ಏಪ್ರಿಲ್ 16ಕ್ಕೆ ದರ್ಶನ್ ಮತ್ತು ಯಶ್ ಒಟ್ಟಿಗೆ ಪ್ರಚಾರ
Recommended Video

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಜೋಡೆತ್ತುಗಳು ಖ್ಯಾತಿಯ ನಟ ದರ್ಶನ್ ಮತ್ತು ಯಶ್ ಇಬ್ಬರು ಪ್ರತ್ಯೇಕವಾಗಿ ಮತಯಾಚನೆ ಮಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ಪ್ರಚಾರ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ.
ಏಪ್ರಿಲ್ 16ಕ್ಕೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಇನ್ನು ಮೂರು ದಿನ ಮಾತ್ರ ಬಾಕಿಯಿದೆ. ಎರಡು ದಿನ ಬೇರೆ ಬೇರೆಯಾಗಿಯೇ ಮತಭೇಟೆ ಮಾಡುವ ಜೋಡೆತ್ತುಗಳು ಏಪ್ರಿಲ್ 16 ರಂದು ಕೊನೆಯ ದಿನ ಒಟ್ಟಿಗೆ ಪ್ರಚಾರ ಮಾಡ್ತಾರೆ. ಸುಮಲತಾ, ಅಭಿಷೇಕ್, ದರ್ಶನ್, ಯಶ್ ನಾಲ್ಕು ಜನರು ಒಂದೇ ವಾಹನದಲ್ಲಿ ಜಾಥ ಹಮ್ಮಿಕೊಂಡಿದ್ದಾರೆ.
ಇಬ್ಬರು ಬೇರೆ ಬೇರೆ ಪ್ರಚಾರ ಮಾಡ್ಬೇಕು ಎಂಬುವುದು ಮೊದಲೇ ನಿರ್ಧರಿಸಲಾಗಿತ್ತು. ಸಮಯವಕಾಶ ಕಡಿಮೆ ಇರುವುದರಿಂದ ಎಲ್ಲರೂ ಒಟ್ಟಿಗೆ ಪ್ರಚಾರ ಮಾಡಿದ್ರೆ, ಮಂಡ್ಯ ಪೂರ್ತಿ ಜನರನ್ನ ಸೆಳೆಯುವುದು ಕಷ್ಟವಾಗುತ್ತೆ. ಹಾಗಾಗಿ, ನಾಲ್ಕು ಜನ ನಾಲ್ಕು ದಿಕ್ಕಿನಲ್ಲಿ ಮತಯಾಚನೆ ಮಾಡುವುದರಿಂದ ಅನುಕೂಲವಾಗುತ್ತೆ ಎಂದು ಪೂರ್ವನಿಯೋಜಿತವಾಗಿ ಯೋಜನೆ ಹಾಕಲಾಗಿತ್ತು.

ಅದರಂತಯೇ ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ, ಪಾಂಡವಪುರದಲ್ಲಿ ದರ್ಶನ್ ಮತ್ತು ಯಶ್ ಇಬ್ಬರು ಪ್ರಚಾರ ಮಾಡಿದ್ದಾರೆ.
ಒಟ್ನಲ್ಲಿ ಇನ್ನು ಎರಡು ದಿನ ಜೋಡೆತ್ತುಗಳು ಪ್ರತ್ಯೇಕವಾಗಿಯೇ ಮತಯಾಚನೆ ಮಾಡಲಿದ್ದು, ಕೊನೆಯ ದಿನ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.


Click it and Unblock the Notifications











