ಉಪೇಂದ್ರ ಹೊಸ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್
ನಟ ಉಪೇಂದ್ರ ಅವರ ಮುಂದಿನ ಸಿನಿಮಾಗಳ ದೊಡ್ಡ ಪಟ್ಟಿ ಇದೆ. ಈ ಚಿತ್ರಗಳ ಪೈಕಿ ಶಶಾಂಕ್ ನಿರ್ದೇಶನ ಸಿನಿಮಾ ಕೂಡ ಒಂದು.
ಅಂದಹಾಗೆ, ಉಪೇಂದ್ರ ಹಾಗೂ ಶಶಾಂಕ್ ಕಾಂಬಿನೇಶನ್ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುತ್ತಿದ್ದಾರೆ. ಈ ವಿಷಯವನ್ನು ನಿರ್ದೇಶಕ ಶಶಾಂಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಹಾಡುಗಳನ್ನು ಉಪೇಂದ್ರ, ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಬರೆಯಲಿದ್ದಾರೆ. ಶಶಾಂಕ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಬ್ಯಾನರ್ ನ ಎರಡನೇ ಸಿನಿಮಾ ಇದಾಗಿದೆ.

ಈ ಹೊಸ ಸಿನಿಮಾದ ರಾಗ ಸಂಯೋಜನೆ ಶುರುವಾಗಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರಂತೆ. ಈ ಹಿಂದೆ ಉಪೇಂದ್ರ ಅವರ 'ಸೂಪರ್ ರಂಗ' ಹಾಗೂ 'ಕಲ್ಪನಾ 2' ಸಿನಿಮಾಗಳಿಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದರು.
English summary
Arjun Janya will be composing music to Upendra's next movie. The movie is directing by Shashank.


Click it and Unblock the Notifications