ಕನ್ನಡಕ್ಕೆ ಬಂದ ಸಲ್ಮಾನ್ ಖಾನ್ ಸಹೋದರ: ಗಣೇಶ್ ಜೊತೆ ಅರ್ಬಾಝ್ ನಟನೆ.!
ಬಾಲಿವುಡ್ ನ ಬಾಕ್ಸಾಫೀಸ್ ಟೈಗರ್ ಸಲ್ಮಾನ್ ಖಾನ್ ಸಹೋದರ ಅರ್ಬಾಝ್ ಖಾನ್ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರವೊಂದರಲ್ಲಿ ನಟಿಸಲು ಅರ್ಬಾಝ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕನ್ನಡ ಮತ್ತು ಹಿಂದಿಯಲ್ಲಿ ಹಲವು ಟೆಲಿವಿಷನ್ ಶೋಗಳನ್ನು ಮಾಡಿರುವ ರಾಜ್ ಮತ್ತು ದಾಮಿನಿ ಇದೀಗ 'ವೇರ್ ಇಸ್ ಮೈ ಕನ್ನಡಕ.?' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

ಔಟ್ ಅಂಡ್ ಔಟ್ ಆಕ್ಷನ್ ಕಾಮಿಡಿ ಚಿತ್ರವಾಗಿರುವ 'ವೇರ್ ಇಸ್ ಮೈ ಕನ್ನಡಕ.?' ಚಿತ್ರದಲ್ಲಿ ಗಣೇಶ್ ಜೊತೆಗೆ ಅರ್ಬಾಝ್ ಖಾನ್ ಕೂಡ ನಟಿಸಲಿದ್ದಾರೆ.
''ಸಿನಿಮಾದ ಸ್ಕ್ರಿಪ್ಟ್ ತುಂಬಾ ಇಂಟರೆಸ್ಟಿಂಗ್ ಆಗಿದೆ. ಈಗಾಗಲೇ ನಾನು 2 ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈಗ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದೇನೆ. ಕನ್ನಡ ಚಿತ್ರದಲ್ಲಿ ನಟಿಸಲು ಉತ್ಸಾಹದಿಂದ ಇದ್ದೇನೆ'' ಎಂದಿದ್ದಾರೆ ನಟ ಅರ್ಬಾಝ್ ಖಾನ್.
ಅಂದಹಾಗೆ ಫೆಬ್ರವರಿ 7ರಂದು 'ವೇರ್ ಇಸ್ ಮೈ ಕನ್ನಡಕ.?' ಚಿತ್ರದ ಮಹೂರ್ತ ಸಮಾರಂಭ ನಡೆಯಲಿದೆ. ಏಪ್ರಿಲ್ ನಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಲಂಡನ್ ನಲ್ಲಿ ನಡೆಸಲು ಪ್ಲಾನ್ ಮಾಡಲಾಗಿದೆ.


Click it and Unblock the Notifications