'ರಾಜಣ್ಣನ ಮಗ'ನ ಜೊತೆ ತೆಲುಗು ಪಿಲ್ಲ ಅಕ್ಸಾ ಖಾನ್ ತಕಧಿಮಿತ
ಟೈಟಲ್ ನಿಂದ ಭಾರಿ ಕುತೂಹಲ ಮೂಡಿಸಿದ್ದ ರಾಜಣ್ಣನ ಮಗ ಈಗ ಹಾಡೊಂದಕ್ಕೆ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಸಾಕಷ್ಟು ವಿಶೇಷ ವಿಚಾರಗಳಿಂದ ಶೂಟಿಂಗ್ ಹಂತದಲ್ಲೇ ಬಾರಿ ಸುದ್ದಿ ಮಾಡಿದ ಈ ಚಿತ್ರ, ಇದೀಗ ರಿಲೀಸ್ ಗೆ ರೆಡಿಯಾಗಿದೆ.
ಚಿತ್ರದಲ್ಲಿ ಚರಣ್ ರಾಜ್ ನಾಯಕನ ಅಪ್ಪನ ಪಾತ್ರ ಮಾಡಿದ್ದು, ಅಪ್ಪನ ಕುರಿತು ಪ್ರೀತಿ ಸಾರುವ ಹಾಡಿನಿಂದ ಗಮನ ಸೆಳೆದಿದ್ದ ಈ ಚಿತ್ರತಂಡ ಈಗ ಸ್ಪೆಷಲ್ ಐಟಂ ಸಾಂಗ್ ನ ರಿಲೀಸ್ ಮಾಡಿದೆ.
ಈ ಹಾಡಿನಲ್ಲಿ ತೆಲುಗಿನ ಸೂಪರ್ ಹಿಟ್ ಟಿವಿ ಕಾರ್ಯಕ್ರಮ 'ಡಿ' ಖ್ಯಾತಿಯ ಅಕ್ಸಾ ಖಾನ್ ಅವರ ಹೆಜ್ಜೆ ಹಾಕಿದ್ದು, ಸಖತ್ ಕಿಕ್ ಹೆಚ್ಚಿಸಿದೆ. ''ಅದೇ ರಂಗಿ ನನ್ನ ಕಣ್ಣೀನಾಗ ನಿನ್ನದೇ ಭಂಗಿ.....'' ಎಂಬ ಹಾಡಿಗೆ ಅಕ್ಸಾ ಸಖತ್ ಆಗಿ ಕುಣಿದಿದ್ದಾರೆ.
ರಾಂಬೋ2 ಮತ್ತು ನಟಸಾರ್ವಭೌಮ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಭೂಷಣ್ ಈ ಐಟಂ ಹಾಡಿಗೆ ಕೊರಿಯೋಗ್ರಫಿ ಮಾಡುವುದರ ಜೊತೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ರವಿಬಸ್ರೂರು ಈ ಸಾಂಗ್ ಗೆ ಮ್ಯೂಸಿಕ್ ಕಂಪೋಸ್ ಮಾಡಿರುವುದು ವಿಶೇಷ.

ಇನ್ನುಳಿದಂತೆ ಹರೀಶ್ ಈ ಚಿತ್ರದ ನಾಯಕನಾಗಿದ್ದು, ಅಕ್ಷತಾ, ಚರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











