4 ತಿಂಗಳು ತಡವಾಗಿ '45' ಸಿನಿಮಾ ರಿಲೀಸ್; ಆ ಲಕ್ಕಿ ಡೇಟ್ ಮೇಲೆ ಜನ್ಯಾ ಕಣ್ಣು!

ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಪೋಸ್ಟ್ ಪ್ರೊಡಕ್ಷನ್ ತಡವಾಗಿ ರಿಲೀಸ್ ಡೇಟ್ ಬದಲಿಸುವಂತಾಗಿತ್ತು.

ಸದ್ಯ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. CGI MARZ ತಂಡದೊಂದಿಗೆ VFX ವರ್ಕ್ ನಡೀತಿದೆ. ಈ ಬಗ್ಗೆ ಚಿತ್ರತಂಡವೇ ಇತ್ತೀಚೆಗೆ ಮಾಹಿತಿ ನೀಡಿದೆ. ಸ್ವಲ್ಪ ವಿಳಂಬವಾದರೂ, ಅತ್ಯುತ್ತಮ ತಂತ್ರಜ್ಞಾನ ಮತ್ತು ಅದ್ಭುತ ದೃಶ್ಯಗಳೊಂದಿಗೆ ಸಿನಿಮಾ ತೆರೆಗೆ ಬರುತ್ತದೆ ಎಂದು ಹೇಳಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಿನಿಮಾ ನೋಡಬೇಕು ಎನ್ನುವ ಕುತೂಹಲ ಹುಟ್ಟಾಕ್ಕಿದೆ.

Arjun Janya s Multistarrer 45 Set for Christmas Release with Shivarajkumar Upendra amp amp Raj B Shetty

ಟೈಟಲ್‌ನಿಂದಲೇ '45' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಬಹಳ ವರ್ಷಗಳ ಬಳಿಕ ಶಿವಣ್ಣ ಹಾಗೂ ಉಪ್ಪಿ ಎದುರುಬದಿರಾಗುತ್ತಿದ್ದಾರೆ. ಇನ್ನು ಇವರಿಬ್ಬರ ಜೊತೆ ರಾಜ್ ಬಿ ಶೆಟ್ಟಿ ಕೂಡ ಸೇರಿದ್ದಾರೆ. ಸಂಗೀತ ನಿರ್ದೇಶಕರಾಗಿ ಗೆದ್ದಿರುವ ಅರ್ಜುನ್ ಜನ್ಯಾ ಇದೀಗ ಸಿನಿಮಾ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡ್ತಿದೆ.

ಮೇಕಿಂಗ್ ಹಂತದಲ್ಲೇ '45' ಸಿನಿಮಾ ಬಹಳ ಸದ್ದು ಮಾಡ್ತಿದೆ. ಶಿವಣ್ಣ, ಉಪ್ಪಿ ಲುಕ್ ಕೂಡ ಹುಬ್ಬೇರಿಸುವಂತಿದೆ. 45 ದಿನಗಳಲ್ಲಿ ನಡೆಯುವ ಕಥೆ ಇದು ಎನ್ನುವುದು ಗೊತ್ತಾಗುತ್ತಿದೆ. ಪುರಾಣದ ವಿಚಾರಗಳನ್ನು ಸೇರಿಕೊಂಡು ಜನ್ಯಾ ಬಹಳ ವಿಭಿನ್ನ ಕಥೆ ಮಾಡಿಕೊಂಡಿದ್ದಾರೆ. ತಾವೇ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಆದರೆ ಅದೇ ರಜನಿಕಾಂತ್ ನಟನೆಯ 'ಕೂಲಿ' ಹಾಗೂ ಬಾಲಿವುಡ್ 'ವಾರ್-2' ಚಿತ್ರಗಳು ತೆರೆಗೆ ಬಂದವು. 'ಕೂಲಿ' ಚಿತ್ರದಲ್ಲಿ ಉಪ್ಪಿ ಕೂಡ ನಟಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ '45' ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು.

ಅಕ್ಟೋಬರ್‌ನಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಚಿತ್ರತಂಡದ ಪ್ಲ್ಯಾನ್ ಬೇರೆನೇ ಇದೆ. ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ '45' ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗ್ತಿದೆ. ಡಿಸೆಂಬರ್ ಕೊನೆ ವಾರ ಕನ್ನಡ ಚಿತ್ರರಂಗಕ್ಕೆ ಬಹಳ ಲಕ್ಕಿ. ಕಳೆದೆರಡು ವರ್ಷ 'ಕಾಟೇರ' ಹಾಗೂ 'ಮ್ಯಾಕ್ಸ್' ಚಿತ್ರಗಳು ವರ್ಷದ ಕೊನೆಗೆ ಬಂದು ಗೆದ್ದಿದ್ದವು. ಅದಕ್ಕೂ ಮುನ್ನ 'ಮುಂಗಾರುಮಳೆ', 'ಕಿರಿಕ್ ಪಾರ್ಟಿ' ಹಾಗೂ 'ಮಿ. & ಮಿ. ರಾಮಾಚಾರಿ' ರೀತಿಯ ಬ್ಲಾಕ್‌ಬಸ್ಟರ್ ಚಿತ್ರಗಳು ವರ್ಷದ ಕೊನೆಗೆ ಬಂದಿದ್ದವು.

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಕೂಡ ಡಿಸೆಂಬರ್ 25ಕ್ಕೆ ತೆರೆಗೆ ಬರುತ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಸುದೀಪ್ ತಮ್ಮ ಮುಂದಿನ ಚಿತ್ರವನ್ನು ಕೂಡ ಅದೇ ಸಮಯಕ್ಕೆ ತೆರೆಗೆ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಅದೆಲ್ಲದರ ನಡುವೆ '45' ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಹಾಗಾಗಿ ಅಕ್ಟೋಬರ್‌ನಲ್ಲೇ 'ಡೆವಿಲ್' ದರ್ಶನ ಕೊಟ್ಟರೂ ಕೊಡಬಹುದು.

ಪರಭಾಷೆಯ ಯಾವುದೇ ದೊಡ್ಡ ಸಿನಿಮಾ ಕೂಡ ಡಿಸೆಂಬರ್ ಕೊನೆ ವಾರದಲ್ಲಿ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಆ ವೀಕೆಂಡ್ ಮೇಲೆ ಈಗ ಕನ್ನಡ ಫಿಲ್ಮ್ ಮೇಕರ್ಸ್ ಕಣ್ಣು ಬಿದ್ದಿದೆ. ಯಾರು ತಮ್ಮ ಸಿನಿಮಾವನ್ನು ಡಿಸೆಂಬರ್ 25ಕ್ಕೆ ತೆರೆಗೆ ತಂದು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. '45' ಸಿನಿಮಾ ನೋಡೊಕೆ ಇನ್ನು 4 ತಿಂಗಳು ಕಾಯಬೇಕಾ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.

More from Filmibeat

English summary
Buzz: Arjun Janya’s directorial debut ‘45’, starring Shivarajkumar, Upendra, and Raj B Shetty, is gearing up for a grand pan-India release on December 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X