ಅರ್ಜುನ್ ಸರ್ಜಾ ರಾಜಿ ಆಗಲ್ಲ: ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು.!
ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಅಭಿಯಾನ ತಾರಕಕ್ಕೇರಿದೆ. 'ಜೆಂಟಲ್ ಮ್ಯಾನ್' ಎಂದೇ ಗುರುತಿಸಿಕೊಂಡಿರುವ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಈ ವಿವಾದ ಜೋರಾಗಿರುವ ಕಾರಣ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಸಭೆಯಲ್ಲಿ ಹಾಜರ್ ಆಗಲಿದ್ದಾರೆ.
ಸಭೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ-ಸಂಧಾನ ಮಾಡಿಕೊಳ್ಳದೇ ಇರಲು ಅರ್ಜುನ್ ಸರ್ಜಾ ತೀರ್ಮಾನ ಮಾಡಿದ್ದಾರೆ. ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಿರುವ ಕಾರಣ, ನಟಿ ಶ್ರುತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಮುಂದೆ ಓದಿರಿ...

5 ಕೋಟಿ ಮಾನನಷ್ಟ ಮೊಕದ್ದಮೆ
ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ ಅರ್ಜುನ್ ಸರ್ಜಾ. ಸಿವಿಲ್ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದ್ದು, ಇಂದು ಸಂಜೆ ಅಥವಾ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ.

ಬೆಂಗಳೂರಿಗೆ ಬರುತ್ತಿರುವ ಅರ್ಜುನ್ ಸರ್ಜಾ
ಇಂದು ಸಂಜೆ 4 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಇದೆ. ಅದರಲ್ಲಿ ಪಾಲ್ಗೊಳ್ಳಲು ಅರ್ಜುನ್ ಸರ್ಜಾ ಬೆಂಗಳೂರಿಗೆ ಬರುತ್ತಿದ್ದಾರೆ. ಈಗಾಗಲೇ ಚೆನ್ನೈನಿಂದ ಅವರು ಹೊರಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ.

ಸೈಬರ್ ಕ್ರೈಂಗೆ ದೂರು
ತಮ್ಮ ಈಮೇಲ್ ಹಾಗೂ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ದೂರು ಕೊಟ್ಟಿದ್ದಾರೆ.

2 ಕೋಟಿ ಡಿಮ್ಯಾಂಡ್
ಶ್ರುತಿ ಹರಿಹರನ್ ಆಪ್ತ ಎಂದು ಹೇಳಿಕೊಂಡು ಅನಾಮಿಕನೊಬ್ಬ ಅರ್ಜುನ್ ಸರ್ಜಾ ಆಪ್ತರಿಗೆ ಕರೆ ಮಾಡಿ ರಾಜಿ-ಸಂಧಾನ ಮಾಡಿಕೊಳ್ಳಲು 2 ಕೋಟಿ ಡಿಮ್ಯಾಂಡ್ ಇಟ್ಟಿದ್ದನಂತೆ.


Click it and Unblock the Notifications











