'ಕಾಟೇರ' ಬಳಿಕ ಉಪೇಂದ್ರ ಜೋಡಿಯಾಗಿ ಹೊಸ ಚಿತ್ರಕ್ಕೆ ಆರಾಧನಾ ಆಯ್ಕೆ

ನಟಿ ಮಾಲಾಶ್ರೀ ಪುತ್ರಿ ಆರಾಧನಾ 'ಕಾಟೇರ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಆ ಸಿನಿಮಾ ಬಂದು ಒಂದೂವರೆ ವರ್ಷ ಕಳೆದರೂ ಯಾವುದೇ ಹೊಸ ಸಿನಿಮಾ ಒಪ್ಪಿರಲಿಲ್ಲ. ಅಂತಿಮವಾಗಿ ಇದೀಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅದು ಕೂಡ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯಾಗಿ ಎನ್ನುವುದು ವಿಶೇಷ.

ತರುಣ್ ಸುಧೀರ್ ನಿರ್ದೇಶನದನ 'ಕಾಟೇರ' ಚಿತ್ರದಲ್ಲಿ ಒಳ್ಳೆ ಪಾತ್ರವೇ ಸಿಕ್ಕಿತ್ತು. ನಾಯಕ ಕಾಟೇರನ ಪ್ರೇಯಸಿ ಪ್ರಭಾವತಿಯ ಮಗಳ ಪಾತ್ರ ಅದು. ಶಾನುಭೋಗರ ಮಗಳಾಗಿ ಮಿಂಚಿದ್ದರು. ಆಕೆಯ ಪಾತ್ರವೇ ಚಿತ್ರದ ಕತೆಗೆ ಟ್ವಿಸ್ಟ್ ಕೊಡುತ್ತದೆ. ದರ್ಶನ್ ಜೋಡಿಯಾಗಿ ಆರಾಧನಾ ನಾಯಕಿ ಅಂದಾಗ ಕೆಲವರು ಗೊಣಗಿದ್ದರು. ದರ್ಶನ್ ಜೊತೆಗೆ ನಾಯಕಿಯಾಗಿ ಹೊಸ ಹುಡುಗಿನಾ ಎಂದು ಹುಬ್ಬೇರಿಸಿದ್ದರು. ಆದರೆ ಎಲ್ಲರೂ ನಿರೀಕ್ಷಿಸಿ ಸುಳ್ಳಾಗಿಸಿ ಆರಾಧನಾ ಗಮನ ಸೆಳೆದಿದ್ದರು.

Aradhana Joins Upendra in Pan-India Film Next Level Directed by Arvind Kaushik

ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ನಟಿಸಿದರೂ ಬಳಿಕ ಯಾಕೆ ಅವಕಾಶಗಳು ಸಿಗಲಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಇದೀಗ ಭಾರೀ ಅವಕಾಶವೇ ಮಾಲಾಶ್ರೀ ಪುತ್ರಿಗೆ ಸಿಕ್ಕಿದೆ. ಉಪೇಂದ್ರ ನಟನೆಯ 'ನೆಕ್ಸ್ಟ್ ಲೆವೆಲ್' ಚಿತ್ರದಲ್ಲಿ ಬಣ್ಣ ಹಚ್ಚುವುದು ಖಚಿತವಾಗಿದೆ. ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಶಿವಪ್ಪ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಮೂಡಿ ಬರ್ತಿದೆ. ಒಂದೊಳ್ಳೆ ತಂಡ ಕಟ್ಟಿಕೊಂಡು ಕೌಶಿಕ್ ಚಿತ್ರ ಕಟ್ಟಿಕೊಡುತ್ತಿದ್ದಾರೆ. ನವೆಂಬರ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. ಇನ್ನು ನಾಯಕಿಯಾಗಿ ಆರಾಧನಾ ಆಯ್ಕೆ ಬಗ್ಗೆ ನಿರ್ದೇಶಕರು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ನಮ್ಮ ಕತೆಗೆ ಒಬ್ಬ ಹೊಸ ಮುಖ ಬೇಕಿತ್ತು. ಅದರಲ್ಲೂ ಇವತ್ತಿನ ಕಾಲದ ಮಾಡ್ರನ್ ಹುಡುಗಿ ಬೇಕು ಎನ್ನುವ ಕಾರಣಕ್ಕೆ ಆರಾಧನಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

Aradhana Joins Upendra in Pan-India Film Next Level Directed by Arvind Kaushik

"ಕಥೆಯಲ್ಲಿ ಈಗಿನ ಜೆನ್‌ಝೀ ಜನರೇಷನ್ ಹುಡುಗಿಯ ಪಾತ್ರ ಇದೆ. ಲುಕ್ ಹೀಗೆ ಇರಬೇಕು, ಮಾಡ್ರನ್ ಆಗಿರಬೇಕು. ಕನ್ನಡದ ಹುಡುಗಿನೇ ಆಗಿರಬೇಕು ಎನಿಸಿತು. ಆಗ ನಾನು, ನಿರ್ಮಾಪಕರು ಯೋಚಿಸಿದಾಗ ನಮಗೆ ಮೊದಲು ನೆನಪಾಗಿದ್ದು ಆರಾಧನಾ. ಅವರೊಟ್ಟಿಗೆ ಮಾತನಾಡಿದಾಗ ಬಹಳ ಎಕ್ಸೈಟ್ ಆದ್ರು. ಬಹಳ ಇಂಟ್ರೆಸ್ಟ್ ತೋರಿಸಿದರು. ಈ ಪಾತ್ರಕ್ಕೆ ಬೇರೆಯದ್ದೇ ರೂಪ ಇದೆ. ಆ ಪಾತ್ರಕ್ಕೆ ಬಹಳ ಮಹತ್ವ ಇರಲಿದೆ" ಎಂದು ಅರವಿಂದ್ ಕೌಶಿಕ್ ವಿವರಿಸಿದ್ದಾರೆ.

'ನಮ್ ಏರಿಯಾಲ್ ಒಂದಿನ', 'ತುಗ್ಲಕ್', 'ಹುಲಿರಾಯ', 'ಶಾರ್ದೂಲ' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಅರವಿಂದ್ ಕೌಶಿಕ್ ಇದೀಗ 'ನೆಕ್ಸ್ಟ್ ಲೆವೆಲ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಜಾನರ್ ಬಗ್ಗೆ ಕೂಡ ಹೆಚ್ಚು ಮಾತನಾಡುತ್ತಿಲ್ಲ. ಇದು ನೆಕ್ಸ್ಟ್ ಲೆವೆಲ್ ಜಾನರ್ ಸಿನಿಮಾ ಎನ್ನುತ್ತಿದ್ದಾರೆ. ಆದರೆ ಉಪೇಂದ್ರ ಸರ್ ಕಥೆ ಕೇಳಿ ಬಹಳ ಇಷ್ಟಪಟ್ಟು ಒಪ್ಪಿದ್ದಾರೆ ಎನ್ನುತ್ತಾರೆ.

'ನೆಕ್ಸ್ಟ್ ಲೆವೆಲ್' ಚಿತ್ರವನ್ನು ಒಂದು ಸವಾಲಾಗಿ ಅರವಿಂದ್ ಕೌಶಿಕ್ ತೆಗೆದುಕೊಂಡಿದ್ದಾರೆ. ಉಪೇಂದ್ರ ರೀತಿಯ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲು. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. ಸದ್ಯ ಸ್ಟಾರ್‌ಕಾಸ್ಟ್ ಆಯ್ಕೆ ನಡೀತಿದೆ. ವಿವಿಧ ಪಾತ್ರಗಳಿಗೆ ಬೇರೆ ಬೇರೆ ಕಲಾವಿದರ ಜೊತೆ ಚರ್ಚೆ ನಡೀತಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಅರವಿಂದ್ ಹೇಳಿದ್ದಾರೆ.

More from Filmibeat

English summary
After Kaatera Malasri’s daughter Aradhana lands a major role opposite Upendra in the Pan-India film 'Next Level'. Directed by Arvind Kaushik, the film promises a unique genre and powerful performances.
Read more about: upendra sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X