ಚಂದನ್ ಶೆಟ್ಟಿ- ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ಗೆ ನಿರ್ಧಾರ?
ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಮದುವೆ ಆಗಿದ್ದರು. ಇದೀಗ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ವದಂತಿ ಶುರುವಾಗಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಜೋಡಿ ಎಂದು ಇಬ್ಬರು ಬಿಂಬಿತವಾಗಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್- 5ರಲ್ಲಿ ಇಬ್ಬರು ದೊಡ್ಮನೆ ಒಳಗೆ ಹೋಗಿದ್ದರು. ಅಲ್ಲಿಂದಲೇ ಪ್ರೀತಿ ಶುರುವಾಗಿತ್ತು. ಬಳಿಕ 2019ರ ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು.

ಇದೀಗ ದಿಢೀರನೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಬೇಕಿದೆ. 2020 ಫೆಬ್ರವರಿ 26 ರಂದು ಜೋಡಿ ಹಸೆಮಣೆ ಏರಿತ್ತು. ಇದೀಗ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗ್ತಿದೆ. 'ಕ್ಯಾಂಡಿಕ್ರಶ್' ಎನ್ನುವ ಚಿತ್ರದಲ್ಲಿ ಚಂದನ್- ನಿವೇದಿತಾ ಒಟ್ಟಿಗೆ ನಟಿಸಿದ್ದಾರೆ. ಕರಿಯರ್ ಕಾರಣಕ್ಕೆ ಇಬ್ಬರೂ ದೂರಾಗಲು ಮನಸ್ಸು ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ಮದುವೆ ಬಳಿಕ 4 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ್ದರು. ಕ್ಯೂಟ್ ಕ್ಯೂಟ್ ಫೋಟೊ, ವೀಡಿಯೋಗಳನ್ನು ದಂಪತಿ ಆಗಾಗ್ಗೆ ಶೇರ್ ಮಾಡುತ್ತಿದ್ದರು. ಇನ್ನು ಯೂಟ್ಯೂಬ್ ಚಾನಲ್‌ನಲ್ಲಿ ಅಡುಗೆ ಸೇರಿದಂತೆ ಬೇರೆ ಬೇರೆ ರೀತಿಯ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. 20 ದಿನದ ಹಿಂದೆಯಷ್ಟೆ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಚಂದನ್ ಪೋಸ್ಟ್ ಮಾಡಿದ್ದರು.
ಕಿರುತೆರೆಯ 'ರಾಜಾ ರಾಣಿ' ಶೋನಲ್ಲಿ ಕೂಡ ಚಂದನ್ ಹಾಗೂ ನಿವೇದಿತಾ ಭಾಗಿ ಆಗಿದ್ದರು. ಇನ್ನು ರ್ಯಾಪ್ ಸಾಂಗ್‌ಗಳನ್ನು ಮಾಡುವ ಮೂಲಕ ಚಂದನ್ ಶೆಟ್ಟಿ ಜನಪ್ರಿಯತೆ ಗಳಿಸಿದ್ದರು. ಟಿಕ್‌ಟಾಕ್, ರೀಲ್ಸ್ ಮಾಡುತ್ತಾ ನಿವೇದಿತಾ ಗೌಡ ಗಮನ ಸೆಳೆದಿದ್ದರು. ಹಾಗಾಗಿ ಇಬ್ಬರೂ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಇನ್ನು ಚಂದನ್ ಕೆಲ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ನಿನ್ನೆ(ಜೂನ್ 6) ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











