'ಅರಮನೆ' ಸಿನಿಮಾದ ನಟಿ ಈಗ ಹೇಗಿದ್ದಾರೆ ನೋಡಿ

By Naveen

ಪರಭಾಷೆಯ ನಟಿಯರು ಕನ್ನಡ ಚಿತ್ರರಂಗಕ್ಕೆ ಬರುವುದು ಅಂದಿನಿಂದ ಚಾಲ್ತಿಯಲ್ಲಿ ಇದೆ. ಹಾಗೆ ಬಂದ ನಟಿಯರ ಪೈಕಿ ಅನೇಕರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಒಂದು ಸಿನಿಮಾ ಮಾಡಿ ಮತ್ತೆ ತಮ್ಮ ತವರು ಇಂಡಸ್ಟ್ರಿಗೆ ಮರಳಿದ್ದಾರೆ.

ಇದೇ ರೀತಿ ಆಗ ಕನ್ನಡಕ್ಕೆ ಬಂದಿದ್ದ ಒಬ್ಬ ಮಾಲಿವುಡ್ ನಟಿ ಮತ್ತೆ ಇತ್ತ ನೋಡಲಿಲ್ಲ. ಅವರೇ ನಟಿ ರೋಮಾ. ಈ ಚಂದದ ಮೋಗದ ನಟಿಯ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ 'ಪತ್ರ ಬರೆಯಲ ಇಲ್ಲ ಚಿತ್ರ ಬಿಡಿಸಲ..' ಎಂದು ಹಾಡಿ ಕುಣಿದಿದ್ದರು.

ಅಂದಹಾಗೆ, 'ಅರಮನೆ'ಯ ರಾಣಿಯಾಗಿ ಕಾಣಿಸಿಕೊಂಡ ಈ ನಟಿ ಈಗ ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಿಗೆ ಇರುತ್ತದೆ. ನಟಿ ರೋಮಾ ಅವರ ಲೇಟೆಸ್ಟ್ ಫೋಟೋಗಳು ಮುಂದಿದೆ ನೋಡಿ...

ಇತ್ತೀಚಿಗಿನ ಕಾರ್ಯಕ್ರಮದಲ್ಲಿ

ಇತ್ತೀಚಿಗಿನ ಕಾರ್ಯಕ್ರಮದಲ್ಲಿ

ಇತ್ತೀಚಿಗಿನ ಒಂದು ಖಾಸಗಿ ಕಾರ್ಯಕ್ರಮದಲ್ಲಿ ನಟಿ ರೋಮಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಅವರ ಕೆಲ ಫೋಟೋಗಳನ್ನು ನೋಡಿದರೆ ಅಂದಿಗೂ ಇಂದಿಗೂ ತುಂಬ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಇಷ್ಟ ದಿನ ಅವರನ್ನು ಫಾಲೋ ಮಾಡಿರದ ಕನ್ನಡದ ಅಭಿಮಾನಿಗಳಿಗೆ ಇದು ಅವರೇನಾ ಎಂದು ಆಶ್ವರ್ಯ ಆಗುತ್ತದೆ.

'ಅರಮನೆ' ಕನ್ನಡದ ಮೊದಲ ಸಿನಿಮಾ

'ಅರಮನೆ' ಕನ್ನಡದ ಮೊದಲ ಸಿನಿಮಾ

ಮಾಲಿವುಡ್ ನಟಿ ರೋಮಾ ಅವರ ಮೊದಲ ಕನ್ನಡ ಸಿನಿಮಾ 'ಅರಮನೆ'. ಈ ಚಿತ್ರದ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಗಮನ ಸೆಳೆದ ಈ ಮುದ್ದು ಹುಡುಗಿ ಮರಳಿ ಸ್ಯಾಂಡಲ್ ವುಡ್ ಗೆ ಬರಲಿಲ್ಲ. 'ಅರಮನೆ' ನಂತರ ಬೇರೆ ಬೇರೆ ಭಾಷೆಯ ಸಿನಿಮಾ ಮಾಡಿದ ಅವರು ಕನ್ನಡದಲ್ಲಿ ಯಾವ ಚಿತ್ರವನ್ನು ಮಾಡಲಿಲ್ಲ.

12 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ

12 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ

2005ರಲ್ಲಿ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟಿ ರೋಮಾ 12 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಸಿನಿ ಜರ್ನಿಯ ಮಧ್ಯದಲ್ಲಿ 2012-15ರ ವರೆಗೆ ಬ್ರೇಕ್ ಪಡೆದಿದ್ದ ಅವರು ಮತ್ತೆ ನಟನೆ ಶುರು ಮಾಡಿದ್ದರು.

ಮಲೆಯಾಳಂ ನಲ್ಲಿ ಹೆಚ್ಚು ಸಿನಿಮಾ

ಮಲೆಯಾಳಂ ನಲ್ಲಿ ಹೆಚ್ಚು ಸಿನಿಮಾ

ಮೂಲತಃ ತಮಿಳು ನಾಡಿನ ಹುಡುಗಿಯಾದ ರೋಮಾ ಹೆಚ್ಚು ಸಿನಿಮಾ ಮಾಡಿದ್ದು ಮಲೆಯಾಳಂ ನಲ್ಲಿ. ತೆಲುಗು, ತಮಿಳು, ಕನ್ನಡ ಹಾಗೂ ಮಲೆಯಾಳಂ ನಾಲ್ಕು ಭಾಷೆಗಳಲ್ಲಿ ಅಭಿನಯಿಸಿರುವ ಈಕೆ ಮಾಲಿವುಡ್ ನಲ್ಲಿ 18ಕ್ಕು ಹೆಚ್ಚು ಸಿನಿಮಾ ಮಾಡಿದ್ದಾರೆ. ಕಳೆದ ವರ್ಷ ಅವರ ನಟನೆಯಲ್ಲಿ 'ಸತ್ಯ' ಎಂಬ ಸಿನಿಮಾ ಬಿಡುಗಡೆಯಾಗಿತು.

More from Filmibeat

English summary
Check Out Pic : 'Aramane' kannada movie actress Roma Asrani latest photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X