IPL ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಸಹೋದರ ತಪ್ಪೊಪ್ಪಿಗೆ

By Bharath Kumar

ಐಪಿಎಲ್ ಕ್ರಿಕೆಟ್ ಟೂರ್ನಿಯ ವೇಳೆ ಬೆಟ್ಟಿಂಗ್ ನಡೆಸಿರುವುದಾಗಿ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಅರ್ಬಾಜ್ ಖಾನ್ ಹೆಸರು ಕೇಳಿಬಂದ ಹಿನ್ನೆಲೆ ಅವರಿಂದ ಹೇಳಿಕೆ ಪಡೆಯಲು ಅರ್ಬಾಜ್ ಖಾನ್ ಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನ ಥಾಣೆಯ ಪೊಲೀಸ್ ಕಛೇರಿಗೆ ಆಗಮಿಸಿದ್ದ ಅರ್ಬಾಜ್ ಖಾನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಮಾಡಿದ್ದು ನಿಜ: ತಪ್ಪೊಪ್ಪಿಕೊಂಡ ಅರ್ಬಾಜ್ ಖಾನ್

''ಬೆಟ್ಟಿಂಗ್ ನನ್ನ ಹವ್ಯಾಸ. ನಾನು ಬೆಟ್ಟಿಂಗ್ ಆಡಿದ್ದು ನಿಜ'' ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ''ಕಳೆದ ವರ್ಷ ಬೆಟ್ಟಿಂಗ್ ಅಡಿದ್ದೆ, ಇದರಲ್ಲಿ 2.75 ಕೋಟಿ ನಷ್ಟವಾಗಿತ್ತು. ಆದ್ರೆ, ಈ ವರ್ಷ ಯಾವುದೇ ಬೆಟ್ಟಿಂಗ್ ನಲ್ಲೂ ನಾನು ಪಾಲುದಾರನಾಗಿಲ್ಲ'' ಎಂದು ತಿಳಿಸಿದ್ದಾರೆ.

Arbaaz Khan confessed he placed bets during IPL matches

ಅಷ್ಟೇ ಅಲ್ಲದೇ ಪೊಲೀಸರು ಬಂಧಿಸಿರುವ ಬುಕ್ಕಿ ಸೋನು ಜಲಾನ್ ಅಲಿಯಾಸ್ ಸೋನು ಮಲಾಡ್ ಅವರ ಪರಿಚಯ ಇರುವುದಾಗಿ ಕೂಡ ಒಪ್ಪಿಕೊಂಡಿದ್ದಾರೆ.

ಮೇ 15 ರಂದು ಮುಂಬೈನ ಪೊಲೀಸರು ಸೋನು ಜಲಾನ್ ಸೇರಿದಂತೆ ನಾಲ್ಕು ಜನರ ಬುಕ್ಕಿಗಳನ್ನ ಬೆಟ್ಟಿಂಗ್ ಆರೋಪದಲ್ಲಿ ಬಂಧಿಸಿದ್ದರು. ವಿಚಾರಣೆಗೊಳಪಡಿಸಿದ ನಂತರ ಇದರಲ್ಲಿ ನಟ ಅರ್ಬಾಜ್ ಖಾನ್ ಕೂಡ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ನಂತರ ಅರ್ಬಾಜ್ ಖಾನ್ ಅವರ ಬ್ಯಾಂಕಿನ ವ್ಯವಹಾರದ ಬಗ್ಗೆಯೂ ನಿಘಾ ವಹಿಸಿಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಬಾಜ್ ಖಾನ್ ಅವರ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡು, ಬುಕ್ಕಿಗಳಿಗೆ ಹಣ ನೀಡಿರಲಿಲ್ಲವಂತೆ. ನಂತರ ಬುಕ್ಕಿಗಳು ಅರ್ಬಾಜ್ ಖಾನ್ ಗೆ ಬೆದರಿಕೆಯೊಡ್ಡುತ್ತಿದ್ದರು ಎಂದು ವಿಚಾರಣೆ ವೇಳೆ ಸೋನು ಜಲಾನ್ ಬಾಯ್ಬಿಟ್ಟಿದ್ದಾರೆ.

ಅರ್ಬಾಜ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರನಾಗಿದ್ದು, ನಟ, ನಿರ್ಮಾಪಕ, ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 'ದಬಾಂಗ್-2' ಚಿತ್ರವನ್ನ ನಿರ್ದೇಶನ ಮಾಡಿದ್ದ ಅರ್ಬಾಜ್ ಖಾನ್ 'ದಬಾಂಗ್-3' ಚಿತ್ರಕ್ಕಾಗಿ ತಯಾರಾಗುತ್ತಿದ್ದರು.

More from Filmibeat

English summary
Bollywood Actor Arbaaz Khan made the confession on Saturday while recording his statement at Thane Police's Anti-Extortion Cell (AEC) in connection with the alleged IPL betting racket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X