'ಚಂದ್ರ' ಲೋಕದಲ್ಲಿ ತೇಲಾಡಿದ ವಸಿಷ್ಠ-ಮಯೂರಿ

ಇಷ್ಟು ದಿನ ರಗಡ್ ಲುಕ್, ಹೊಡಿ ಬಡಿ, ಡೈಲಾಗ್ ಹೇಳ್ತಿದ್ದ ಕನ್ನಡದ ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಮತ್ತೊಮ್ಮೆ ರೋಮ್ಯಾಂಟಿಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 'ಅರ್ಧ ಚಂದ್ರ'ನಾಗಿ ಎಲ್ಲರ ಮನ ಸೆಳೆಯುತ್ತಿದ್ದಾರೆ.

ಈ ಹಿಂದೆ 'ದಯವಿಟ್ಟು ಗಮನಿಸಿ' ಚಿತ್ರದ ಮರೆತೇ ಹೋದೆನೂ.... ಹಾಡಿನ ಮೂಲಕ ಇಷ್ಟವಾಗಿದ್ದ ವಸಿಷ್ಠ ಸಿಂಹ ಈಗ ಮತ್ತೊಂದು ಮಧುರವಾದ ಹಾಡಿನೊಂದಿಗೆ ತೆರೆಮೇಲೆ ಬಂದಿದ್ದಾರೆ. ಸದ್ಯ ಲಿರಿಕಲ್ ವಿಡಿಯೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ 'ಅರ್ಧ ಚಂದ್ರ' ಹಾಡು, ಈಗ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ.

Ardha chandra video song from 8mm

ನವರಸ ನಾಯಕ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 8ಎಂಎಂ ಚಿತ್ರದ 'ಅರ್ಧ ಚಂದ್ರ' ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ವಸಿಷ್ಠ ಚಾಕ್ ಲೇಟ್ ಹೀರೋ ಆಗಿ ಆಕರ್ಷಿಸುತ್ತಿದ್ದಾರೆ. ಚಂದಿರನ ಜೊತೆಯಲ್ಲಿ ಮಯೂರಿ ಹೆಜ್ಜೆ ಹಾಕಿದ್ದು, ಚಂದ್ರನ ಅಂದವನ್ನ ಹೆಚ್ಚಿಸಿದ್ದಾರೆ.

ಅಂದ್ಹಾಗೆ, ಗೌಸ್ ಫೀರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸುಪ್ರಿಯಾ ಲೋಹಿತ್ ಮತ್ತು ಅಭಿನಂದನ್ ಮಹಿಶಾಲೆ ಈ ಹಾಡನ್ನ ಹಾಡಿದ್ದಾರೆ.

ಈಗಾಗಲೇ ಸಿನಿಮಾ ನೋಡಿರುವ ನಟ ಜಗ್ಗೇಶ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹರಿಕೃಷ್ಣ ಎಸ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗ್ಗೇಶ್‌, ವಸಿಷ್ಠ ಮಯೂರಿ, ಆದಿ ಲೋಕೇಶ್‌, ರಾಕ್‌ಲೈನ್‌ ವೆಂಕಟೇಶ್‌ ಪ್ರಮುಖ ತಾರಬಳಗದಲ್ಲಿದ್ದಾರೆ. ನವೆಂಬರ್ 16 ರಂದು 8ಎಂಎಂ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

More from Filmibeat

English summary
Ardha Chandra Video Song From 8MM New Kannada Movie, Starring Navarasa Nayaka Jaggesh, Vasishta N Simha, Mayuri, Sung in Voice of Supriya Lohith, Abhinandan Mahishale, Music Composed by Judah Sandhy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X