twitter
    For Quick Alerts
    ALLOW NOTIFICATIONS  
    For Daily Alerts

    ತಲ್ಲಂಗೆ ಅಪ್ಸರೆಯ ಸ್ವಾಗತ!

    By Super
    |

    ಅಶ್ಲೀಲ ಚಿತ್ರಗಳಿಗಿನ್ನು ಕನ್ನಡದಲ್ಲಿ ಅವಕಾಶವೇ ಇಲ್ಲ ಎಂದು ಕನ್ನಡ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲ್‌ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಗರ್ಜಿಸಿ ಎರಡು ತಿಂಗಳು ಕಳೆಯುವ ಮುನ್ನವೇ ಅಪ್ಸರ ಪ್ರತ್ಯಕ್ಷಳಾಗಿದ್ದಾಳೆ. ಬಸಂತ್‌ ಹಾಗೂ ಬಾಬು ಮೌನವಾಗಿದ್ದಾರೆ.

    ಕೆಂಪೇಗೌಡನ ಅಕಾಲಿಕ ನಿಧನದಿಂದ ಬೀದಿಪಾಲಾದ ಸೆಕ್ಸ್‌ ಸರಕುಗಳಿಗೆ ಅಡ್ಡೆಯಾಗಿ, ಕೆಂಪೇಗೌಡ ಚಿತ್ರಮಂದಿರದ ಸ್ಥಾನ ತುಂಬಿದ್ದ ತ್ರಿಭುವನ ದಲ್ಲೇ ಅಪ್ಸರೆಯೂ ಪ್ರತ್ಯಕ್ಷವಾಗಿದ್ದಾಳೆ. ಅಪ್ಸರೆ ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ಎಂದು ತ್ರಿಭುವನ್‌ ಮಾಲೀಕರು ಭಾವಿಸಿದರೇನೋ!

    ಅಪ್ಸರೆಯನ್ನು ಸೃಷ್ಟಿಸಿದ್ದು ನೆರೆ ನಾಡಿನ ನಾರಾಯಣರೇನೂ ಅಲ್ಲ , ಅಶ್ಲೀಲ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈ ಎನಿಸಿರುವ ನಮ್ಮವನೇ ನರ ಗಜೇಂದ್ರ ಕೋಟೆ ಎನ್ನುವ ನಿರ್ದೇಶಕ. ಗಜೇಂದ್ರ ಕೋಟೆ ಅವರ ಸೃಷ್ಟಿ ಶೀಲತೆಗೆ ಆರ್ಥಿಕ ಬೆಂಬಲ ಪೈಪ್‌ಲೈನ್‌ ರಮೇಶ್‌ ಎನ್ನುವ ಮಹಾನುಭಾವನದು.

    ಸದ್ದಿರದೆ ಬಂದಳು ಅಪ್ಸರೆ

    ಬಸಂತ್‌- ಬಾಬು ಜೋಡಿ ಘರ್ಜನೆಯಿಂದಲೋ ಏನೋ, ಇತ್ತೀಚೆಗೆ ಸೆಕ್ಸ್‌ ಸಿನಿಮಾಗಳ ಸರಕು ಕಡಿಮೆಯಾಗಿತ್ತು . ಶಕೀಲಾ ಎನ್ನುವ ಮಲಯಾಳೀ ಸರಕನ್ನು ವಿವಿಧ ಭಾಷೆಗಳಲ್ಲಿ ಪರಿಚಯಿಸಿ ಥೈಲಿ ತುಂಬಿಸಿಕೊಳ್ಳುವ ಚಾಳಿಯೂ ತೆರೆಮರೆಗೆ ಸರಿದಿತ್ತು . ಆದರೆ, ಬೆಂಗಳೂರೆಲ್ಲ ಪಾಲಿಕೆ ಚುನಾವಣೆಯ ಮತ್ತಿನಲ್ಲಿ ಮುಳುಗಿರುವಾಗ, ಈ ಮತ್ತಿಗೆ ರಾಜ್ಯೋತ್ಸವದ ಗುಂಗೂ ಬೆರೆತಿರುವಾಗ- ಇಂಥ ಸಮಯಕ್ಕೆ ಕಾಯುತ್ತಿದ್ದಳೊ ಎಂಬಂಥೆ ಅಪ್ಸರೆ ಸದ್ದಿಲ್ಲದೆ ತ್ರಿಭುವನ್‌ನಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಅಪ್ಸರೆ ಪ್ರವೇಶದಿಂದ ಉತ್ತೇಜಿತರಾಗಿರುವ ಟೈಗರ್‌ ಗರಡಿಯಲ್ಲಿ ಪಳಗಿದ ಸರಿಗಮ ವಿಜಿ ತಮ್ಮ ಆಂಟಿಯ ಪ್ರವೇಶಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ ಅನ್ನುವ ವರ್ತಮಾನವೂ ಬಂದಿದೆ. ಅಲ್ಲಿಗೆ ಕಾಮಾಯಣದ ಗಾಳಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬೀಸುತ್ತಿದೆ ಎಂದಾಯಿತು.

    ತ್ರಿಭುವನ್‌ಗೀಗ ಬೇಡಿಕೆಯೋ ಬೇಡಿಕೆ

    ಸೆಕ್ಸ್‌ ಸಿನಿಮಾಗಳಿಗೆ ಮೀಸಲಾಗಿದ್ದ ಥಿಯೇಟರ್‌ಗಳ ಸಂಖ್ಯೆ ಒಂದು ಕಾಲದಲ್ಲಿ ಮೆಜೆಸ್ಟಿಕ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಇತ್ತು . ಮೂವಿಲ್ಯಾಂಡ್‌, ಸಂಗಂ, ಹಿಮಾಲಯ, ಕೆಂಪೇಗೌಡ ಮಾತ್ರವಲ್ಲದೆ ಬದಲಾವಣೆ ಇರಲಿ ಎಂಬಂತೆ ಮೇನಕಾ, ಕೈಲಾಷ್‌ ಥಿಯೇಟರ್‌ಗಳೂ ವಯಸ್ಕರ ಚಿತ್ರ ಪ್ರದರ್ಶಿಸುತ್ತಿದ್ದವು. ಕಾಲ ಇದ್ದಕ್ಕಿದ್ದಂತೆ ಹೇಗೆ ಬದಲಾಯಿತು ನೋಡಿ- ವೃದ್ಧ ಪತಿವ್ರತೆಯ ಸೋಗು ಹಾಕಿದ ಮೂವಿಲ್ಯಾಂಡ್‌ ತೆಲುಗು ಸಿನಿಮಾಗಳಿಗೆ ಮಾತ್ರ ಬಾಗಿಲು ತೆಗೆದಿದ್ದರೆ, ಕೆಂಪೇಗೌಡ ಬಾಗಿಲು ಮುಚ್ಚಿದೆ. ಹಿಮಾಲಯದ ಜಾಗದಲ್ಲಿ ಬಟ್ಟೆ ಅಂಗಡಿ ಕಾಣಿಸಿಕೊಂಡಿದೆ. ಪ್ರದರ್ಶನವನ್ನೇ ನಿಲ್ಲಿಸಿರುವ ಸಂಗಂ, ವಾಣಿಜ್ಯ ಮಳಿಗೆಯಾಗಿ ಪರಿವರ್ತನೆಗೊಳ್ಳುವ ದಾರಿಯಲ್ಲಿದೆ. ಇಂಥ ಹೊತ್ತಿನಲ್ಲಿ ಸೆಕ್ಸ್‌ ಮಾರಾಟಗಾರರ ಕಣ್ಣಿಗೆ ಬಿದ್ದದ್ದು ಕೈಲಾಷ್‌ ನೆತ್ತಿಯ ಮೇಲಿರುವ ತ್ರಿಭುವನ್‌.

    ಸದ್ಯಕ್ಕೆ ಮೆಜೆಸ್ಟಿಕ್‌ ಏರಿಯಾದಲ್ಲಿ ಸೆಕ್ಸ್‌ ಸಿನಿಮಾಗಳಿಗೆ ಮೀಸಲಾಗಿರುವ ಏಕೈಕ ಥಿಯೇಟರ್‌- ತ್ರಿಭುವನ್‌. ಕೈಲಾಸ್‌ ಮಿನಿ ಥಿಯೇಟರ್‌ ಆದ್ದರಿಂದ ಅದರ ಬಗ್ಗೆ ಸಿನಿಮಾ ಮಂದಿಗೆ ಅಂಥ ಒಲವೇನೂ ಇಲ್ಲ .

    ತಲ್ಲಂಗೆ ಸ್ವಾಗತವು...

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಾದಿಗೆ, ಪ್ರಸಿದ್ಧ ಚಿತ್ರ ಪ್ರದರ್ಶಕ ಹಾಗೂ ಚಿತ್ರಮಂದಿರಗಳ ಮಾಲಿಕ ತಲ್ಲಂ ನಂಜುಂಡಶೆಟ್ಟಿ ಆಯ್ಕೆ ಅಧಿಕೃತವಾಗಿ ಘೋಷಣೆಯಾಗುವ ಒಂದು ದಿನ (ನ.3) ಮುನ್ನವೇ, ಅಪ್ಸರ ಬಿಡುಗಡೆಯಾಗಿದ್ದಾಳೆ. ಇದು ಸ್ವಾಗತವೋ.. ಕಾಕತಾಳೀಯವೋ..

    ಅಂದಹಾಗೆ, ಅಪ್ಸರೆಯ ಆಗಮನದ ಸುದ್ದಿಯನ್ನು ಹೊರಗೆಡವಿದ ಕೀರ್ತಿ chitraloka.com ಗೆ ಸಲ್ಲುತ್ತದೆ.

    ಅಪ್ಸರೆಯ ಒಳಗೇನಿದೆ..

    ಪರಿಶೀಲಿಸಲು ಅಪ್ಸರ ಮೊದಲ ನೋಟಕ್ಕೆ ವೀಕ್ಷಕರನ್ನು ಕಳುಹಿಸಲಾಗುವುದು ಎನ್ನುತ್ತಾರೆ ಬಸಂತ್‌. ಆದರೆ ವಿಶ್ವಾಮಿತ್ರದಲ್ಲಿ ಪಿಂಕಿಯನ್ನು ಕುಣಿಸುತ್ತಿರುವ ಬಸಂತ್‌ಗಾಗಲೀ, ಕುರಿಗಳು- ಕೋತಿಗಳು ಮುಖಾಂತರ ಪಡ್ಡೆ ಹುಡುಗರಿಗಾಗಿ ಸಿನಿಮಾ ತೆಗೆಯುತ್ತಿರುವ ಎಸ್ವಿಆರ್ಬಿಗಾಗಲೀ ಶೀಲಾಶ್ಲೀಲತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎನ್ನುವ ಸಣ್ಣ ದನಿಯೂ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ದೊಡ್ಡವರ ಸಣ್ಣತನಗಳೇನೇ ಇರಲಿ

    English summary
    Sex, crime thriller films back in Bangalore
    Thursday, July 4, 2013, 11:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X