twitter
    For Quick Alerts
    ALLOW NOTIFICATIONS  
    For Daily Alerts

    ಅತ್ಯಾಚಾರಿಗಳ ಮೂಳೆ ಮುರೀತೀನಿ: ಅರ್ಜುನ್ ಸರ್ಜಾ

    By Harshitha
    |

    ದಿನ ಬೆಳಗಾದ್ರೆ ಒಂದಲ್ಲೊಂದು ಅತ್ಯಾಚಾರ ಪ್ರಕರಣಗಳು ದೇಶವ್ಯಾಪಿ ವರದಿಯಾಗುತ್ತಲೇ ಇವೆ. ವಿದ್ಯೆಯನ್ನ ಬೋಧಿಸೋ ಶಿಕ್ಷಣ ಸಂಸ್ಥೆಗಳಲ್ಲೇ ಇಂತಹ ನೀಚ ಕೃತ್ಯಗಳು ನಡೆಯುತ್ತಿರುವುದು ದುರಂತವೇ ಸರಿ. ಶಿಕ್ಷಣ ಸಂಸ್ಥೆಗಳ ಇಂತಹ ದುರ್ಗತಿ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲವಾಗ್ತಿರೋ ಶಿಕ್ಷಣ ವ್ಯವಸ್ಥೆ ಕುರಿತಾಗೇ ವರ್ಷಗಳ ಕಾಲ ಅಧ್ಯಯನ ಮಾಡಿ ನಟ ಅರ್ಜುನ್ ಸರ್ಜಾ 'ಅಭಿಮನ್ಯು' ಚಿತ್ರವನ್ನ ನಿರ್ದೇಶಿಸಿದ್ದಾರೆ.

    ನಾಳಿನ ಪ್ರಜೆಗಳಾಗೋ ಮಕ್ಕಳ ಶಿಕ್ಷಣಕ್ಕಾಗಿ ಹೋರಾಡೋ ಪ್ರತಿನಿಧಿಯಾಗಿ ಅರ್ಜುನ್ ಸರ್ಜಾ 'ಅಭಿಮನ್ಯು' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಲ್ ನಲ್ಲಿ ಮಕ್ಕಳಿಗಾಗಿ ಹೋರಾಡೋ ಅರ್ಜುನ್, ರಿಯಲ್ ನಲ್ಲೂ ಅತ್ಯಾಚಾರ ಪ್ರಕರಣಗಳ ವಿರುದ್ಧ ಕೆಂಡಕಾರಿದ್ದಾರೆ.

    Arjun sarja is ready to break the bones of rapists

    'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಅರ್ಜುನ್ ಸರ್ಜಾ, ''ಅತ್ಯಾಚಾರ ಪ್ರಕರಣಗಳ ಸುದ್ದಿ ಕೇಳಿದ್ರೆ ನನಗೆ ಕೆಂಡದಷ್ಟು ಕೋಪ ಬರುತ್ತೆ. 4-5 ವರ್ಷದ ಪುಟ್ಟ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗ್ತಿರುವುದು ತುಂಬಾ ದುಃಖದ ಸಂಗತಿ. ಅಂತಹ ಕೃತ್ಯ ಎಸಗುವ ನೀಚರು ನನ್ನ ಕೈಗೆ ಸಿಕ್ಕರೆ, ಅವ್ರ ಮೈ ಮೂಳೆ ಮುರಿದು ಹಾಕ್ತೀನಿ'' ಅಂತ ತಮ್ಮ ಸಿಟ್ಟನ್ನು ಹೊರಹಾಕಿದರು.

    ''ಒಬ್ಬ ವ್ಯಕ್ತಿಯಿಂದ ಇಂತಹ ಪ್ರಕರಣಗಳು ನಿಲ್ಲೋದು ಸಾಧ್ಯವಿಲ್ಲ. ಕಾನೂನು ಪರಿಣಾಮಕಾರಿಯಾಗಿರಬೇಕು. ಅರಬ್ ದೇಶಗಳಲ್ಲಿರುವಂತೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದ್ರೆ ಭಾರತದಲ್ಲಿ ಅಂತ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ'' ಅಂತ ಅರ್ಜುನ್ ಸರ್ಜಾ ಬೇಸರ ವ್ಯಕ್ತಪಡಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

    English summary
    Since his movie Abhimanyu is based on the education system and children's rights, Action King Arjun sarja has reacted exclusively to Filmibeat Kannada on the increase in the rape cases. Arjun sarja is ready to break the bones of the rapists and says the only way to reduce such cases is through strict enforcement of law.
    Thursday, November 6, 2014, 19:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X