ಕನ್ನಡಕ್ಕೆ ಬಂದ 'ಅರ್ಜುನ್ ರೆಡ್ಡಿ' ಮ್ಯೂಸಿಕ್ ಡೈರೆಕ್ಟರ್
ಕನ್ನಡಕ್ಕೆ ಬೇರೆ ಬೇರೆ ಭಾಷೆಯ ಸಂಗೀತ ನಿರ್ದೇಶಕರು ಆಗಾಗ ಬಂದು ಹೋಗುವುದು ರೂಡಿ. ದೇವಿಶ್ರೀ ಪ್ರಸಾದ್, ತಮನ್ ರೀತಿ ಇದೀಗ 'ಅರ್ಜುನ್ ರೆಡ್ಡಿ' ಸಂಗೀತ ನಿರ್ದೇಶಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ಸಂಗೀತ ದೊಡ್ಡ ಶಕ್ತಿ ತುಂಬಿತ್ತು. ರಾಧನ್ ಈ ಸಿನಿಮಾಗೆ ಮ್ಯೂಸಿಕ್ ನೀಡಿದ್ದರು. 'ಅರ್ಜುನ್ ರೆಡ್ಡಿ' ಬಳಿಕ ಸೌತ್ ಇಂಡಸ್ಟಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ರಾಧನ್ ಈಗ ಕನ್ನಡಕ್ಕೆ ಬಂದಿದ್ದಾರೆ.
'ಡಿಲ್ಮಾರ್' ಎಂಬ ಸಿನಿಮಾ ಮೂಲಕ ರಾಧನ್ ತಮ್ಮ ಕನ್ನಡದ ಸಿನಿಮಾ ಖಾತೆ ತೆರೆಯುತ್ತಿದ್ದಾರೆ. 'ಕೆಜಿಎಫ್' ಸಿನಿಮಾಗೆ ಡೈಲಾಗ್ ಬರೆದಿದ್ದ, ಚಂದ್ರಮೌಳಿ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಹಿಂದೆ ಅನೇಕ ಸಿನಿಮಾಗಳಿಗೆ ಸಂಭಾಷಣೆ ಹಾಗೂ ನಿರ್ದೇಶಕರ ವಿಭಾಗದಲ್ಲಿ ಕೆಲಸ ಮಾಡಿದ್ದ ಇವರು ಈಗ ಸ್ವಾತಂತ್ರ್ಯ ನಿರ್ದೇಶಕರಾಗಿದ್ದಾರೆ.

ರಾಧನ್ ತೆಲುಗು ಹಾಗೂ ತಮಿಳಿನಲ್ಲಿ ಹಿಟ್ ಹಾಡುಗಳನ್ನು ನೀಡಿದ್ದು, ಈ ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆ ಇದೆ. ಉಳಿದಂತೆ, ಶ್ರೀಕಾಂತ್ (ಕೆಜಿಎಫ್) ಸಂಕಲನ, ವಿಕ್ರಮ್ ಮೊರ್ (ಕೆಜಿಎಫ್) ಸಾಹಸ ನಿರ್ದೇಶನ, ನೃತ್ಯ ನಿರ್ದೇಶನ ಮೋಹನ್ (ಕೆಜಿಎಫ್) ಮಾಡುತ್ತಿದ್ದಾರೆ. 'ದಿ ವಿಲನ್' ಹಾಗೂ 'ಭರಾಟೆ' ಸಿನಿಮಾಗಳ ಛಾಯಾಗ್ರಾಹಕ ಗಿರೀಶ್ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ.

ಹೊಸ ಹುಡುಗ ರಾಮ್ ಚಿತ್ರದ ನಾಯಕನಾಗಿದ್ದಾರೆ. ಹೈದರಾಬಾದ್ ಹುಡುಗಿ ಡಿಂಪಲ್ ಹಯಾತಿ ಚಿತ್ರದ ನಾಯಕಿ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ನಾಳೆ (ಶುಕ್ರವಾರ) ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯುತ್ತಿದೆ.


Click it and Unblock the Notifications











