ಅಪ್ಪುಗೆ ಸಚಿವ ಪ್ರಭು ಚೌಹಾಣ್ ಅಪಮಾನ: ಆರೋಪ
ನಟ ಪುನೀತ್ ರಾಜ್‌ಕುಮಾರ್‌ಗೆ ಸಚಿವ ಪ್ರಭು ಚೌಹಾಣ್ ಅಪಮಾನ ಎಸಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿ ಆರೋಪ ಮಾಡಿದ್ದಾರೆ.
''ಪುನೀತ್ ನಿಧನದಿಂದ ಇಡೀ ರಾಜ್ಯವೇ ಶೋಕದಲ್ಲಿದೆ, ಸ್ವತಃ ರಾಜ್ಯದ ಸಿಎಂ ಹಾಗೂ ಹಲವು ಸಚಿವರು ಪುನೀತ್ ಅಗಲಿಕೆಯಿಂದ ತೀವ್ರ ದುಃಖ ವ್ಯಕ್ತಪಡಿಸಿ ಪುನೀತ್ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಶೋಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭು ಚೌಹಾಣ್ ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನೃತ್ಯ ಮಾಡಿದ್ದಾರೆ'' ಎಂದಿದ್ದಾರೆ ಅರವಿಂದ ಕುಮಾರ ಅರಳಿ.
ಸಚಿವ ಪ್ರಭು ಚೌಹಾಣ್ ಬೀದರ್‌ನಲ್ಲಿ ನಡೆದ ಚೋಂಡಿಮುಖೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಅವರೊಟ್ಟಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಶೇಖರ್ ಸಹ ಅವರೊಟ್ಟಿಗೆ ಹೆಜ್ಜೆ ಹಾಕಿದ್ದಾರೆ ಎಂದು ಅರವಿಂದ ಕುಮಾರ ಅರಳಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಸಲಕ ಗೌರವಗಳೊಂದಿಗೆ ಅಪ್ಪುವಿನ ಅಂತ್ಯಸಂಸ್ಕಾರ ಮಾಡಿದೆ. ಹೀಗಿದ್ದಾಗ ಪ್ರಭು ಚೌಹಾಣ್ ರಾಜ್ಯದ ಭಾವನೆಯೊಂದಿಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ. ಸಚಿವರು ಮಹಾರಾಷ್ಟ್ರದ ಜೊತೆಗೆ ಸಂಬಂಧ ಹೊಂದಿದ್ದಾರೆ, ರಾಜ್ಯದ ನೆಲ, ಭಾಷೆ, ಸಂಸ್ಕೃತಿ, ಜನರ ಭಾವನೆಗಳ ಬಗ್ಗೆ ಅವರಿಗೆ ಗೌರವ ಇಲ್ಲ ಎಂದಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ಸ್ವತಃ ಸಿಎಂ ಅವರೇ ಮೂರು ದಿನಗಳ ವರೆಗೆ ಕುಟುಂಬದ ಜೊತೆಗಿದ್ದು ಅಂತಿಮ ಕಾರ್ಯ ಯಾವುದೇ ಅಡಚಣೆ ಇಲ್ಲದೆ ನೆರವೇರಿಸಿದ್ದಾರೆ. ಸರ್ಕಾರದ ಹಲವು ಸಚಿವರು ಅಪ್ಪುವಿನ ಅಂತಿಮ ದರ್ಶನ ಹಾಗೂ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದರು.
ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಪುನೀತ್ ನಿಧನಕ್ಕೆ ಸಂಬಂಧಿಸಿದ ಯಾವುದೇ ಕಾರ್ಯದಲ್ಲಿ ಭಾಗಿಯಾಗದೇ ಇರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಸರ್ಕಾರವು ಪುನೀತ್ ನಿಧನದ ಪ್ರಯುಕ್ತ ಶೋಕಾಚರಣೆ ಘೋಷಿಸದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಕನ್ನಡ ರಾಜ್ಯೋತ್ಸವ ಹಾಗೂ ಸರ್ಕಾರ ಆಯೋಜಿಸಿದ್ದ 'ಕನ್ನಡಕ್ಕಾಗಿ ನಾವು' ಅಭಿಯಾನ ಮುಕ್ಕಾಗಬಾರದೆಂದು ಸರ್ಕಾರ ಶೋಕಾಚರಣೆ ಘೋಷಿಸಿಲ್ಲ ಎನ್ನಲಾಗುತ್ತಿದೆ.


Click it and Unblock the Notifications











