»   » ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣವಾಯ್ತು 'ಪ್ರೇಮಬರಹ' ರಿವ್ಯೂ

ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣವಾಯ್ತು 'ಪ್ರೇಮಬರಹ' ರಿವ್ಯೂ

Posted By:
Subscribe to Filmibeat Kannada
ಅರ್ಜುನ್ ಸರ್ಜಾ 'ಪ್ರೇಮಬರಹ' ರಿವ್ಯೂ ನೋಡಿ ಬೇಸರಗೊಂಡಿದ್ದೇಕೆ ? | FIlmibeat Kannada

ನಟ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರನ್ನು ಲಾಂಚ್ ಮಾಡಿದ್ದಾರೆ. ಐಶ್ವರ್ಯ ಅರ್ಜುನ್ ಅಭಿನಯದ ಮೊದಲ ಕನ್ನಡ ಸಿನಿಮಾ 'ಪ್ರೇಮ ಬರಹ' ಕಳೆದ ಶುಕ್ರವಾರ ರಿಲೀಸ್ ಆಗಿದೆ. ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖುಷಿ ಒಂದು ಕಡೆ ಇದ್ದರೆ ಅದೇ ರೀತಿ ಅರ್ಜುನ್ ಸರ್ಜಾ ಸದ್ಯ ಬೇಸರವಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ಈ ಕನ್ನಡದ ನಟ ಆಗಾಗ ಕನ್ನಡಕ್ಕೆ ಬಂದು ಇಲ್ಲಿಯ ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸಿನಿಮಾಗಳನ್ನು ತೊರಿಸುತ್ತಾರೆ. ಇಷ್ಟು ದಿನ ತಮ್ಮ ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಸರ್ಜಾ ಅದೇ ರೀತಿ ತಮ್ಮ ಮಗಳಿಗಾಗಿ 'ಪ್ರೇಮ ಬರಹ' ಸಿನಿಮಾ ಮಾಡಿದರು. ಆದರೆ ಈಗ ಈ ಚಿತ್ರಕ್ಕೆ ಬಂದಿರುವ ವಿಮರ್ಶೆಗಳಿಂದ ಅರ್ಜುನ್ ಸರ್ಜಾ ಬೇಸರಗೊಂಡಿದ್ದಾರಂತೆ. ಮುಂದೆ ಓದಿ...

ಒಂದುವರೆ ಎರಡು ಸ್ಟಾರ್ ಬಂದಿದೆ

ಕೆಲವು ಪತ್ರಿಕೆಗಳು ಸೇರಿದಂತೆ ಕೆಲವು ಕಡೆ ಸಿನಿಮಾಗೆ ಅತಿ ಕಡಿಮೆ ಸ್ಟಾರ್ ಗಳನ್ನು ಅಂದರೆ ಒಂದುವರೆ ಎರಡು ಸ್ಟಾರ್ ಗಳನ್ನು ನೀಡಲಾಗಿದೆ. ಜೊತೆಗೆ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿಲ್ಲ ಎನ್ನುವುದು ಅರ್ಜುನ್ ಸರ್ಜಾ ಅವರ ಬೇಸರಕ್ಕೆ ಕಾರಣವಾಗಿದೆ.

ಕಳಪೆ ಸಿನಿಮಾ ಮಾಡಿಲ್ಲ

''ಇಷ್ಟು ವರ್ಷ ಚಿತ್ರರಂಗದಲ್ಲಿ ಅನುಭವ ಇರುವ ನಾನು ಅತಿ ಕಡಿಮೆ ಸ್ಟಾರ್ ಗಳನ್ನು ನೀಡುವ ಅಷ್ಟು ಕೆಳಮಟ್ಟದ ಸಿನಿಮಾ ಮಾಡಿಲ್ಲ ಮುಂದೆ ಮಾಡುವುದು ಇಲ್ಲ'' ಎಂದು ಅರ್ಜುನ್ ಸರ್ಜಾ ಕೆಲವು ಪತ್ರಿಕಾ ಮಿತ್ರರೊಂದಿಗೆ ಹೇಳಿಕೊಂಡಿದ್ದಾರೆ.

ಬಹಿರಂಗವಾಗಿ ಹೇಳಿಲ್ಲ

'ಪ್ರೇಮಬರಹ' ಸಿನಿಮಾದ ವಿಚಾರವಾಗಿ ಇತ್ತೀಚಿಗಷ್ಟೆ ಸುದ್ದಿ ವಾಹಿನಿಯ ಜೊತೆಗೆ ಮಾತನಾಡಿದ ಅವರು ಬಹಿರಂಗವಾಗಿ ವಿಮರ್ಶೆಯ ಕಾರಣ ಹೇಳದಿದ್ದರೂ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಶುಭ್ರ ಪ್ರೇಮಕಥೆ

ಅಂದಹಾಗೆ, 'ಪ್ರೇಮ ಬರಹ' ಸಿನಿಮಾ ಬರೀ ಚಿತ್ರದ ನಾಯಕ ನಾಯಕಿಯ ಪ್ರೇಮಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಲ್ಲಿ ತಂದೆ, ತಾಯಿಯ ಪ್ರೇಮ, ಅಜ್ಜನ ಪ್ರೇಮ, ಎಲ್ಲದಕ್ಕಿಂತ ಹೆಚ್ಚಾಗಿ ಯೋಧರ ದೇಶಪ್ರೇಮ ಸಿನಿಮಾದಲ್ಲಿ ಇದೆ. 'ಪ್ರೇಮಬರಹ' ಒಂದು ಶುಭ್ರ ಪ್ರೇಮಕಥೆಯ ಸಿನಿಮಾವಾಗಿದೆ. ಡಬ್ಬಲ್ ಮೀನಿಂಗ್... ಐಟಂ ಸಾಂಗ್... ಈ ರೀತಿಯ ಯಾವುದು ಕಿರಿಕಿರಿ ಸಿನಿಮಾದಲ್ಲಿ ಇಲ್ಲ. ಪ್ರೇಮಿಗಳ ದಿನಕ್ಕೆ ಅರ್ಜುನ್ ಸರ್ಜಾ ಕುಟುಂಬದಿಂದ ಬಂದಿರುವ ಒಂದು ಸುಂದರ ಕಾಣಿಕೆ ಇದು.

ಐಶ್ವರ್ಯ ನಟನೆ ಸೂಪರ್

'ಪ್ರೇಮ ಬರಹ' ಸಿನಿಮಾ 1999ರಲ್ಲಿ ಕಾರ್ಗಿಲ್ ಯುದ್ಧದ ಹಿನ್ನಲೆಯಲ್ಲಿ ನಡೆಯುವ ಕಥೆಯಾಗಿದೆ. ನಟಿ ಐಶ್ವರ್ಯ ಅವರ ಲವಲವಿಕೆ ತುಂಬ ಇಷ್ಟ ಆಗುತ್ತದೆ. ಕೆಲವು ಭಾವನಾತ್ಮಕ ದೃಶ್ಯಗಳನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಐಶ್ವರ್ಯ ಡ್ಯಾನ್ಸ್ ಸೂಪರ್.

English summary
Actor Arjun Sarja disappointed over Prema Baraha kannada movie reviews. Arjun Sarja daughter Aishwarya Arjun and Chandan starring 'Prema Baraha' kannada movie is commercial family entertainer and the story is about two journalists.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada