆಗಲಿ ಆಫ್ ಸ್ಕ್ರೀನ್ ಆಗಲಿ ಅಪ್ಪು ಅಂದ್ರೆ ಜನರಿಗೆ ಅದೇನೋ ಅಚ್ಚು-ಮೆಚ್ಚು. ಡ್ಯಾನ್ಸ್ ಮತ್ತು ಸ್ಟಂಟ್ಸ್ ನಿಂದಲೇ ಫೇಮಸ್ ಆಗಿರುವ ಅಪ್ಪು ಬಾಲ ನಟನಿಂದಲೂ ತಮ್ಮ ಪ್ರತಿಭೆ ಮೂಲಕ ಜಾದು ಮಾಡುತ್ತಾ ಬಂದಿದ್ದಾರೆ. ಈ ಅಪ್ರತಿಮ ಕಲಾವಿದನಿಗೆ ಹೊಸ ಅಭಿಮಾನಿ ಬಳಗವೊಂದು ಹುಟ್ಟಿಕೊಂಡಿದೆ.

ಮೈಸೂರಿನಲ್ಲಿ ಹುಟ್ಟಿಕೊಂಡಿರುವ ಅಪ್ಪು ಫ್ಯಾನ್ಸ್ ಎಲ್ಲರಂತೆ ಅಲ್ಲ. ಇವರಿಗೆ ಪುನೀತ್ ರಾಜ್ ಕುಮಾರ್ ಅವರೇ ಸ್ಫೂರ್ತಿ. ಇಂದು ಇವರುಗಳು ಏನೇ ಸಾಧಿಸಿದ್ರೂ, ಅದಕ್ಕೆ ಪುನೀತ್ ರಾಜ್ ಕುಮಾರ್ ಕಾರಣ. ಅಪ್ಪುವನ್ನ ದ್ರೋಣಾಚಾರ್ಯ ಗುರುಗಳಂತೆ ಈ ಅಭಿಮಾನಿಗಳು ಸ್ವೀಕರಿಸಿದ್ದಾರೆ. ಹಾಗಾದ್ರೆ ಅಂತಹ ಸ್ಪೆಷಲ್ ಏನಿದೆ ಈ ಟೀಂ ನಲ್ಲಿ.? ಇವ್ರುಗಳು ಮಾಡಿರುವ ಸಾಧನೆ.? ಏನು ಮುಂದೆ ಓದಿ....

ಹಿಂಗೂ ಇರ್ತಾರೆ ಅಭಿಮಾನಿಗಳು.!

ಮೈಸೂರಿನಲ್ಲಿ ನಟ 'ಪುನೀತ್ ರಾಜ್ ಕುಮಾರ್' ಗಾಗಿ ಹೊಸ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಾಗಂತ ಇವರೆಲ್ಲರೂ ಹೊಸ ಅಭಿಮಾನಿಗಳಲ್ಲ, ಸಾಕಷ್ಟು ವರ್ಷಗಳಿಂದ ಅಪ್ಪು ಅವರನ್ನ ಫಾಲೋ ಮಾಡುತ್ತಿರುವ ಫ್ಯಾನ್ಸ್. ಪುನೀತ್ ರನ್ನ ತೆರೆ ಮೇಲೆ ಸ್ಫೂರ್ತಿಗೊಂಡಿರುವ ಇವರೆಲ್ಲರೂ ಅವರಂತೆ ಸ್ಟಂಟ್ಸ್ ಮಾಡೋದನ್ನ ಕಲಿತಿದ್ದಾರೆ.

ಸಿನಿಮಾ ನೋಡಿ ಸ್ಫೂರ್ತಿಗೊಂಡ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ಅಂದ್ರೆ ಪ್ರತಿಯೊಬ್ಬರಿಗೂ ಮೊದಲ ನೆನಪಿಗೆ ಬರುವುದು ಅವರ ಡ್ಯಾನ್ಸ್ ಮತ್ತು ಸ್ಟಂಟ್ಸ್. ಚಿತ್ರಗಳಲ್ಲಿ ಅಪ್ಪು ಮಾಡುವ ಸಾಹಸಗಳನ್ನ ಅಭಿಮಾನಿಗಳು ಕಲಿತು ಪ್ರದರ್ಶನ ಮಾಡಿದ್ದಾರೆ. ಗೋಪಿ ಎನ್ನುವ ಮೈಸೂರು ಮೂಲದ ಅಭಿಮಾನಿ ತನ್ನ ಜೊತೆಯಲ್ಲಿ ಹತ್ತು ಜನ ಸ್ನೇಹಿತರನ್ನ ಸೇರಿಸಿಕೊಂಡು ಪುನೀತ್ ರಂತೆ ಸಾಹಸವನ್ನ ಮಾಡುತ್ತಾರೆ.

ಅಪ್ಪು ಮುಂದೆ ಪ್ರದರ್ಶನ ಮಾಡಲು ಸಜ್ಜು

ಈ ಅಭಿಮಾನಿಗಳು ಯಾವುದೇ ಉಪಕರಣಗಳಿಲ್ಲದೆ ಸ್ಟಂಟ್ ಮಾಡಲು ಕಲಿತಿದ್ದಾರೆ. ಅದ್ಭುತವಾಗಿ ಸಾಹಸಗಳನ್ನ ಮಾಡುವ ಇವರುಗಳ ಮುಖ್ಯ ಉದ್ದೇಶ ಪುನೀತ್ ರ ಮುಂದೆ ತಾವು ಕಲಿತಿರುವ ಕಲೆಯನ್ನ ಪ್ರದರ್ಶನ ಮಾಡಬೇಕು ಎನ್ನುವುದು. ಅದಕ್ಕಾಗಿ ಬೇಕಾರುವ ಎಲ್ಲಾ ರೀತಿ ತಯಾರಿ ಮಾಡಿಕೊಳ್ತಿದ್ದಾರೆ.

ಸಾಹಸ ದೃಶ್ಯಗಳಿಗೆ ಸಿಕ್ತಿದೆ ಮೆಚ್ಚುಗೆ

ಮೈಸೂರಿನ ಅಭಿಮಾನಿಗಳು ತಾವು ಕಲಿತಿರುವ ಸಾಹಸವನ್ನ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿ ಜನರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.

English summary
Puneeth Rajkumar Fans in Mysore are learning and performing Action Scenes of Appu in Kannada cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada