#ಮೀಟೂ ಆರೋಪ: ಹೈಕೋರ್ಟ್ ಮೊರೆ ಹೋದ ಅರ್ಜುನ್ ಸರ್ಜಾ

ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಗಲಾಟೆ ತಾರಕಕ್ಕೇರಿದೆ. ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಅತ್ತ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರೆ, ಇತ್ತ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಶ್ರುತಿ ಹರಿಹರನ್ ಕೊಟ್ಟಿರುವ ದೂರಿನ ಅನ್ವಯ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದಾರೆ.

Arjun Sarja files writ petition asking High Court to quash FIR against him

ತಮ್ಮ ವಿರುದ್ಧ ದಾಖಲು ಮಾಡಿರುವ ಎಫ್.ಐ.ಆರ್ ರದ್ದು ಕೋರಿ ನಟ ಅರ್ಜುನ್ ಸರ್ಜಾ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಫೇಸ್ ಬುಕ್ ನಲ್ಲಿ ನಟಿ ಶ್ರುತಿ ಹರಿಹರನ್ ಮಾಡಿದ ಆರೋಪಕ್ಕೂ, ಪೊಲೀಸರಿಗೆ ಕೊಟ್ಟಿರುವ ದೂರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಎಲ್ಲವೂ ಕಪೋಲ ಕಲ್ಪಿತ ಅಂಶಗಳಾಗಿದ್ದು, ತಮ್ಮ ಇಮೇಜ್ ಡ್ಯಾಮೇಜ್ ಮಾಡುವ ದೃಷ್ಟಿಯಿಂದ ಇಷ್ಟೆಲ್ಲಾ ಮಾಡಲಾಗಿದೆ. ಹೀಗಾಗಿ, ಎಫ್.ಐ.ಆರ್ ರದ್ದು ಮಾಡಿ ಎಂದು ಕೋರಿ ಹೈಕೋರ್ಟ್ ಗೆ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ.

ಈ ಕುರಿತು ನಾಳೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಅರ್ಜುನ್ ಸರ್ಜಾ ಪರವಾಗಿ ಹೈಕೋರ್ಟ್ ನಲ್ಲಿ ಬಿ.ವಿ.ಆಚಾರ್ಯ ವಾದ ಮಂಡಿಸಲಿದ್ದಾರೆ.

More from Filmibeat

English summary
Arjun Sarja files writ petition asking High Court to quash FIR against him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X