ಮೆಚ್ಚಿನ ಹುಡುಗ ಚಿರು ಸರ್ಜಾ ಗೆ ದುಃಖದ ಶ್ರದ್ಧಾಂಜಲಿ ಸಲ್ಲಿಸಿದ ಅರ್ಜುನ್ ಸರ್ಜಾ

ನಟ ಅರ್ಜುನ್ ಸರ್ಜಾ ಮೆಚ್ಚಿನ ಹುಡುಗರು ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಅರ್ಜುನ್ ಸರ್ಜಾ ಅವರ ತಂಗಿಯ ಮಕ್ಕಳಾದ ಈ ಇಬ್ಬರ ಬಗ್ಗೆ ವಿಶೇಷ ಪ್ರೀತಿ ಅರ್ಜುನ್ ಸರ್ಜಾಗೆ.

Recommended Video

ಚಿರು ಸರ್ಜಾ ಅಂತಿಮ ಯಾತ್ರೆ ಹೇಗಿತ್ತು ನೋಡಿ | Chiranjeevi Sarja | FILMIBEAT KANNADA

ಆದರೆ ತಮ್ಮ ಪ್ರೀತಿಯ ಹುಡುಗ ಚಿರಂಜೀವಿ ಸರ್ಜಾ ಪ್ರಾಣ ಬಿಟ್ಟಿದ್ದಾರೆ. ಸಾಯಬಾರದ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದಾರೆ.

ತಮ್ಮ ನೆಚ್ಚಿನ ಹುಡುಗ ನಿಧನ ಹೊಂದಿದ್ದಕ್ಕೆ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ತಮ್ಮ ಚಿತ್ರವನ್ನು ಬದಲಾಯಿಸಿದ್ದಾರೆ ಅರ್ಜುನ್ ಸರ್ಜಾ.

ಅರ್ಜುನ್ ಸರ್ಜಾ ಅವರು ಫೇಸ್‌ಬುಕ್‌ನ ತಮ್ಮ ಅಧಿಕೃತ ಖಾತೆಗೆ ಕಪ್ಪು ಬಣ್ಣವನ್ನು ಡಿಪಿ ಆಗಿ ಬದಲಾಯಿಸಿದ್ದಾರೆ. ಆ ಮೂಲಕ ತಮ್ಮ ಶೋಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಸರ್ಜಾ ಗೆ ಸಹಾಕರಾಗಿದ್ದರು ಚಿರು

ಅರ್ಜುನ್ ಸರ್ಜಾ ಗೆ ಸಹಾಕರಾಗಿದ್ದರು ಚಿರು

ಚಿರಂಜೀವಿ ಸರ್ಜಾ ತಮ್ಮ ಶಿಕ್ಷಣ ಮುಗಿದ ಬಳಿಕ ನಾಲ್ಕು ವರ್ಷಗಳ ಕಾಲ ಅರ್ಜುನ್ ಸರ್ಜಾ ಅವರಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅರ್ಜುನ್ ಸರ್ಜಾ ಅವರು ನಿರ್ದೇಶಿಸಿದ ಹಲವು ಸಿನಿಮಾಗಳಿಗೆ ಸಹಾಯಕರಾಗಿದ್ದರು ಅವರು.

ಪ್ರೇಮ ಬರಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು

ಪ್ರೇಮ ಬರಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು

ಅರ್ಜುನ್ ಸರ್ಜಾ ಕೊನೆಯದಾಗಿ 2018 ರಲ್ಲಿ ನಿರ್ದೇಶಿಸಿದ್ದ 'ಪ್ರೇಮ ಬರಹ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಧ್ರುವ ಸರ್ಜಾ ಸಹ ಆ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಶ್ರುತಿ ಹರಿಹರನ್ ವಿವಾದದ ಸಂದರ್ಭ ಬೆಂಬಲ

ಶ್ರುತಿ ಹರಿಹರನ್ ವಿವಾದದ ಸಂದರ್ಭ ಬೆಂಬಲ

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದಾಗ ಸಹ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ನಿಂತು, ಶ್ರುತಿ ಹರಿಹರನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.

ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ

ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ

ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿಂದ ಹೊರಟಿದ್ದು, ಜೂನ್ 7 ರ ರಾತ್ರಿಯೇ ಬೆಂಗಳೂರು ತಲುಪಲಿದ್ದಾರೆ. ಚಿರು ಅವರ ಅಜ್ಜಿಯೂ ಬೆಂಗಳೂರಿಗೆ ಬರಬೇಕಾಗಿದೆ.

ತುಮಕೂರಿನಲ್ಲಿ ಅಂತ್ಯಕ್ರಿಯೆ

ತುಮಕೂರಿನಲ್ಲಿ ಅಂತ್ಯಕ್ರಿಯೆ

ಅರ್ಜುನ್ ಸರ್ಜಾ ಹಾಗೂ ಚಿರು ಅವರ ಅಜ್ಜಿ ಬಂದ ಬಳಿಕ ಸೋಮವಾರ ಬೆಳಿಗ್ಗೆ 11 ಗಂಟೆಗೆ ತುಮಕೂರಿನ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇಲ್ಲಿಯೇ ಚಿರು ತಾತ ಶಕ್ತಿಪ್ರಸಾದ್ ಅವರ ಅಂತ್ಯಸಂಸ್ಕಾರ ಸಹ ಆಗಿದೆ.

More from Filmibeat

English summary
Actor Arjun Sarja express express is sorrow on Chirajeevi Sarja's death in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X