ಜಯಲಲಿತಾ ಪಾತ್ರದಲ್ಲಿ ಕಂಗನಾ, ಎಂಜಿಆರ್ ಯಾರು ಗೊತ್ತಾ?

ಬಾಲಿವುಡ್ ನಟಿ ಕಂಗನಾ ರಣಾವತ್ ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ. ಎಎಲ್ ವಿಜಯ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ಬರಲಿದೆ.

ಜಯಲಲಿತಾ ಅವರ ಬಯೋಪಿಕ್ ಚಿತ್ರಕ್ಕೆ 'ತಲೈವಿ' ಎಂದು ಹೆಸರಿಟ್ಟಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಶೂಟಿಂಗ್ ಆರಂಭವಾಗಲಿದೆ. ಜಯಲಲಿತಾ ಬಯೋಪಿಕ್ ಅಂದ್ಮೇಲೆ ತಮಿಳು ಸೂಪರ್ ಸ್ಟಾರ್ ಎಂಜಿಆರ್ ಮತ್ತು ಕುರುಣಾನಿಧಿ ಅವರ ಪಾತ್ರ ಬಹಳ ಪ್ರಾಮುಖ್ಯತೆ ಹೊಂದಿದೆ. ಹಾಗಾಗಿ, ಈ ಪಾತ್ರಗಳನ್ನ ಯಾರು ಮಾಡಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

Aravind Swamy Will Play Mgr Role In Jayalalithaa Biopic

ಇದೀಗ, ಎಂಜಿಆರ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತಮಿಳಿನ ಸ್ಟಾರ್ ನಟ ಅರವಿಂದ ಸ್ವಾಮಿ ಅವರು ಎಂಜಿ ರಾಮಚಂದ್ರ ಅವರು ಪಾತ್ರ ನಿರ್ವಹಿಸಲಿದ್ದಾರೆ.

ಎಂಜಿಆರ್ ಮತ್ತು ಜಯಲಲಿತಾ ಅವರ ಕಾಂಬಿನೇಷನ್ ನಲ್ಲಿ 28ಕ್ಕೂ ಹೆಚ್ಚು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 1965 ರಿಂದ 1973ರ ಅವಧಿಯಲ್ಲಿ ಈ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ಸಿನಿಮಾರಂಗ ಮತ್ತು ರಾಜಕೀಯ ರಂಗದಲ್ಲೂ ಜಯಲಲಿತಾ ಅವರ ಜೊತೆಯಲ್ಲಿದ್ದ ಎಂಜಿಆರ್ ಪಾತ್ರ ಈ ಬಯೋಪಿಕ್ ನಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.

Aravind Swamy Will Play Mgr Role In Jayalalithaa Biopic

ತಮಿಳುನಾಡಿನ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾತ್ರದಲ್ಲಿ ಯಾರು ನಟಿಸಬಹುದು ಎಂಬುದು ಬಹಿರಂಗವಾಗಿಲ್ಲ. ಇನ್ನುಳಿದಂತೆ ದೀಪಾವಳಿ ಹಬ್ಬದಿಂದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಂತದ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ.

ಜಯಲಲಿತಾ ಪಾತ್ರಕ್ಕಾಗಿ ನಟಿ ಕಂಗನಾ ರಣಾವತ್ ಅವರ ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಅದಕ್ಕಾಗಿ ಫೋಟೋಶೂಟ್ ಕೂಡ ಮಾಡಲಾಗಿದೆಯಂತೆ. ಎಎಲ್ ವಿಜಯ್ ನಿರ್ದೇಶನದ ಈ ಚಿತ್ರವನ್ನ ವಿಷ್ಣುವರ್ಧನ್ ಇಂದುರಿ ನಿರ್ಮಿಸುತ್ತಿದ್ದಾರೆ.

More from Filmibeat

English summary
Tamil Actor Aravind Swamy will palying tamil super star MGR role in Jayalalithaa Biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X