»   » ಕರ್ನಾಟಕ ಗಡಿ ದಾಟಿದ ಅಪ್ಪು ಪಪ್ಪುವಿನ ರಥಯಾತ್ರೆ

ಕರ್ನಾಟಕ ಗಡಿ ದಾಟಿದ ಅಪ್ಪು ಪಪ್ಪುವಿನ ರಥಯಾತ್ರೆ

Posted By:
Subscribe to Filmibeat Kannada
Kannada Movie Appu Pappu
ಮಾಸ್ಟರ್ ಸ್ನೇಹಿತ್ ಹಾಗೂ ಒರಾಂಗ್ಟಾನ್ ಪ್ರಮುಖ ಪಾತ್ರದಲ್ಲಿದ್ದ 'ಅಪ್ಪು ಪಪ್ಪು' ಕಳೆದ ವರ್ಷ, ಅಂದರೆ 2011 ರಲ್ಲಿ ಬಿಡುಗಡೆಯಾಗಿತ್ತು. ಸೌಂದರ್ಯ ಜಗದೀಶ್ ಪುತ್ರ ಮಾಸ್ಟರ್ ಸ್ನೇಹಿತ್ ಅವರನ್ನು ಕನ್ನಡ ಚಿತ್ರದ ಮೂಲಕ ಗೆಲ್ಲಿಸುವ ಪ್ರಯತ್ನ ಫಲಕೊಟ್ಟಿರಲಿಲ್ಲ.

ಅದೇನೇ ಸರ್ಕಸ್ ಮಾಡಿದರೂ ಕನ್ನಡದಲ್ಲಿ ಈ 'ಅಪ್ಪು ಪಪ್ಪು' ಚಿತ್ರ ಗೆಲ್ಲಲೇ ಇಲ್ಲ. ಜನರು ಚಿತ್ರಮಂದಿರದ ಕಡೆ ಮುಖ ಹಾಕಲೇ ಇಲ್ಲ. ಒರಾಂಗ್ಟಾನ್ ಚಿತ್ರವನ್ನು ಪೋಸ್ಟರಿನಲ್ಲಿ ನೋಡಿಯೇ ಜನ ಖುಷಿಪಟ್ಟರೋ ಏನೋ, ಚಿತ್ರಮಂದಿರ ತುಂಬಲಿಲ್ಲ. ಮಾ ಸ್ನೇಹಿತ್ ನನ್ನು ಪ್ರೇಕ್ಷಕರು ಸ್ನೇಹಿತನನ್ನಾಗಿ ಮಾಡಿಕೊಳ್ಳಲೇ ಇಲ್ಲ.

ಮಾಸ್ಟರ್ ಸ್ನೇಹಿತ್ ಕನ್ನಡದಲ್ಲಿ ಇನ್ನೊಬ್ಬ ಮಾ ಕಿಶನ್ ಆಗುವ ಛಾನ್ಸ್ ಮಿಸ್ ಆಗಿಹೋಯಿತು. ಈಗ ಇದೇ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿಯತ್ತ ಹೊರಟಿದೆ. ನಿರ್ಮಾಪಕ ಸೌಂದರ್ಯ ಜಗದೀಶ್, ಅಪ್ಪು-ಪಪ್ಪುವಿನ ತಮಿಳು ಡಬ್ಬಿಂಗ್ ಮುಗಿಸಿ, ಇದೇ ವಾರ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

ಅಪ್ಪು ಎಂದರೆ ಮಾಸ್ಟರ್ ಸ್ನೇಹಿತ್. ಪಪ್ಪು ಎಂದರೆ ಒರಾಂಗ್ಟಾನ್. ಇವರಿಬ್ಬರೂ ಸೇರಿಕೊಂಡು ಚಿತ್ರದಲ್ಲಿರುವ ಇತರ ಪಾತ್ರಗಳಿಗೆ ಚಳ್ಳೇಹಣ್ಣು ತಿನ್ನಿಸುವುದೇ ಚಿತ್ರದ ಕಥೆ. ಕಥೆಗಿಂತಲೂ ಹೆಚ್ಚಾಗಿ ಇಲ್ಲಿ ಗಮನ ಸೆಳೆದದ್ದು ಒರಾಂಗ್ಟನ್ ಮತ್ತು ಸ್ನೇಹಿತ್ ಆಟ-ಒಡನಾಟ. ನಿರ್ದೇಶಕ ಅನಂತರಾಜು ಈ ಚಿತ್ರವನ್ನು ನಿರ್ದೇಶಿಸಿದ್ದರು.

ಇದರ ತಮಿಳು ಡಬ್ಬಿಂಗ್ ಹಕ್ಕುಗಳನ್ನು ನಿರ್ದೇಶಕ, ನಿರ್ಮಾಪಕ ರಾಮನಾರಾಯಣ್ ಖರೀದಿಸಿದ್ದರು. ಈಗ ಅವರು ಅಂದಕೊಂಡಂತೆ ಎಲ್ಲಾ ಮುಗಿಸಿ ಬಿಡುಗಡೆ ಮಾಡುತ್ತಿದ್ದಾರೆ. ಜೂನ್ 8, 2012 ರಂದು 'ಅಪ್ಪು ಪಪ್ಪು' ತಮಿಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂಬಂಧ ತಮಿಳು ಪತ್ರಿಕೆಗಳಲ್ಲಿ ಜಾಹೀರಾತು ಕಣ್ಣುಕುಕ್ಕುತ್ತಿದೆ.

ತಮಿಳು ಆವೃತ್ತಿಯ ಬಿಡುಗಡೆ ನಂತರ ತೆಲುಗು ಮತ್ತು ಹಿಂದಿ ಆವೃತ್ತಿಗಳೂ ಬಿಡುಗಡೆಯಾಗಲಿವೆ. ಹಿಂದಿ ಆವೃತ್ತಿಯಲ್ಲಿ ಕೆಲವು ದೃಶ್ಯಗಳನ್ನು ಮರು ಚಿತ್ರೀಕರಣ ಮಾಡುವ ಮಾತುಕತೆಯೂ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳುವ ನಿರೀಕ್ಷೆಯಿದ್ದು ಎಲ್ಲೆಡೆಯಲ್ಲೂ ಅಪ್ಪು ಪಪ್ಪು ಕಾಣಿಸಲಿದ್ದಾರೆ.

ಚಿತ್ರದ ಪ್ರಮುಖ ಆಕರ್ಷಣೆ ಎನ್ನಿಸಿರುವ ಕಾಂಬೋಡಿಯಾದ ಒರಾಂಗ್ಟನ್ ಭಾರತಕ್ಕೆ ಸ್ಥಳಾಂತರಗೊಳ್ಳುವುದು ಸಾಧ್ಯವಿಲ್ಲದ ಕಾರಣ, ಅಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಬಹಳ ವರ್ಷಗಳ ತರುವಾಯ ಈ ಚಿತ್ರದ ಮೂಲಕ 'ಅಬ್ಬಾಸ್' ಕನ್ನಡಕ್ಕೆ ಮರಳಿದ್ದರು.

ಮಾ ಸ್ನೇಹಿತ್ ಹೊರತಾಗಿ ಜಿಂಕೆಮರಿ ರೇಖಾ, ಕೋಮಲ್, ರಂಗಾಯಣ ರಘು, ಜೆನ್ನಿಫರ್ ಕೊತ್ವಾಲ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಒಟ್ಟಿನಲ್ಲಿ, ಕನ್ನಡದಲ್ಲಿ ಮ್ಯಾಜಿಕ್ ಮಾಡಲಾಗದ ಈ ಅಪ್ಪು ಪಪ್ಪು, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಏನಾಗುವುದೋ ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

English summary
Meta Description: Kannada Movie Appu Pappu's Tamil Dubbing version releases on 8th Jane 2012 all over Tamilnadu. After this, it will be release at Telugu and Hindi version also as the sources are reviled.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada