For Quick Alerts
  ALLOW NOTIFICATIONS  
  For Daily Alerts

  ಮಾಸಿಲ್ಲ ದುಃಖ: ಯಾರ ಮೇಲೆ ಯುದ್ಧಕ್ಕೆ ನಿಂತರು ಅರ್ಜುನ್ ಸರ್ಜಾ

  |

  ತನ್ನ ಕಣ್ಣ ಮುಂದೆ ಬೆಳೆದಂಥಹಾ, ತಾನು ಆಡಿಸಿ ಬೆಳೆಸಿದ ಮಗನಂಥಾ ಅಳಿಯ ಚಿರಂಜೀವಿ ಸರ್ಜಾ ಅಕಾಲ ಮೃತ್ಯುವಿಗೆ ತುತ್ತಾಗಿ ಮೂರು ದಿನಗಳಷ್ಟೆ ಆಗಿದೆ.

  Sudeep might play villain against Mahesh Babu | Filmibeat Kannada

  ಚಿರು ಸರ್ಜಾ ಶವದ ಮುಂದೆ ಕೂತು, 'ಮಾತನಾಡು, ಮಾತನಾಡು' ಎಂದು ಗೋಗರೆದಿದ್ದ ಅರ್ಜುನ್ ಸರ್ಜಾ ದುಃಖವಿನ್ನೂ ಆರಿಲ್ಲ.

  ಚಿರು ಸರ್ಜಾ ನಿಧನದ ಸುದ್ದಿ ತಿಳಿದ ಕೂಡಲೇ ಫೇಸ್‌ಬುಕ್‌ನಲ್ಲಿ ಕಪ್ಪು ಬಣ್ಣದ ಚಿತ್ರ ಪೋಸ್ಟಿಸಿ ದುಃಖ ವ್ಯಕ್ತಪಡಿಸಿದ್ದ ಅರ್ಜುನ್ ಸರ್ಜಾ ಇದೀಗ ಚಿತ್ರವನ್ನು ಬದಲಾಯಿಸಿದ್ದಾರೆ. ಅಲ್ಲಿ ತಮ್ಮದೇ ಚಿತ್ರವನ್ನು ಹಾಕಿದ್ದಾರೆ.

  ಚಿರು ಅಗಲಿಕೆಯ ಬಗ್ಗೆ ಅರ್ಜುನ್ ಸರ್ಜಾ ಮೊದಲ ನೋವಿನ ನುಡಿ

  ಚಿತ್ರ ಬದಲಾಯಿಸಿದ ಅರ್ಜುನ್ ಸರ್ಜಾ

  ಚಿತ್ರ ಬದಲಾಯಿಸಿದ ಅರ್ಜುನ್ ಸರ್ಜಾ

  ಮೂರು ದಿನಗಳ ನಂತರ ಡಿಪಿ ಬದಲಿಸಿರುವ ಅರ್ಜುನ್ ಸರ್ಜಾ ತಮ್ಮದೇ ಚಿತ್ರವನ್ನು ಹಾಕಿಕೊಂಡಿದ್ದಾರೆ. ಆದರೆ ಆ ಚಿತ್ರದಲ್ಲಿ ಅರ್ಜುನ್ ಸರ್ಜಾ ಮುಖದಲ್ಲಿ ಮಡುಗಟ್ಟಿದ ದುಃಖ , ಆಕ್ರೋಶ ಕಾಣುತ್ತಿದೆ.

  ಯಾರ ಮೇಲೆ ಯುದ್ಧಕ್ಕೆ ಹೊರಟರು?

  ಯಾರ ಮೇಲೆ ಯುದ್ಧಕ್ಕೆ ಹೊರಟರು?

  ಯಾರ ಮೇಲೆಯೋ ಜಗಳಕ್ಕೆ ಹೊರಟಿರುವಂತೆ ಮುಷ್ಟಿ ಬಿಗಿ ಹಿಡಿದು ಯುದ್ಧಕ್ಕೆ ತಯಾರಾಗಿದ್ದಾರೆ ಅರ್ಜುನ್ ಸರ್ಜಾ. 55 ವರ್ಷವಾದರೂ ಅವರ ಮೈಕಟ್ಟು ಮಾಸಿಲ್ಲ. ಮೊದಲ ಸಿನಿಮಾದಂತೆಯೇ ಈಗಲೂ ಅವರ ದೇಹಾಕಾರ ಸೆಳೆಯುತ್ತದೆ.

  ಚಿರಂಜೀವಿ & ಅರ್ಜುನ್ ಫ್ಯಾಮಿಲಿಯ ಚಿತ್ರರಂಗದ ನಂಟು

  ಕಾರ್ಯದಲ್ಲಿ ಭಾಗವಹಿಸಿದ್ದರು

  ಕಾರ್ಯದಲ್ಲಿ ಭಾಗವಹಿಸಿದ್ದರು

  ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಸ್ತೆಯ ಮೂಲಕವೇ ಬೆಂಗಳೂರಿಗೆ ಬಂದರು. ರಾತ್ರಿ ಇಲ್ಲಿಗೆ ತಲುಪಿ ರಾತ್ರಿಯೆಲ್ಲಾ ಚಿರು ಶವದ ಮುಂದೆ ದುಃಖದಲ್ಲಿ ಕೂತಿದ್ದ ಅರ್ಜುನ್ ಸರ್ಜಾ, ನಿನ್ನೆ ನಡೆದ ಹಾಲು-ತುಪ್ಪ ಕಾರ್ಯದಲ್ಲೂ ಭಾಗವಹಿಸಿದ್ದರು.

  ಅರ್ಜುನ್ ಸರ್ಜಾ ಗೆ ಸಹಾಯಕನಾಗಿ ಕೆಲಸ ಮಾಡಿದ್ದರು

  ಅರ್ಜುನ್ ಸರ್ಜಾ ಗೆ ಸಹಾಯಕನಾಗಿ ಕೆಲಸ ಮಾಡಿದ್ದರು

  ಅರ್ಜುನ್ ಸರ್ಜಾ ಅಕ್ಕನ ಮಗ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಚಿರಂಜೀವಿ ಸರ್ಜಾ ಸತತ ನಾಲ್ಕು ವರ್ಷ ಅರ್ಜುನ್ ಸರ್ಜಾ ಗೆ ಸಹಾಯಕನಾಗಿ ಕೆಲಸ ಮಾಡಿದ್ದರು. ಚಿರಂಜೀವಿ ಸರ್ಜಾ ರನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದು ಅರ್ಜುನ್ ಸರ್ಜಾ.

  ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ

  English summary
  Actor Arjun Sarja changed his display picture in facebook. He looks angry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X