ಅರ್ಜುನ್ ಜನ್ಯ ಅನಾರೋಗ್ಯ: 'ರಾಬರ್ಟ್' ಆಡಿಯೋ ರಿಲೀಸ್ ಗೆ ಸಮಸ್ಯೆ ಆಗಲ್ಲ ಎಂದ ನಿರ್ದೇಶಕ.!
ತೀವ್ರ ಎದೆ ನೋವಿನಿಂದಾಗಿ ಕಳೆದ ಭಾನುವಾರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಅರ್ಜುನ್ ಜನ್ಯಗೆ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಜೊತೆಗೆ ಸ್ಟೆಂಟ್ ಅಳವಡಿಸಲಾಗಿದೆ.
Recommended Video
ಇಂಪೆನ್ಡಿಂಗ್ ಹಾರ್ಟ್ ಅಟ್ಯಾಕ್ ನಿಂದ ಬಳಲಿದ ಅರ್ಜುನ್ ಜನ್ಯ ಸದ್ಯ ಚೇತರಿಸಿಕೊಂಡಿದ್ದಾರೆ. ಸಿಸಿಯು ನಿಂದ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಅರ್ಜುನ್ ಜನ್ಯಗೆ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ.
ಈ ನಡುವೆ, ಅರ್ಜುನ್ ಜನ್ಯ ಅನಾರೋಗ್ಯದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ರಾಬರ್ಟ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವದಂತಿ ಕುರಿತು 'ರಾಬರ್ಟ್' ಚಿತ್ರದ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈಸೂರಿಗೆ ಹೋಗಿ ಅರ್ಜುನ್ ಜನ್ಯ ಆರೋಗ್ಯ ವಿಚಾರಿಸಿ ಬಂದಿರುವ ತರುಣ್ ಸುಧೀರ್, ''ಅರ್ಜುನ್ ಜನ್ಯ ಈಗ ಆರೋಗ್ಯವಾಗಿದ್ದಾರೆ. ಏನೂ ಪ್ರಾಬ್ಲಂ ಇಲ್ಲ. ಇದರಿಂದ 'ರಾಬರ್ಟ್' ಚಿತ್ರದ ಆಡಿಯೋ ರಿಲೀಸ್ ಗೆ ಯಾವುದೇ ತೊಂದರೆ ಆಗಲ್ಲ. ನಾವಿನ್ನೂ 'ರಾಬರ್ಟ್' ಆಡಿಯೋ ಲಾಂಚ್ ಡೇಟ್ ಫಿಕ್ಸ್ ಮಾಡಿಲ್ಲ. ಸದ್ಯದಲ್ಲೇ ಡೇಟ್ ಅನೌನ್ಸ್ ಮಾಡ್ತೀವಿ'' ಅಂತ ಹೇಳಿದ್ದಾರೆ.
ಇನ್ನೂ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ''ರಾಬರ್ಟ್' ಚಿತ್ರದ ಕೆಲಸಗಳು ಮುಗಿದಿವೆ. ಅರ್ಜುನ್ ಜನ್ಯ ತುಂಬಾ ಬೇಗ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರ ಆರೋಗ್ಯ ನೋಡಿಕೊಂಡು ಆಡಿಯೋ ಲಾಂಚ್ ಡೇಟ್ ಫಿಕ್ಸ್ ಮಾಡ್ತೀವಿ'' ಎಂದಿದ್ದಾರೆ.


Click it and Unblock the Notifications











