ನೂರಾದರೂ ಅರ್ಜುನ್ ಜನ್ಯರ ಈ ಮೂರು ಆಸೆ ಇನ್ನೂ ಈಡೇರಿಲ್ಲ
Recommended Video

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈಗ ನೂರು ಸಿನಿಮಾಗಳ ಸರದಾರ ಆಗಿದ್ದಾರೆ. 12 ವರ್ಷಗಳಲ್ಲಿ 100 ಸಿನಿಮಾ ಮ್ಯೂಸಿಕ್ ನೀಡಿ ಮೈಲಿಗಲ್ಲು ನಿರ್ಮಿಸಿದ್ದಾರೆ.
ಕನ್ನಡದಲ್ಲಿ ಈಗ ಅರ್ಜುನ್ ಜನ್ಯ ನಂಬರ್ 1 ಮ್ಯೂಸಿಕ್ ಡೈರೆಕ್ಟರ್. ಬಹುತೇಕ ಎಲ್ಲ ಸ್ಟಾರ್ ಜೊತೆಗೆ ಕೆಲಸ ಮಾಡಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಸಂಗೀತ ನೀಡಿದ ಎಷ್ಟೋ ಸಿನಿಮಾಗಳು ಗೆದ್ದಿವೆ.
ಇಷ್ಟೆಲ್ಲ ಆದರೂ ಅರ್ಜುನ್ ಜನ್ಯ ಅವರ ಮೂರು ಆಸೆ ಇನ್ನು ಈಡೇರಿಲ್ಲ. ಈ ನಟ ಹಾಗೂ ನಿರ್ದೇಶಕರ ಜೊತೆಗೆ ಕೆಲಸ ಮಾಡಬೇಕೆಂಬ ಅರ್ಜುನ್ ಕನಸು ಹಾಗೆಯೇ ಉಳಿದುಕೊಂಡಿದೆ. ಮುಂದಿದೆ ಓದಿ...

ಪುನೀತ್ ಚಿತ್ರಕ್ಕೆ ಮ್ಯೂಸಿಕ್ ಮಾಡಿಲ್ಲ
ನಟ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಇದುವರೆಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುವ ಅವಕಾಶ ಸಿಕ್ಕಿಲ್ಲ. ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ಯಶ್ ಸೇರಿದಂತೆ ಬಹುತೇಕ ಸ್ಟಾರ್ ಗಳ ಚಿತ್ರಗಳಿಗೆ ಕೆಲಸ ಮಾಡಿರುವ ಅರ್ಜುನ್ ಜನ್ಯ ಪುನೀತ್ ಸಿನಿಮಾಗೆ ಸಂಗೀತ ನೀಡಿಲ್ಲ.

ಅರ್ಜುನ್ ಗೆ ಹಾಡಿದ್ದಾರೆ ಅಪ್ಪು
ಪುನೀತ್ ಸಿನಿಮಾಗೆ ಮ್ಯೂಸಿಕ್ ಮಾಡುವ ಚಾನ್ಸ್ ಸಿಗದೆ ಇದ್ದರೂ, ಅರ್ಜುನ್ ಜನ್ಯ ಸಂಗೀತದಲ್ಲಿ ಅಪ್ಪು ಹಾಡಿದ್ದಾರೆ. ಇಬ್ಬರ ಕಾಂಬಿನೇಶನ್ ನಲ್ಲಿ ಬಂದಿದ್ದ 'ಅಧ್ಯಕ್ಷ' ಸಿನಿಮಾ ಟೈಟಲ್ ಸಾಂಗ್ ಸೂಪರ್ ಹಿಟ್ ಆಗಿತ್ತು. ಬಳಿಕ ಅರ್ಜುನ್ ಅವರ 'ತಿರುಪತಿ ಎಕ್ಸ್ ಪ್ರೆಸ್', 'ರಾಂಬೋ 2' ಸೇರಿದಂತೆ ಕೆಲವು ಹಾಡಿಗೆ ಪುನೀತ್ ಧ್ವನಿಯಾಗಿದ್ದರು.

'ಯೋಗ' ಕೂಡಿ ಬಂದಿಲ್ಲ
ಯೋಗರಾಜ್ ಭಟ್ ಸಾಹಿತ್ಯ ಹಾಗೂ ಅರ್ಜುನ್ ಜನ್ಯ ಸಂಗೀತದಲ್ಲಿ ಅನೇಕ ಹಾಡುಗಳು ಬಂದಿದೆ. ಈ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ಆದರೂ ಕೂಡ ಇದುವರೆಗೆ ಯೋಗರಾಜ್ ಭಟ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿಲ್ಲ. ಏಕೋ, ಆ ಯೋಗ ಇನ್ನೂ ಬಂದಿಲ್ಲ.

ಸೂರಿ ಜೊತೆಗೆ ಸೇರಿಲ್ಲ
ಪರದೆ ಹಿಂದೆ ಕೆಲಸ ಮಾಡಿವ ಅನೇಕ ತಂತ್ರಜ್ಞರಿಗೆ ನಿರ್ದೇಶಕ ಸೂರಿ ಜೊತೆಗೆ ಕೆಲಸ ಸಿನಿಮಾ ಮಾಡುವ ಆಸೆ ಇರುತ್ತದೆ. ಸೂರಿ ಕೂಡ ಒಳ್ಳೆಯ ಪ್ರತಿಭೆಯನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ, ಅರ್ಜುನ್ ಜನ್ಯ ಹಾಗೂ ಸೂರಿ ಕಾಂಬಿನೇಶನ್ ನಲ್ಲಿ ಈವರೆಗೆ ಯಾವ ಸಿನಿಮಾವೂ ಬಂದಿಲ್ಲ.


Click it and Unblock the Notifications











