20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಮಗು ನೋಡಲು ಚೆನ್ನೈನಿಂದ ನಟ ಅರ್ಜುನ್ ಸರ್ಜಾ ಇಂದು ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಮಗು ನೋಡಿದ ಬಳಿಕ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡರು.

Recommended Video

Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ

''20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಹರ್ಷಗೊಂಡರು.

''ನಾಲ್ಕೈದು ತಿಂಗಳ ಹಿಂದೆ ನಮ್ಮ ಕುಟುಂಬದಲ್ಲಿ ದೊಡ್ಡ ಅನಾಹುತ ಆಗಿತ್ತು. ಆ ನೋವಿನಲ್ಲಿದ್ದ ನಮ್ಮ ಮನೆಯಲ್ಲಿ ಈಗ ಸಂಭ್ರಮ ಹುಟ್ಟಿದೆ. ಮಗು ಹುಟ್ಟಿದೆ ಎನ್ನುವುದಕ್ಕಿಂತ ಪ್ರತಿಯೊಬ್ಬರಲ್ಲೂ ಸಂತೋಷ ಹುಟ್ಟಿದೆ ಎಂದು ಹೇಳಬಹುದು, ಈ ಸಂತಸ ನೋಡಲು ಚಿರು ಇಲ್ಲ ಎಂಬ ದುಃಖ ಇದೆ'' ಎಂದರು.

Arjun Sarja Expressed Happy About Chiru Sarja Son

''ದೇವರೇ ಇಲ್ಲ ಎಂದು ಪೂಜೆ ಮಾಡಬಾರದು ಎನ್ನುವ ಪರಿಸ್ಥಿತಿಗೆ ನಾವು ಹೋಗಿದ್ವಿ. ಆದರೆ, ದೇವರು ಇದ್ದಾನೆ ಎನ್ನುವುದದು ಸಾಬೀತಾಗಿದೆ. ಮಗುವಿನ ಜಾತಕ ಬಹಳ ವಿಶೇಷವಾಗಿದೆ. ನಮಗೆ ಜೂನಿಯರ್ ಚಿರು ಬರ್ತಾನೆ ಅಂತ ಅನಿಸುತ್ತಿತ್ತು. ತುಂಬಾ ಸಂತೋಷ. ಚಿರುನೇ ಬಂದು ಬಿಟ್ಟ'' ಎಂದು ಖುಷಿಯಾದರು.

''ಮೂವತ್ತಾರು ವರ್ಷದ ಹಿಂದೆ ಚಿರು ಹುಟ್ಟಿದಾಗಲೂ ನಾನು ಚೆನ್ನೈನಲ್ಲಿದೆ. ಈಗ ಅವನ ಮಗು ಹುಟ್ಟಿದೆ. ಬಹುಶಃ 20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಅರ್ಜುನ್ ಸರ್ಜಾ ಹೇಳಿದರು.

ಅಕ್ಟೋಬರ್ 22 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರು.

More from Filmibeat

English summary
Kannada actor Arjun Sarja expressed happy about chiranjeevi sarja-meghana raj's Son.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X