ಅರ್ಜುನ್ ಜನ್ಯರ ಮೂರು ಆಸೆಯಲ್ಲಿ ಒಂದು ಆಸೆ ನೆರವೇರಿದೆ
ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ 100 ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. 12 ವರ್ಷಗಳಲ್ಲಿ 100 ಚಿತ್ರಗಳಿಗೆ ಸಂಗೀತ ಸುಧೆ ನೀಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದಾರೆ.
2006ರಲ್ಲಿ 'ಆಟೋಗ್ರಪ್ ಪ್ಲೀಸ್' ಚಿತ್ರದ ಮೂಲಕ ಸಂಗೀತ ಜರ್ನಿ ಆರಂಭಿಸಿದ್ದ ಅರ್ಜುನ್ ಜನ್ಯ, ಈಗ ಗಣೇಶ್ ಅಭಿನಯದ '99' ಚಿತ್ರದ ಮೂಲಕ ಸೆಂಚುರಿ ಬಾರಿಸಿದ್ದಾರೆ.
ಹೀಗೆ, ಕನ್ನಡ ಇಂಡಸ್ಟ್ರಿಯಲ್ಲಿ ಮ್ಯಾಜಿಕ್ ಮಾಡ್ತಿರುವ ಜನ್ಯಗೆ ಮೂರು ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದ್ರೀಗ, ಆ ಮೂವರಲ್ಲಿ ಒಬ್ಬ ಡೈರೆಕ್ಟರ್ ಚಿತ್ರಕ್ಕೆ ಜನ್ಯ ಮ್ಯೂಸಿಕ್ ಮಾಡ್ತಿದ್ದಾರೆ. ಯಾರದು? ಯಾವ ಚಿತ್ರಕ್ಕೆ? ಮುಂದೆ ಓದಿ.....

ಭಟ್ಟರ ಚಿತ್ರಕ್ಕೆ ಜನ್ಯ ಸಂಗೀತ
ಯೋಗರಾಜ್ ಭಟ್ ನಿರ್ದೇಶನದ ಯಾವ ಚಿತ್ರಕ್ಕೂ ಅರ್ಜುನ್ ಜನ್ಯ ಸಂಗೀತ ನೀಡಿರಲಿಲ್ಲ. ಇಬ್ಬರು ಇಷ್ಟು ಸಿನಿಮಾಗಳನ್ನ ಮಾಡಿದ್ರು ಯಾಕೆ ಒಟ್ಟಿಗೆ ಕೆಲಸ ಮಾಡಿಲ್ಲ ಎಂಬ ಕುತೂಹಲ ಸಹಜವಾಗಿ ಕಾಡ್ತಿತ್ತು. ಆದ್ರೀಗ, ಇಬ್ಬರು ಒಟ್ಟಿಗೆ ಕೆಲಸ ಮಾಡುವ ಸಮಯ ಬಂದಿದೆ. ಇಬ್ಬರು ಇಂಡಸ್ಟ್ರಿಗೆ ಬಂದು ವರ್ಷಗಳು ಕಳೆದ್ರು, ಮೊದಲ ಸಲ ಒಂದೇ ಚಿತ್ರದಲ್ಲಿ ಕೆಲಸ ಮಾಡ್ತಿದ್ದಾರೆ.

ಶಶಾಂಕ್-ಭಟ್-ಅರ್ಜುನ್ ಜನ್ಯ
ಶಶಾಂಕ್ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಆಯ್ಕೆಯಾಗಿದ್ದಾರೆ. ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಈ ಚಿತ್ರಕ್ಕೆ ನಾಯಕನಾಗಿದ್ದಾರೆ.

ಪುನೀತ್ ಚಿತ್ರಕ್ಕೆ ಜನ್ಯ ಮ್ಯೂಸಿಕ್ ಮಾಡಿಲ್ಲ
ನಟ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಇದುವರೆಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುವ ಅವಕಾಶ ಸಿಕ್ಕಿಲ್ಲ. ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ಯಶ್ ಸೇರಿದಂತೆ ಬಹುತೇಕ ಸ್ಟಾರ್ ಗಳ ಚಿತ್ರಗಳಿಗೆ ಕೆಲಸ ಮಾಡಿರುವ ಅರ್ಜುನ್ ಜನ್ಯ ಪುನೀತ್ ಸಿನಿಮಾಗೆ ಸಂಗೀತ ನೀಡಿಲ್ಲ.

ಸೂರಿ ಚಿತ್ರದಲ್ಲೂ ಕೆಲಸ ಮಾಡಿಲ್ಲ
ಪರದೆ ಹಿಂದೆ ಕೆಲಸ ಮಾಡಿವ ಅನೇಕ ತಂತ್ರಜ್ಞರಿಗೆ ನಿರ್ದೇಶಕ ಸೂರಿ ಜೊತೆಗೆ ಕೆಲಸ ಸಿನಿಮಾ ಮಾಡುವ ಆಸೆ ಇರುತ್ತದೆ. ಸೂರಿ ಕೂಡ ಒಳ್ಳೆಯ ಪ್ರತಿಭೆಯನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ, ಅರ್ಜುನ್ ಜನ್ಯ ಹಾಗೂ ಸೂರಿ ಕಾಂಬಿನೇಶನ್ ನಲ್ಲಿ ಈವರೆಗೆ ಯಾವ ಸಿನಿಮಾವೂ ಬಂದಿಲ್ಲ.


Click it and Unblock the Notifications











