ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?

ಒಬ್ಬರು ಸೆಂಚುರಿ ಸ್ಟಾರ್. ಮತ್ತೊಬ್ಬರು ರಿಯಲ್ ಸ್ಟಾರ್. ಇವರಿಬ್ಬರು ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಬ್ರೇಕಿಂಗ್ ನ್ಯೂಸ್ ಬಂದಿದೆ. ಈ ಹಿಂದೆ 'ಓಂ' ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಿಸಿದ್ದರು ಉಪೇಂದ್ರ. ಆ ನಂತರ ಇಬ್ಬರೂ 'ಪ್ರೀತ್ಸೇ' ಮತ್ತು 'ಲವ-ಕುಶ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ 3ನೇ ಬಾರಿ ಇಬ್ಬರು ಜೊತೆಯಾಗ್ತಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಿನಿಮಾ ನಿರ್ದೇಶಕರಾಗಿ ಭರ್ತಿ ಪಡೆಯುವ ವಿಚಾರ ಬಹಳ ದಿನಗಳಿಂದ ಕೇಳಿಬರ್ತಿತ್ತು. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ '45' ಎಂಬ ಪ್ಯಾನ್ ಇಂಡಿಯಾ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಆಗಿತ್ತು. ಇದೇ ಚಿತ್ರಕ್ಕೆ ಈಗ ಉಪೇಂದ್ರ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ 'ಗಾಳಿಪಟ- 2 ಸಿನಿಮಾ ನಿರ್ಮಿಸಿ ಸಕ್ಸಸ್ ಕಂಡ ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ಸದ್ಯ '45' ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಡಿಸೆಂಬರ್‌ನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಈ ಸುದ್ದಿ ಕೇಳಿ ಕನ್ನಡ ಸಿನಿರಸಿಕರು ಥ್ರಿಲ್ಲಾಗಿದ್ದು, ಸಿನಿಮಾ ನೋಡಲು ಕಾತರದಿಂದ ಕಾಯುವಂತಾಗಿದೆ.

ಸೂಪರ್ ಮಲ್ಟಿಸ್ಟಾರರ್ ಸಿನಿಮಾ ‘45’

ಸೂಪರ್ ಮಲ್ಟಿಸ್ಟಾರರ್ ಸಿನಿಮಾ ‘45’

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಒಂದೇ ಸಿನಿಮಾದಲ್ಲಿ ನಟಿಸ್ತಿರೋ ವಿಚಾರವೇ ಅಭಿಮಾನಿಗಳು ಸಖತ್ ಕಿಕ್ ಕೊಡ್ತಿದೆ. ಬಹಳ ದಿನಗಳಿಂದ ಉಪೇಂದ್ರ ನಿರ್ದೇಶನದಲ್ಲಿ ಶಿವಣ್ಣ ನಟಿಸಬೇಕು ಎನ್ನುವ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದರು. ಸದ್ಯಕ್ಕೆ ಅದು ಸಾಧ್ಯವಿಲ್ಲದಿದ್ದರೂ '45' ಚಿತ್ರದಲ್ಲಿ ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ನೋಡುವ ಅವಕಾಶ ಸಿಗಲಿದೆ.

ಚಿತ್ರದಲ್ಲಿ ತ್ರಿಮೂರ್ತಿಗಳ ಸಂಗಮ!

ಚಿತ್ರದಲ್ಲಿ ತ್ರಿಮೂರ್ತಿಗಳ ಸಂಗಮ!

ಇನ್ನು ಶಿವಣ್ಣ ಹಾಗೂ ಉಪೇಂದ್ರ ಜೊತೆಗೆ ಮತ್ತೊಬ್ಬ ಸೂಪರ್ ಸ್ಟಾರ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಅದು ಯಾರು ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಸೂಪರ್ ಹಿಟ್ ಸಿನಿಮಾ ಆಲ್ಬಮ್‌ಗಳಿಂದ ಸೆನ್ಸೇಷನ್‌ ಕ್ರಿಯೇಟ್ ಮಾಡಿರುವ ಅರ್ಜುನ್ ಜನ್ಯ ಸಿನಿಮಾ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ‘45’

ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ‘45’

ಸದ್ಯ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ '45' ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಯೂನಿವರ್ಸಲ್ ಸಬ್ಜೆಟ್‌ನ ಈ ಚಿತ್ರದಲ್ಲಿ ಜನ್ಯ ಹೇಳ್ತಿದ್ದು, ಕಥೆ-ಚಿತ್ರಕಥೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಆಡಿಯೋ ರೈಟ್ಸ್‌ಗೆ ಸಖತ್ ಡಿಮ್ಯಾಂಡ್

ಆಡಿಯೋ ರೈಟ್ಸ್‌ಗೆ ಸಖತ್ ಡಿಮ್ಯಾಂಡ್

'45' ಸಿನಿಮಾ ನಿರ್ದೇಶನದ ಜೊತೆಗೆ ಅರ್ಜುನ್ ಜನ್ಯ ಸ್ವತಃ ಸಂಗೀತ ನಿರ್ದೇಶನ ಕೂಡ ಮಾಡ್ತಿದ್ದಾರೆ. ತಮ್ಮದೇ ಸಿನಿಮಾ ಆಗಿರುವುದರಿಂದ ಅದ್ಭುತ ಸಂಗೀತ ನೀಡುವ ಲೆಕ್ಕಾಚಾರ ನಡೀತಿದೆ. ಜೊತೆಗೆ ಶಿವಣ್ಣ, ಉಪೇಂದ್ರರಂತಹ ಸೂಪರ್‌ ಸ್ಟಾರ್‌ಗಳು ಒಟ್ಟಿಗೆ ನಟಿಸ್ತಿದ್ದಾರೆ. ಹಾಗಾಗಿ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಆಡಿಯೋ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.

More from Filmibeat

English summary
Arjun Janya to direct Shivarajkumar and Upendra for his debut directorial. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X