twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ: ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಜನ್ಯ ಸಮರ

    |

    ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಮ್ಯಾಜಿಕಲ್ ಕಂಪೋಸರ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆ ಕ್ವಾರಂಟೈನ್‌ನಲ್ಲಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.

    Recommended Video

    ಯೂಟ್ಯೂಬ್ ಚಾನೆಲ್ಸ್ ಮೇಲೆ ಸೈಬರ್ ಪೊಲೀಸ್ ಗೆ ಕಂಪ್ಲೇಂಟ್ ಕೊಟ್ಟ ಅರ್ಜುನ್ ಜನ್ಯ | Filmibeat Kannada

    ಆದರೆ, ಅರ್ಜುನ್ ಜನ್ಯ ಅವರ ಆರೋಗ್ಯದ ಕುರಿತು ಕೆಲವು ಯೂಟ್ಯೂಬ್ ಚಾನಲ್‌ಗಳು ಹಾಗೂ ಫೇಸ್‌ಬುಕ್ ಖಾತೆಗಳನ್ನು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿದೆ. ಜನ್ಯ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವಂತೆ ಫೋಟೋಗಳನ್ನು ಎಡಿಟ್ ಮಾಡಲಾಗಿದೆ. ಪತ್ನಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಬಿಂಬಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಮತ್ತು ಸ್ಟೋರಿಗಳು ವೈರಲ್ ಆಗಿವೆ. ಈ ಬಗ್ಗೆ ಅರ್ಜುನ್ ಜನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೈಬರ್ ಕ್ರೈಂ ಗಮನಕ್ಕೂ ತಂದಿದ್ದು ಅಗತ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

    ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತೆ ಆಸ್ಪತ್ರೆಗೆ ದಾಖಲುಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತೆ ಆಸ್ಪತ್ರೆಗೆ ದಾಖಲು

    ಕೊರೊನಾ ಪಾಸಿಟಿವ್ ಬಂದಿದೆ

    ಕೊರೊನಾ ಪಾಸಿಟಿವ್ ಬಂದಿದೆ

    ಅರ್ಜುನ್ ಜನ್ಯ ಅವರಿಗೆ ಏನಾಗಿದೆ ಎಂಬ ಪ್ರಶ್ನೆಗೆ ಖುದ್ದು ಅವರೇ ಸ್ಪಷ್ಟನೆ ನೀಡಿದ್ದಾರೆ. ''ನನಗೆ ಕೋವಿಡ್ ಸೋಂಕು ತಗುಲಿತ್ತು. ವೈದ್ಯರ ಸಲಹೆಯಂತೆ ಈಗ ಮನೆಯಲ್ಲಿಯೇ ಹತ್ತು ದಿನ ಐಸೋಲೇಶನ್‌ನಲ್ಲಿದ್ದೇನೆ. ಇದರಲ್ಲಿ ಆರು ದಿನಗಳು ಪೂರ್ಣಗೊಂಡಿದೆ. ನಾನು ಆರೋಗ್ಯವಾಗಿದ್ದೇನೆ. ಉಳಿದ ನಾಲ್ಕು ದಿನ ಮುಗಿಸಿದ ಬಳಿಕ ನನ್ನ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತೇನೆ'' ಎಂದು ಅಧಿಕೃತವಾಗಿ ಪ್ರಕಟಣೆ ನೀಡಿದ್ದಾರೆ.

    ನನ್ನ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ರವಾನೆ

    ನನ್ನ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ರವಾನೆ

    ''ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಯೂಟ್ಯೂಬ್ ಚಾನಲ್‌ಗಳು ನನ್ನ ಬಗ್ಗೆ, ನನ್ನ ಕುಟುಂಬದ ಪರಿಸ್ಥಿತಿಯ ಬಗ್ಗೆ ಹಾಗೂ ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ಸರಿ ಹೋಗಬಹುದೆಂದು ನಾನು ಸಮಾಧಾನವಾಗಿದ್ದೆ, ಆದರೆ ದಿನೇ ದಿನೇ ಇದು ಹೆಚ್ಚಾಗುತ್ತಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದೇನೆ

    ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದೇನೆ

    ''ಇನ್ನು ಮುಂದಾದರೂ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ. ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲಾ ಸಾಕ್ಷಿಗಳನ್ನು ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದೇನೆ. ದಯವಿಟ್ಟು ನೀವು ಮಾಡಿದ ವಿಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಸಾಧ್ಯವಾದರೆ ಒಳ್ಳೆಯದನ್ನು ಬಯಸಿ ಸಹಕರಿಸಿ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಆಸ್ಪತ್ರೆ ಸೇರಿದ್ದ ಜನ್ಯ

    ಈ ಹಿಂದೆ ಆಸ್ಪತ್ರೆ ಸೇರಿದ್ದ ಜನ್ಯ

    ಕಳೆದ ವರ್ಷ ಅರ್ಜುನ್ ಜನ್ಯ ಅವರು ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯಾಘಾತ ಸಂಭವಿಸಿದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಚೇತರಿಸಿಕೊಂಡಿದ್ದ ಜನ್ಯ ಎಂದಿನಂದೆ ತಮ್ಮ ದೈನಂದಿನ ಕೆಲಸ ಮುಂದುವರಿಸಿದ್ದರು. ಮತ್ತೆ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇಂತಹ ಊಹಾಪೋಹಗಳು ಹಬ್ಬಿವೆ.

    English summary
    Music Director Arjun Janya Slams YouTube Channels for spreading fake news about his health.
    Saturday, April 17, 2021, 8:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X