For Quick Alerts
  ALLOW NOTIFICATIONS  
  For Daily Alerts

  'ಚಂದ್ರ' ಲೋಕದಲ್ಲಿ ತೇಲಾಡಿದ ವಸಿಷ್ಠ-ಮಯೂರಿ

  |

  ಇಷ್ಟು ದಿನ ರಗಡ್ ಲುಕ್, ಹೊಡಿ ಬಡಿ, ಡೈಲಾಗ್ ಹೇಳ್ತಿದ್ದ ಕನ್ನಡದ ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಮತ್ತೊಮ್ಮೆ ರೋಮ್ಯಾಂಟಿಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 'ಅರ್ಧ ಚಂದ್ರ'ನಾಗಿ ಎಲ್ಲರ ಮನ ಸೆಳೆಯುತ್ತಿದ್ದಾರೆ.

  ಈ ಹಿಂದೆ 'ದಯವಿಟ್ಟು ಗಮನಿಸಿ' ಚಿತ್ರದ ಮರೆತೇ ಹೋದೆನೂ.... ಹಾಡಿನ ಮೂಲಕ ಇಷ್ಟವಾಗಿದ್ದ ವಸಿಷ್ಠ ಸಿಂಹ ಈಗ ಮತ್ತೊಂದು ಮಧುರವಾದ ಹಾಡಿನೊಂದಿಗೆ ತೆರೆಮೇಲೆ ಬಂದಿದ್ದಾರೆ. ಸದ್ಯ ಲಿರಿಕಲ್ ವಿಡಿಯೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ 'ಅರ್ಧ ಚಂದ್ರ' ಹಾಡು, ಈಗ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ.

  ಹೊಸ ಅವತಾರದಲ್ಲಿ ಜನರ ಮುಂದೆ ಬಂದ ನಟ ವಸಿಷ್ಠ ಸಿಂಹ ಹೊಸ ಅವತಾರದಲ್ಲಿ ಜನರ ಮುಂದೆ ಬಂದ ನಟ ವಸಿಷ್ಠ ಸಿಂಹ

  ನವರಸ ನಾಯಕ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 8ಎಂಎಂ ಚಿತ್ರದ 'ಅರ್ಧ ಚಂದ್ರ' ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ವಸಿಷ್ಠ ಚಾಕ್ ಲೇಟ್ ಹೀರೋ ಆಗಿ ಆಕರ್ಷಿಸುತ್ತಿದ್ದಾರೆ. ಚಂದಿರನ ಜೊತೆಯಲ್ಲಿ ಮಯೂರಿ ಹೆಜ್ಜೆ ಹಾಕಿದ್ದು, ಚಂದ್ರನ ಅಂದವನ್ನ ಹೆಚ್ಚಿಸಿದ್ದಾರೆ.

  ಜಗ್ಗೇಶ್, ಅಜಯ್ ರಾವ್ ಇಬ್ಬರ ಸಿನಿಮಾ ಒಂದೇ ದಿನ ಜಗ್ಗೇಶ್, ಅಜಯ್ ರಾವ್ ಇಬ್ಬರ ಸಿನಿಮಾ ಒಂದೇ ದಿನ

  ಅಂದ್ಹಾಗೆ, ಗೌಸ್ ಫೀರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸುಪ್ರಿಯಾ ಲೋಹಿತ್ ಮತ್ತು ಅಭಿನಂದನ್ ಮಹಿಶಾಲೆ ಈ ಹಾಡನ್ನ ಹಾಡಿದ್ದಾರೆ.

  ಒಂದೇ ಚಿತ್ರಕ್ಕಾಗಿ ಎಂಟು ಅವತಾರವೆತ್ತಿದ ವಸಿಷ್ಠ ಎನ್ ಸಿಂಹ ಒಂದೇ ಚಿತ್ರಕ್ಕಾಗಿ ಎಂಟು ಅವತಾರವೆತ್ತಿದ ವಸಿಷ್ಠ ಎನ್ ಸಿಂಹ

  ಈಗಾಗಲೇ ಸಿನಿಮಾ ನೋಡಿರುವ ನಟ ಜಗ್ಗೇಶ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹರಿಕೃಷ್ಣ ಎಸ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗ್ಗೇಶ್‌, ವಸಿಷ್ಠ ಮಯೂರಿ, ಆದಿ ಲೋಕೇಶ್‌, ರಾಕ್‌ಲೈನ್‌ ವೆಂಕಟೇಶ್‌ ಪ್ರಮುಖ ತಾರಬಳಗದಲ್ಲಿದ್ದಾರೆ. ನವೆಂಬರ್ 16 ರಂದು 8ಎಂಎಂ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರ್ತಿದೆ.

  English summary
  Ardha Chandra Video Song From 8MM New Kannada Movie, Starring Navarasa Nayaka Jaggesh, Vasishta N Simha, Mayuri, Sung in Voice of Supriya Lohith, Abhinandan Mahishale, Music Composed by Judah Sandhy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X