For Quick Alerts
  ALLOW NOTIFICATIONS  
  For Daily Alerts

  ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಿನಿಮಾ ಕತೆಗಾರರಾಗಿ ಬದಲಾಗಿದ್ದಾರೆ!

  |

  ಸಂಗೀತದಿಂದ ವಿಶ್ವಕ್ಕೆ ಮೋಡಿಮಾಡಿರುವ ಎ.ಆರ್.ರೆಹಮಾನ್ ಹೊಸ ಸಾಹಕ್ಕೆ ಕೈ ಹಾಕಿದ್ದಾರೆ. ಮೊದಲ ಬಾರಿಗೆ ಅವರು ಸಿನಿಮಾಕ್ಕೆ ಕತೆ ಬರೆದಿದ್ದು, ಆ ಸಿನಿಮಾವನ್ನು ಅವರೇ ನಿರ್ಮಾಣ ಸಹ ಮಾಡುತ್ತಿದ್ದಾರೆ.

  ಹೌದು, ಎ.ಆರ್.ರೆಹಮಾನ್ ಹಾಗೂ ವಿಶ್ವೇಷ ಕೃಷ್ಣಮೂರ್ತಿ ಎಂಬುವರು ಸೇರಿ ಕತೆಯೊಂದನ್ನು ರಚಿಸಿದ್ದು, ಕತೆಯು ಈಗಾಗಲೇ '99 ಸಾಂಗ್ಸ್' ಹೆಸರಿನಲ್ಲಿ ಸಿನಿಮಾ ಆಗಿ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾವನ್ನು ಎ.ಆರ್.ರೆಹಮಾನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

  ರಹಮಾನ್ ಎಂದು ಹಿಂದೂ ಜ್ಯೋತಿಷಿ ಹೆಸರಿಟ್ಟಿದ್ದೇಕೆ? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸಂಗೀತ ಮಾಂತ್ರಿಕನ ಕಥೆರಹಮಾನ್ ಎಂದು ಹಿಂದೂ ಜ್ಯೋತಿಷಿ ಹೆಸರಿಟ್ಟಿದ್ದೇಕೆ? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸಂಗೀತ ಮಾಂತ್ರಿಕನ ಕಥೆ

  ಹೊಸ ಮುಖಗಳಾದ ಇಹಾನ್ ಭಟ್, ಇಡಿಲ್ಸಾ ವರ್ಗಾಸ್ ಅವರುಗಳು ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  ಒಂದು ಹಾಡು ಇಬ್ಬರ ಜೀವನವನ್ನು ಹೇಗೆ ಬದಲಾಯಿಸುತ್ತದೆ, ಸಂಗೀತ ಜೀವನದ ಪ್ರಮುಖ ಏಕೆ ಪ್ರಮುಖ ಭಾಗವಾಗಿದೆ ಎಂಬುದನ್ನು ಈ ಸಿನಿಮಾ ತೋರಿಸಲಿದೆ' ಎಂದಿದ್ದಾರೆ ಎ.ಆರ್.ರೆಹಮಾನ್.

  ಸಲ್ಮಾನ್ ಖಾನ್ ಚಿತ್ರಗಳಿಗೆ ರೆಹಮಾನ್ ಏಕೆ ಸಂಗೀತ ನೀಡುವುದಿಲ್ಲ?: ಕಾರಣ ಬಹಿರಂಗಸಲ್ಮಾನ್ ಖಾನ್ ಚಿತ್ರಗಳಿಗೆ ರೆಹಮಾನ್ ಏಕೆ ಸಂಗೀತ ನೀಡುವುದಿಲ್ಲ?: ಕಾರಣ ಬಹಿರಂಗ

  ಈ ಸಿನಿಮಾದ ಕತೆ ಹಲವಾರು ವರ್ಷಗಳಿಂದ ನನ್ನೊಳಗೆ ಇತ್ತು, ಆದರೆ ಅದನ್ನು ತೆರೆಯ ಮೇಲೆ ಚೆನ್ನಾಗಿ ಪ್ರೆಸೆಂಟ್ ಮಾಡಬಲ್ಲ ಸೂಕ್ತ ನಿರ್ದೇಶನಕನಿಗಾಗಿ ನಾನು ಹುಡುಕುತ್ತಿದ್ದೆ. ವಿಶ್ವೇಷ ಕೃಷ್ಣಮೂರ್ತಿ ನನಗೆ ದೊರಕಿದೆ. ಅವರೇ 99 ಸಾಂಗ್ಸ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ ಎಂದು ಎ.ಆರ್.ರೆಹಮಾನ್ ಹೇಳಿದ್ದಾರೆ.

  ಮಣಿರತ್ನಂ-ಎಆರ್ ರೆಹಮಾನ್ ಜೋಡಿ ವಿರುದ್ಧ ನೆಟ್ಟಿಗರು ಬೇಸರಮಣಿರತ್ನಂ-ಎಆರ್ ರೆಹಮಾನ್ ಜೋಡಿ ವಿರುದ್ಧ ನೆಟ್ಟಿಗರು ಬೇಸರ

  ಈ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಏಪ್ರಿಲ್ 16 ರಂದು ಬಿಡುಗಡೆ ಆಗಲಿದೆ. ಸಿನಿಮಾವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

  English summary
  Music director AR Rahman's first movie as story writer and producer will release on April 16. Movie name is 99 Songs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X