ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ
Recommended Video

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿರೋದು ಈಗ ಸ್ಯಾಂಡಲ್ ವುಡ್ ಗೆ ಆಘಾತ ತಂದಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲವು ನಟಿಯರು ಶ್ರುತಿ ಪರವಾಗಿ ನಿಂತಿದ್ದಾರೆ. ಮತ್ತೆ ಕೆಲವರು ಅರ್ಜುನ್ ಸರ್ಜಾ ಪರವಾಗಿ ಬೆಂಬಲ ಸೂಚಿಸಿದ್ದಾರೆ.
ಈ ಮಧ್ಯೆ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್, ಅತ್ತೆ, ಧ್ರುವ ಸರ್ಜಾ, ಪವನ್ ತೇಜಾ, ಮಗಳು ಐಶ್ವರ್ಯ ಸರ್ಜಾ ಎಲ್ಲರೂ ಶ್ರುತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ, ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿ ದೇವಮ್ಮ ಅವರು ಮಾತನಾಡಿದ್ದು, ಶ್ರುತಿ ಬಗ್ಗೆ ಕೆಂಡಕಾರಿದ್ದಾರೆ. ಯಾರೇ ಅವರನ್ನ ಬಿಟ್ಟರೂ ನಾನಂತೂ ಬಿಡಲ್ಲ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಮಗ ಇಲ್ಲದೇ ಇದ್ದಾಗ, ನಮ್ಮ ಮನೆ ಬಳಿ ಒಮ್ಮೆ ಬಂದಿದ್ದರು. ಯಾಕೆ.? ಎಂದು ಪ್ರಶ್ನಿಸಿದ್ದಾರೆ.? ಮುಂದೆ ಓದಿ.....

ಶ್ರುತಿ ಮಾತಿನಲ್ಲಿ ಸತ್ಯವಿಲ್ಲ
'ಎರಡು ವರ್ಷದ ಹಿಂದೆ ಆಗಿದ್ದ ಘಟನೆ ಈಗ ಯಾಕೆ ಹೇಳುತ್ತಿದ್ದಾರೆ. ಎರಡು ವರ್ಷದಿಂದ ಏನೋ ಪ್ಲಾನ್ ಮಾಡಿದ್ದರು. ಅದು ಆಗಿಲ್ಲ ಅಂತ, ಈಗ ನನ್ನ ಮಗನ ಮೇಲೆ ಈ ರೀತಿ ಆರೋಪ ಮಾಡ್ತಿದ್ದಾಳೆ. ಆಕೆಯದ್ದು ಅದೇ ವೃತ್ತಿ. ಕಿರುಕುಳ ಎಲ್ಲಾ ಕಡೆಯೂ ಇದೆ. ಸಣ್ಣಪುಟ್ಟ ಸಮಸ್ಯೆ ಇರುತ್ತೆ. ಆದ್ರೆ, ಇದನ್ನ ಆಗ ಮುಚ್ಚಿಟ್ಟು ಈಗ ಹೇಳ್ತಿರುವುದೇಕೆ.?' ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶ್ ರೈ ಯಾಕೆ ಬರಬೇಕು.?
'ಪ್ರಕಾಶ್ ರೈ ಜೀವನದಲ್ಲೇ ಯಾವುದೂ ಸರಿಯಿಲ್ಲ. ಮೂರ್ನಾಲ್ಕು ಪತ್ನಿಯರ ಬಿಟ್ಟಿದ್ದಾರೆ. ಅಂತಹ ವ್ಯಕ್ತಿ ನನ್ನ ಮಗನ ಮೇಲೆ ಆರೋಪ ಮಾಡ್ತಿದ್ದಾರೆ. ಮೊದಲು ಅವರ ವ್ಯಕ್ತಿತ್ವ ನೋಡಿಕೊಳ್ಳಲಿ' ಎಂದು ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ. ಅರ್ಜುನ್ ಸರ್ಜಾ ಅವರು ಶ್ರುತಿ ಬಳಿ ಕ್ಷಮೆ ಕೇಳಲಿ' ಎಂದಿದ್ದರು.

ನಾನು ಸಪೋರ್ಟ್ ಮಾಡ್ತೀನಿ
'ಶ್ರುತಿ ಹರಿಹರನ್ ಅವರ ಜೊತೆ ಬೇರೆ ಯಾರೋ ಇದ್ದಾರೆ. ಯಾರೂ ಉದ್ದಾರ ಆಗಲ್ಲ. ಸರ್ವನಾಶ ಆಗ್ತಾರೆ. ನಟ ಚೇತನ್, ಪ್ರಕಾಶ್ ರೈ ಯಾಕೆ ಬರ್ತಾರೆ. ಅದು ಸತ್ಯವಿದ್ರೆ ಹೆಣ್ಣಿಗೆ ನಾನು ಸಪೋರ್ಟ್ ಮಾಡ್ತೇನೆ. ಸಿನಿಮಾರಂಗದಲ್ಲಿ ಸಣ್ಣಪುಟ್ಟ ತಪ್ಪುಗಳಾಗುತ್ತೆ. ಇಂತಹ ಹೆಣ್ಣು ಮಕ್ಕಳಿಗೆ ನಾನು ಬೆಂಬಲ ಕೊಡಲ್ಲ' ಎಂದು ತಿರುಗೇಟು ನೀಡಿದ್ದಾರೆ.

ನನ್ನ ಮಗ ಕ್ಷಮೆ ಕೇಳಲ್ಲ
'ಯಾವುದೇ ಕಾರಣಕ್ಕೂ ನನ್ನ ಮಗ ಕ್ಷಮೆ ಕೇಳಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಒಂದೇ. ನನ್ನ ಮಗನ ಮರ್ಯಾದೆ ಕಳೆದಿದ್ದಾಳೆ. ಯಾರೇ ಅವರನ್ನ ಬಿಟ್ಟರೂ ನಾನಂತೂ ಬಿಡಲ್ಲ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು' ಎಂದಿದ್ದಾರೆ.

ಅವಳಿಗೆ ಕೆಟ್ಟ ಸ್ಪರ್ಶ ಗೊತ್ತಿದೆ
'ಪಕ್ಕಾ ಅನುಭವವಾಗಿರುವುದರಿಂದ ಕೆಟ್ಟ ಸ್ಪರ್ಶ ಯಾವುದು, ಒಳ್ಳೆಯ ಸ್ಪರ್ಶ ಯಾವುದು ಅಂತ ಗೊತ್ತಿದೆ. ನನ್ನ ಮಗ ಡೈರೆಕ್ಟರ್, ನಿಮಾರ್ಪಕ. ಚೆನ್ನಾಗಿ ಬಂದಿಲ್ಲ ಅಂದ್ರೆ ಹೇಳಿಕೊಡ್ತಾನೆ. ಅದು ಅವನ ಕರ್ತವ್ಯ. ಅದನ್ನ ಹೀಗೆ ತಪ್ಪು ಅಂದ್ರೆ ಸರಿನಾ' ಎಂದು ಕಿಡಿಕಾರಿದ್ದಾರೆ.

ಆ ದಿನ ನಮ್ಮ ಮನೆಗೆ ಯಾಕೆ ಬಂದಿದ್ಲು.?
'ಆಗ ಸಿನಿಮಾ ಮುಗಿದಿತ್ತು. ಅರ್ಜುನ್ ಸರ್ಜಾ ಮದ್ರಾಸ್ ಗೆ ಹೋಗಿದ್ದರು. ಅದೊಂದು ದಿನ ಶ್ರುತಿ ಆಟೋದಲ್ಲಿ ನಮ್ಮ ಮನೆಗೆ ಬಂದಿದ್ದರು. ನಾನು ಬಾಗಿಲಿನಲ್ಲಿ ನಿಂತಿದ್ದೆ. ಅರ್ಜುನ್ ಸರ್ಜಾ ಸರ್ ಇದ್ದರಾ ಅಂದ್ರು. ಇಲ್ಲ, ನೀವು ಯಾರಮ್ಮ ಅಂದೆ. ನನಗೆ ಪರಿಚಯ ಇರಲಿಲ್ಲ. ನನ್ನ ಹೆಸರು ಶ್ರುತಿ ಹರಿಹರನ್, ನಾನು ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿದ್ದೀನಿ. ಇಲ್ಲಮ್ಮಾ, ಮದ್ರಾಸ್ ಗೆ ಹೋಗಿದ್ದಾರೆ ಅಂದೆ. ಆ ದಿನ ನಮ್ಮ ಮನೆಗೆ ಯಾಕೆ ಬಂದ್ಲು. ಬಂದಿಲ್ಲ ಅಂತಾ ನನ್ನ ಮುಂದೆ ಬಂದು ಆಕೆ ಹೇಳಲಿ' ಎಂದು ಬಾಂಬ್ ಸಿಡಿಸಿದ್ದಾರೆ.


Click it and Unblock the Notifications











