For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಪವನ್ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್

  |

  ನಿರ್ದೇಶಕ ಪವನ್ ಒಡೆಯರ್ 'ನಟ ಸಾರ್ವಭೌಮ' ಸಿನಿಮಾದ ನಂತರ ಹೊಸ ಸಿನಿಮಾ ಶುರು ಮಾಡಿದ್ದಾರೆ. ಈ ಸಿನಿಮಾಗೆ 'ರೇಮೊ' ಎಂಬ ಟೈಟಲ್ ಇಡಲಾಗಿದ್ದು, ಇತ್ತೀಚೆಗಷ್ಟೆ ಸ್ಕ್ರಿಪ್ಟ್ ಪೂಜೆ ನಡೆದಿದೆ.

  ಈ ಸಿನಿಮಾದ ಸಂಗೀತ ನಿರ್ದೇಶಕರ ಹೆಸರು ಇದೀಗ ಬಹಿರಂಗವಾಗಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಪವನ್ ಒಡೆಯರ್ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್ ಮಾಡುತ್ತಿದ್ದಾರೆ.

  ಇಶಾನ್, ಆಶಿಕಾ ಕಾಂಬಿನೇಶನ್ 'ರೇಮೊ' ಸಿನಿಮಾ ಶುಭಾರಂಭ ಇಶಾನ್, ಆಶಿಕಾ ಕಾಂಬಿನೇಶನ್ 'ರೇಮೊ' ಸಿನಿಮಾ ಶುಭಾರಂಭ

  ಪವನ್ ನಿರ್ದೇಶನದ ಬಹುತೇಕ ಎಲ್ಲ ಸಿನಿಮಾಗಳ ಹಾಡು ಹಿಟ್ ಆಗಿವೆ. ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಮ್ಯೂಸಿಕ್ ಡೈರೆಕ್ಟರ್ ಗಳ ಜೊತೆ ಕೆಲಸ ಮಾಡುವ ಪವನ್ ಫಸ್ಟ್ ಟೈಮ್ ಅರ್ಜುನ್ ಗೆ ಮಣೆ ಹಾಕಿದ್ದಾರೆ. ಸದ್ಯ, ಸ್ಯಾಂಡಲ್ ವುಡ್ ನಂಬರ್ ಒನ್ ಸಂಗೀತ ನಿರ್ದೇಶಕರಾಗಿರುವ ಅರ್ಜುನ್ ಈ ಚಿತ್ರಕ್ಕೆ ಯಾವ ರೀತಿಯ ಹಾಡುಗಳನ್ನು ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ.

  'ರೇಮೊ' ಇಶಾನ್ ಅಭಿನಯದ ಎರಡನೇ ಸಿನಿಮಾವಾಗಿದೆ. ಇಶಾನ್ ಗೆ ಆಶಿಕಾ ಜೋಡಿಯಾಗಿದ್ದಾರೆ. ಸಿ ಆರ್ ಮನೋಹರ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಮತ್ತೆ ಲವ್ ಸ್ಟೋರಿ ಸಿನಿಮಾವನ್ನು ಪವನ್ ಮಾಡುತ್ತಿದ್ದು, ಚಿತ್ರದ ಮೇಲೆ ಕುತೂಹಲವಿದೆ.

  English summary
  Arjun Janya will be the music director for Actor Ishan and Ashika Ranganath starring 'Raymo' kannada movie. The movie is directing by Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X