ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್
ಲಘು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆ ನೋವು, ಹೊಟ್ಟೆ ನೋವು, ಬೆನ್ನು ನೋವು ಕಾಣಿಸಿಕೊಂಡ ಹಿನ್ನಲೆ ಅರ್ಜುನ್ ಜನ್ಯ ಕಳೆದ ಭಾನುವಾರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅರ್ಜುನ್ ಜನ್ಯ ರವರ ಹೃದಯ 99% ಬ್ಲಾಕ್ ಆಗಿತ್ತು. ಇಂಪೆನ್ಡಿಂಗ್ ಹಾರ್ಟ್ ಅಟ್ಯಾಕ್ ಸ್ಟೇಜ್ ತಲುಪಿದ್ದ ಅರ್ಜುನ್ ಜನ್ಯಗೆ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೈಸೂರಿನ ಆಸ್ಪತ್ರೆ ವೈದ್ಯರು ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಮಾಡಿ, ಹೃದಯಕ್ಕೆ ಸ್ಟೆಂಟ್ ಅಳವಡಿಸಿದ್ದರು.
ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನ್ಯ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಎರಡು ತಿಂಗಳುಗಳ ಕಾಲ ಸಂಪೂರ್ಣ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಜನ್ಯ ರಿಯಾಲಿಟಿ ಶೋ ಮತ್ತು ಸಿನಿಮಾ ಕೆಲಸಗಳಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ವೈದ್ಯರು ''ಅರ್ಜುನ್ ಜನ್ಯ ಹೃದಯ 99% ಬ್ಲಾಕ್ ಆಗಿತ್ತು. ಅದು Impending Heart Attack. ಇನ್ನೇನು 2-4 ಗಂಟೆ ಬಿಟ್ಟಿದ್ದರೆ, ಕೆಟ್ಟ ಪರಿಣಾಮ ಬೀರುತ್ತಿತ್ತು'' ಎಂದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನ್ಯ ಬೇಗ ಗುಣಮುಖರಾಗಲಿ ಎನ್ನುವುದು ಅಭಿಮಾನಿಗಳ ಪ್ರಾರ್ಥನೆ.


Click it and Unblock the Notifications











